ಭಾಗ 1 - ರಾಜ್ಯಗಳ ಸಂಘ ಭಾರತ
ಭಾಗ 1 - ರಾಜ್ಯಗಳ ಸಂಘ ಭಾರತ
ಭಾರತದ ಏಕೀಕರಣ
ಭಾರತವು ಸ್ವತಂತ್ರವಾದಾಗ ಒಟ್ಟು 562 ದೇಶೀಯ
ಸಂಸ್ಥಾನಗಳಿದ್ದವು. ಸರ್ದಾರ್ ವಲ್ಲಭಬಾಯಿ ಪಟೇಲ್‍ರು ದೇಶೀಯ ಸಂಸ್ಥಾನಗಳನ್ನು ಭಾರತದ
ಒಕ್ಕೂಟಕ್ಕೆ ಸೇರಿಸಿದರು ಹೀಗೆ ಒಕ್ಕೂಟಕ್ಕೆ ಸೇರಿದ ಮೊದಲ ಸಂಸ್ಥಾನ ಕೊಚ್ಚಿ. ಆದರೆ ಜುನಾಗಡ, ಹೈದರಾಬಾದ್ ಮತ್ತು
ಕಾಶ್ಮೀರ ಸಂಸ್ಥಾನಗಳು ಭಾರತಕ್ಕೆ ಸೇರಲು ನಿರಾಕರಿಸಿದವು.
ಹೈದರಾಬಾದ್ ನಿಜಾಮ ಒಸ್ಮಾನ್
ಅಲಿಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದಾಗ ಆಪರೇಷನ್ ಪೋಲೋ ಎಂಬ ಪೊಲೀಸ್ ಕಾರ್ಯಾಚರಣೆ ಮೂಲಕ ಪಟೇಲ್‍ರು 1947 ಸೆಪ್ಟೆಂಬರ್ 17 ರಂದು ಹೈದರಾಬಾದ್
ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿದರು. ಹಾಗಾಗಿ ಸೆಪ್ಟೆಂಬರ್ 17 ಅನ್ನು ಹೈದರಾಬಾದ್
ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
ಕಾಶ್ಮೀರದ ಅರಸ ಹರಿಸಿಂಗ್
ಸ್ವತಂತ್ರವಾಗಿರಲು ಬಯಸಿದನಾದರೂ ಪಾಕಿಸ್ತಾನದ ಆಕ್ರಮಣದಿಂದ ಹೆದರಿ 1947 ಅಕ್ಟೋಬರ್ 26 ರಂದು ಭಾರತದ
ಒಕ್ಕೂಟಕ್ಕೆ ಸೇರಿದನು. ಅಕ್ಟೋಬರ್ 26 ಅನ್ನು Accession Day ಎನ್ನುವರು.
ಜುನಾಗಡವನ್ನು ಮತದಾನದ ಮೂಲಕ 1947 ನವೆಂಬರ್ 9 ರಂದು ಸೇರ್ಪಡೆ ಮಾಡಲಾಯಿತು.
1956 ರಲ್ಲಿ 14 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ
ಪ್ರದೇಶಗಳು ಅಸ್ಥಿತ್ವಕ್ಕೆ ಬಂದ ನಂತರ ರಚನೆಯಾದ ಹೊಸ ರಾಜ್ಯಗಳು
15ನೇ ರಾಜ್ಯ ಗುಜರಾತ್
(ಬಾಂಬೆ ಪ್ರಾಂತ್ಯದಿಂದ) 1 ಮೇ 1960
16ನೇ ರಾಜ್ಯ ನಾಗಾಲ್ಯಾಂಡ್
(ಅಸ್ಸಾಂ ರಾಜ್ಯದಿಂದ) 1 ಡಿಸೆಂಬರ್ 1963
17ನೇ ರಾಜ್ಯ ಹರಿಯಾಣ
(ಪಂಜಾಬ್ ರಾಜ್ಯದಿಂದ) 1 ನವೆಂಬರ್ 1966
18ನೇ ರಾಜ್ಯ ಹಿಮಾಚಲ
ಪ್ರದೇಶ (ಕೇಂದ್ರಾಡಳಿತ ಪ್ರದೇಶವಾಗಿತ್ತು) 25 ಜನವರಿ 1971
19ನೇ ರಾಜ್ಯ ಮಣಿಪುರ
(ಕೇಂದ್ರಾಡಳಿತ ಪ್ರದೇಶವಾಗಿತ್ತು) 21 ಜನವರಿ 1972
