ಪೋಸ್ಟ್‌ಗಳು

ಭಾಗ 4 ರಾಜ್ಯ ನಿರ್ದೇಶಕ ತತ್ವಗಳು, ಭಾಗ 4ಎ - ಮೂಲಭೂತ ಕರ್ತವ್ಯಗಳು

ಭಾಗ 4 ರಾಜ್ಯ ನಿರ್ದೇಶಕ ತತ್ವಗಳು 36 ರಿಂದ 51ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಸುಖಿ ರಾಜ್ಯ ಅಥವಾ ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿಕೊಂಡಿರುವ ತತ್ವಗಳೇ ರಾಜ್ಯ ನಿರ್ದೇಶಕ ತತ್ವಗಳು. ರಾಜ್ಯ ನಿರ್ದೇಶಕ ತತ್ವಗಳು ಗಾಂಧಿ ತತ್ವ, ಸಮಾಜವಾದಿ ತತ್ವ ಮತ್ತು ಉದಾರವಾದಿ ತತ್ವ ಇವುಗಳ ಮೇಲೆ ರೂಪಿತವಾಗಿವೆ. ಪ್ರಜೆಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸುವ ಉದ್ದೇಶದಿಂದ ಈ ತತ್ತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಈ ತತ್ವಗಳನ್ನು ಕಡ್ಡಾಯವಾಗಿ ಪಾಲಿಸುವ ನಿಯಮವಿಲ್ಲ ಆದ್ದರಿಂದ ಡಾ ಬಿ ಆರ್‌ ಅಂಬೇಡ್ಕರ್‌ ಅವರು ಸಂವಿಧಾನದ ನಾಲ್ಕನೇ ಭಾಗವನ್ನು “ Novel feauture ” ಎಂದು ಕರೆದಿದ್ದಾರೆ. 36 - ರಾಜ್ಯ ನಿರ್ದೇಶಕ ತತ್ವದಲ್ಲಿ ಬಳಸಿರುವ ರಾಜ್ಯ ಎಂಬ ಪದವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಮತ್ತು ಸ್ಥಳೀಯ ಪ್ರಾಧಿಕಾರ ಇವುಗಳನ್ನು ಒಳಗೊಂಡಿರುತ್ತದೆ 37 - ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ 38 - ಜನರ ಕಲ್ಯಾಣಕ್ಕಾಗಿ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ವ್ಯವಸ್ಥೆಯನ್ನು ಸರ್ವತೋಮುಖವಾಗಿ ವ್ಯವಸ್ಥಿತಗೊಳಿಸುವುದು 38ಎ - ಆರ್ಥಿಕ ಅಸಮತೋಲನ ನಿವಾರಣೆ. 1978ರ 44ನೇ ತಿದ್ದುಪಡಿ 39 - ರಾಜ್ಯವು ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ತ...