20ನೇ ರಾಜ್ಯ ತ್ರಿಪುರಾ
(ಕೇಂದ್ರಾಡಳಿತ ಪ್ರದೇಶವಾಗಿತ್ತು) 21 ಜನವರಿ 1972
21ನೇ ರಾಜ್ಯ ಮೇಘಾಲಯ
(ಅಸ್ಸಾಂ ರಾಜ್ಯದಿಂದ) 21 ಜನವರಿ 1972
22ನೇ ರಾಜ್ಯ ಸಿಕ್ಕಿಂ
(ರಾಜಪ್ರಭುತ್ವದಿಂದ ಬಿಡುಗಡೆ) 16 ಮೇ 1975
23ನೇ ರಾಜ್ಯ ಮಿಜೋರಾಂ
(ಕೇಂದ್ರಾಡಳಿತ ಪ್ರದೇಶವಾಗಿತ್ತು) 20 ಫೆಬ್ರವರಿ 1987
24ನೇ ರಾಜ್ಯ ಅರುಣಾಚಲ
ಪ್ರದೇಶ (ಕೇಂದ್ರಾಡಳಿತ ಪ್ರದೇಶವಾಗಿತ್ತು) 20 ಫೆಬ್ರವರಿ 1987
25ನೇ ರಾಜ್ಯ ಗೋವಾ
(ಕೇಂದ್ರಾಡಳಿತ ಪ್ರದೇಶವಾಗಿತ್ತು) 30 ಮೇ 1987
26ನೇ ರಾಜ್ಯ ಛತ್ತಿಸ್‌ಘಡ್
(ಮಧ್ಯಪ್ರದೇಶ ರಾಜ್ಯದಿಂದ) 1 ನವೆಂಬರ್ 2000
27ನೇ ರಾಜ್ಯ ಉತ್ತರಾಖಂಡ
(ಉತ್ತರಪ್ರದೇಶ ರಾಜ್ಯದಿಂದ) 9 ನವೆಂಬರ್ 2000
28ನೇ ರಾಜ್ಯ ಝಾರ್ಖಂಡ್ (ಬಿಹಾರ ರಾಜ್ಯದಿಂದ) 15 ನವೆಂಬರ್ 2000
29ನೇ ರಾಜ್ಯ ತೆಲಂಗಾಣ (ಆಂಧ್ರಪ್ರದೇಶ ರಾಜ್ಯದಿಂದ) 2 ಜೂನ್ 2014
ಭಾಷಾವಾರು ಪ್ರಾಂತ್ಯಗಳ ರಚನೆ
ರಾಜ್ಯಗಳ
ವಿಂಗಡಣೆ ಮತ್ತು ಆಯೋಗಗಳು
ಎಸ್.ಕೆ ಧಾರ್ ಆಯೋಗ (1946): ರಾಜ್ಯಗಳನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಬಾರದೆಂದು
ಆಡಳಿತಕ್ಕನುಕೂಲವಾಗಿ ವಿಭಾಗಿಸಬೇಕೆಂದು ವರದಿ ನೀಡಿತು.
ಜೆ.ವಿ.ಪಿ ಸಮಿತಿ (1948); ಜವಾಹರ್ ಲಾಲ್ ನೆಹರು, ವಲ್ಲಭಬಾಯಿ
ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯನವರನ್ನೊಳಗೊಂಡ ಸಮಿತಿಯಾಗಿತ್ತು. ಈ ಸಮಿತಿಯು ಸಹ ಭಾಷಾವಾರು
ರಾಜ್ಯಗಳ ವಿಂಗಡಣೆ ಸೂಕ್ತವಲ್ಲ ಎಂದು ಪ್ರತಿಪಾದಿಸಿತು
ಫಜಲ್ ಅಲಿ ಆಯೋಗ (1956): ಆಂಧ್ರಪ್ರದೇಶದ ಪೊಟ್ಟಿ ಶ್ರೀರಾಮುಲು ಅವರ ಹೋರಾಟದ ಫಲವಾಗಿ ಭಾಷಾವಾರು
ಪ್ರಾಂತ್ಯಗಳ ರಚನೆಗಾಗಿ ದಂಗೆಗಳುಂಟಾಗಿ ಅಧ್ಯಕ್ಷ ಫಜಲ್ ಅಲಿ ಮತ್ತು ಸದಸ್ಯರಾದ ಕೆ.ಎಂ ಫಣಿಕ್ಕರ್
ಹಾಗೂ ಎಚ್.ಎನ್ ಕುಂಜ್ರು ಇವರನ್ನೊಳಗೊಂಡ ಸಮಿತಿ ರಚನೆಯಾಯಿತು. ಈ ಸಮಿತಿಯ ಸಲಹೆಯಂತೆ ಭಾಷಾವಾರು
ಪ್ರಾಂತ್ಯಗಳ ರಚನೆಯಯಿತು.
1956 ನವೆಂಬರ್ 1 ರಂದು ಸಂವಿಧಾನದ 7ನೇ ತಿದ್ದುಪಡಿ
ಮೂಲಕ ರಾಜಪುನರ್ವಿಂಗಡಣಾ ಕಾನೂನನ್ನು ಜಾರಿಗೆ ತರಲಾಯಿತು
1956 ರಲ್ಲಿ 14 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ
ಪ್ರದೇಶಗಳು ಅಸ್ಥಿತ್ವಕ್ಕೆ ಬಂದವು.
ರಾಜ್ಯಗಳು : ಆಂಧ್ರಪ್ರದೇಶ, ಅಸ್ಸಾಂ, ಬಾಂಬೆ, ಮಧ್ಯಪ್ರದೇಶ,
ಮೈಸೂರು, ಮದ್ರಾಸ್, ಜಮ್ಮು
ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ, ರಾಜಸ್ತಾನ, ಪಂಜಾಬ್, ಉತ್ತರ
ಪ್ರದೇಶ, ಒಡಿಶಾ, ಬಿಹಾರ
ಕೇಂದ್ರಾಡಳಿತ ಪ್ರದೇಶಗಳು : ದೆಹಲಿ, ಮಣಿಪುರ, ಅಂಡಮಾನ್ ನಿಕೋಬಾರ್, ತ್ರಿಪುರ,
ಲಕ್ಷದ್ವೀಪ, ಹಿಮಾಚಲ ಪ್ರದೇಶ
ಸ್ವಾತಂತ್ರ್ಯೋತ್ತರ
ಭಾರತದಲ್ಲಿ ಪ್ರದೇಶಗಳ ವಿಂಗಡಣೆ
ಎ ವರ್ಗ - ಬಿಹಾರ, ಬಾಂಬೆ, ಅಸ್ಸಾಂ, ಮಧ್ಯಪ್ರದೇಶ, ಮದ್ರಾಸ್, ಪ.ಬಂಗಾಳ, ಪಂಜಾಬ್
ಮತ್ತು ಇತರ ಕೇಂದ್ರೀಯ ಪ್ರಾಂತ್ಯಗಳು
ಬಿ ವರ್ಗ – ಕೊಚ್ಚಿನ್, ಸೌರಾಷ್ಟ್ರ, ರಾಜಸ್ತಾನ, ಟ್ರಾವಂಕೂರ್, ವಿಂದ್ಯಪ್ರದೇಶ, ಮೈಸೂರು, ಹೈದ್ರಾಬಾದ್, ಜಮ್ಮು
ಕಾಶ್ಮೀರ
ಸಿ ವರ್ಗ – ಕೊಡಗು, ಮಣಿಪುರ, ದೆಹಲಿ, ಕಚ್
(ಗುಜರಾತ್ ನ ಒಂದು ಭಾಗ), ಹಿಮಾಚಲ ಪ್ರದೇಶ, ತ್ರಿಪುರಾ, ಅಜ್ಮೀರ್
ಡಿ ವರ್ಗ – ಅಂಡಮಾನ್
ನಿಕೋಬಾರ್
ಭಾಗ 1 - ವಿಧಿಗಳು
ಭಾಗ ೧ ರಲ್ಲಿ ಭಾರತದ ಒಕ್ಕೂಟ ಮತ್ತು ಭೂಪ್ರದೇಶಗಳ ಬಗ್ಗೆ ಹೇಳಲಾಗಿದೆ
ವಿಧಿ ೧ - ಇಂಡಿಯಾ ಎಂದರೆ
ಭಾರತ ಎಂದು ರಾಜ್ಯಕ್ಷೇತ್ರದ ಹೆಸರನ್ನು ಸೂಚಿಸುತ್ತದೆ (ಸಂವಿಧಾನದಲ್ಲಿ ದೇಶ ಎಂಬ ಪದದ ಬದಲಾಗಿ
ರಾಜ್ಯ / ರಾಜ್ಯಕ್ಷೇತ್ರ ಎಂಬ ಪದವನ್ನು ಬಳಸಲಾಗುತ್ತದೆ.) ಮತ್ತು ಭಾರತವು ರಾಜ್ಯಗಳ ಸಂಘವಾಗಿದೆ
ಅಥವಾ ಒಕ್ಕೂಟವಾಗಿದೆ.
ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ
ವಿಧಿ 2 - ಸಂಸತ್ತು ಹೊಸ
ರಾಜ್ಯಗಳನ್ನು ತನ್ನ ದೇಶದ ಭೂಭಾಗದೊಳಗೆ ಸೇರಿಸಿಕೊಳ್ಳಬಹುದು, ಹೊಸ ರಾಜ್ಯಗಳನ್ನು
ಸ್ಥಾಪಿಸಬಹುದು, ರಾಜ್ಯಗಳ ಗಡಿಗಳನ್ನು ನಿರ್ಧರಿಸಬಹದು ಮತ್ತು ರಾಜ್ಯಗಳ ಹೆಸರುಗಳನ್ನು ಬದಲಿಸಬಹುದು.
ವಿಧಿ 3 - ಸಂಸತ್ತು ಸರಳ ಬಹುಮತದ ಮೂಲಕ ಹೊಸ
ರಾಜ್ಯಗಳನ್ನು ಸೃಷ್ಟಿಸುವ, ರಾಜ್ಯಗಳ ಹೆಸರನ್ನು ಮತ್ತು ಗಡಿಗಳನ್ನು ಬದಲಾಯಿಸುವ, 2 ಅಥವಾ 2 ಕ್ಕಿಂತ ಹೆಚ್ಚು
ರಾಜ್ಯಗಳನ್ನು ಅಥವಾ ಅವುಗಳ ಭೂಭಾಗಗಳನ್ನು ಸೇರಿಸಿ ಹೊಸ ರಾಜ್ಯವನ್ನು ಸೃಷ್ಟಿಸುವ, ಒಂದು ರಾಜ್ಯದ
ವಿಸ್ತೀರ್ಣವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರವನ್ನು ಹೊಂದಿದೆ.
ಈ ಬದಲಾವಣೆಗೆ ಮೊದಲು
ರಾಷ್ಟ್ರಪತಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಂತರ ಯಾವ ರಾಜ್ಯದ ಹೆಸರು ಅಥವಾ ಗಡಿಯನ್ನು
ಬದಲಾಯಿಸಬೇಕಿದೆಯೋ ಆ ರಾಜ್ಯದ ವಿಧಾನಸಭೆಯಲ್ಲಿ ನಿರ್ದಿಷ್ಟ ಸಮಯದೊಳಗೆ ಅಭಿಪ್ರಾಯ ಮಂಡಿಸಲು
ರಾಷ್ಟ್ರಪತಿಗಳು ಅವಕಾಶ ನೀಡುತ್ತಾರೆ. ರಾಜ್ಯ ಶಾಸಕಾಂಗದ ನಿರ್ಧಾರವನ್ನು ರಾಷ್ಟ್ರಪತಿಗಳು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.
ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರ ಬೆಂಬಲ ಪಡೆಯುವ ಸರಳ ಬಹುಮತದ ಮೂಲಕ ಈ ಮೇಲಿನ
ಪ್ರಕ್ರಿಯೆಗಳಿಗೆ ಮಸೂದೆಗಳನ್ನು ಅಂಗೀಕರಿಸಿ ಜಾರಿಗೆ ತರಬಹುದು. ಇದಕ್ಕೆ 368 ನೇ ವಿಧಿಯ ಪ್ರಕಾರ
ವಿಶೇಷ ಬಹುಮತ ಪಡೆದು ತಿದ್ದುಪಡಿ ಮಾಡುವ ಅವಶ್ಯಕತೆ ಇಲ್ಲ.
ವಿಧಿ ೪ - 2 ಮತ್ತು 3 ನೇ ವಿಧಿಗಳು ಜಾರಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುತ್ತದೆ. ಭಾರತವು ತನ್ನ ಗಡಿಯನ್ನು ಇತರ ದೇಶದ ಗಡಿಗಳೊಂದಿಗೆ ಹಂಚಿಕೊಳ್ಳಬೇಕಾದರೆ ಸಂವಿಧಾನದ ತಿದ್ದುಪಡಿ ಮಾಡುವ ಅವಶ್ಯಕತೆಯಿಲ್ಲವೆಂದು 1969 ರಲ್ಲಿ ಸುಪ್ರೀಂ ಕೋರ್ಟ್ (ಮುಖ್ಯ ನ್ಯಾಯಾಧೀಶರು ಎಂ ಹಿದಾಯತುಲ್ಲಾ) ತೀರ್ಪು ನೀಡಿದೆ.
Super
ಪ್ರತ್ಯುತ್ತರಅಳಿಸಿ