ಭಾರತ ಸಂವಿಧಾನದ ಪೀಠಿಕೆ ಮತ್ತು ಲಕ್ಷಣಗಳು

ಇಮೇಜ್
  ಭಾರತ ಸಂವಿಧಾನದ ಪೀಠಿಕೆ ಮತ್ತು ಲಕ್ಷಣಗಳು ಪೀಠಿಕೆ ಭಾರತದ ಸಂವಿಧಾನದ ಪೀಠಿಕೆಯು ಸಂವಿಧಾನದ ಒಟ್ಟಾರೆ ಆಶಯ ಮತ್ತು ಧ್ಯೇಯಗಳ ಸಂಕ್ಷಿಪ್ತ ಪ್ರತಿರೂಪವಾಗಿದೆ. ಇದನ್ನು ಅಮೇರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಜವಾಹರ್‌ ಲಾಲ್‌ ನೆಹರು ಅವರು 1946 ಡಿಸೆಂಬರ್‌ 13 ರಂದು ಸಂವಿಧಾನದ ಪೂರ್ವಪೀಠಿಕೆಯ ಧ್ಯೇಯ ನಿರ್ಣಯಗಳನ್ನು ಮಂಡಿಸಿದರು. ಇದು ಮುಂದೆ ಅನೇಕ ಮಾರ್ಪಾಡುಗಳನ್ನು ಹೊಂದಿ 1947 ಜನವರಿ 22 ರಂದು ಸಂವಿಧಾನದ ಭಾಗವಾಗಿ ಅಂಗೀಕಾರಗೊಂಡಿತು. ನಂತರ 1949 ಅಕ್ಟೋಬರ್‌ ೧೭ ರಂದು ಮತದಾನದ ಮೂಲಕ ಸಂವಿಧಾನದ ಭಾಗವಾಗಿ ಸ್ವೀಕೃತವಾಯಿತು. ಸಂವಿಧಾನದ ಪೀಠಿಕೆಯನ್ನು ಪ್ರಸಿದ್ಧರ ಹೇಳಿಕೆ ಠಾಕೂರ್‌ ದಾಸ್‌ ಭಾರ್ಗವ್‌ : ಪೀಠಿಕೆಯು ಸಂವಿಧಾನದ ಆತ್ಮ, ಕೀಲಿಕೈ ಮತ್ತು ಒಡವೆ ಕೆ ಎಂ ಮುನ್ಷಿ : ಪೀಠಿಕೆಯು ಭಾರತೀಯ ಸಂವಿಧಾನದ ರಾಜಕೀಯ ಜಾತಕ ಎನ್‌ ಎ ಪಾಲ್ಕೀವಾಲಾ :  ಪೀಠಿಕೆಯು  ಭಾರತೀಯ ಸಂವಿಧಾನದ ಗುರುತಿನ ಚೀಟಿ ಸರ್‌ ಅರ್ನೆಸ್ಟ್‌ ಬಾರ್ಕರ್‌ :  ಪೀಠಿಕೆಯು  ಭಾರತೀಯ ಸಂವಿಧಾನದ ಕಿರುಟಿಪ್ಪಣಿ ಎಮ್‌ ಹಿದಾಯತುಲ್ಲಾ :  ಪೀಠಿಕೆಯು ಸಂವಿಧಾನದ ಆತ್ಮ 1960 ಬೇರುಬಾರಿ ಪ್ರಕರಣದಲ್ಲಿ ಪೀಠಿಕೆಯು ಸಂವಿಧಾನದ ಭಾಗವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ (ಮುಖ್ಯ ನ್ಯಾಯಾಧೀಶರು ಭುವನೇಶ್ವರ್‌ ಪ್ರಸಾದ್‌ ಸಿನ್ಹಾ) ತೀರ್ಪು ನೀಡಿತು 1973 ರ ಕೇಶವಾನಂದ ಭಾರತಿ v/s ಕೇರಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವ...

ಸಂವಿಧಾನೇತರ ಸಂಸ್ಥೆಗಳು

  ಸಂವಿಧಾನೇತರ ಸಂಸ್ಥೆಗಳು ರಾಷ್ಟ್ರೀಯ ಮಹಿಳಾ ಆಯೋಗ 1990  ರ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆಯಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಆಯೋಗವು ಒಬ್ಬ ಅಧ್ಯಕ್ಷರು , 5  ಜನ ಸದಸ್ಯರನ್ನು ಹಾಗೂ ಒಬ್ಬ ಐ.ಎ.ಎಸ್ ದರ್ಜೆಯ ಕಾರ್ಯದರ್ಶಿಯನ್ನು ಒಳಗೊಂಡಿರುತ್ತದೆ. ಸದಸ್ಯರಲ್ಲಿ ಒಬ್ಬ ಮಹಿಳೆ ಪ. ಜಾತಿ/ಪ. ಪಂಗಡಕ್ಕೆ ಸೇರಿರಬೇಕು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ ಸ್ಥಾಪನೆ :  1992  ಜನವರಿ  31 ಕೇಂದ್ರ ಕಛೇರಿ : ನವದೆಹಲಿ ಮೊದಲ ಮುಖ್ಯ ಆಯುಕ್ತರು : ಜಯಂತಿ ಪಟ್ನಾಯಕ್ ಪ್ರಸ್ತುತ ಮುಖ್ಯ ಅಧ್ಯಕ್ಷರು : ರೇಖಾ ಶರ್ಮ ಅಧಿಕಾರಾವಧಿ :  3  ವರ್ಷ ರಾಜಿನಾಮೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ರಾಜ್ಯ ಮಹಿಳಾ ಆಯೋಗ 1995  ರ ರಾಜ್ಯ ಮಹಿಳಾ ಆಯೋಗ ಕಾಯ್ದೆಯಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ರಾಜ್ಯಸರ್ಕಾರ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಾರೆ. ಸ್ಥಾಪನೆ :  1996 ಕೇಂದ್ರ ಕಛೇರಿ : ಬೆಂಗಳೂರು ಪ್ರಸ್ತುತ ಮುಖ್ಯ ಅಧ್ಯಕ್ಷರು : ನಾಗಲಕ್ಷ್ಮೀ ಬಾಯಿ ಅಧಿಕಾರಾವಧಿ :  3  ವರ್ಷ (ರಾಜ್ಯ ಸರ್ಕಾರ ನೇಮಕ ಮಾಡುತ್ತದೆ) ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಈ ಆಯೋಗವು ಒಬ್ಬ ಅಧ್ಯಕ್ಷರು ಮತ್ತು  4  ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ ನ್ಯಾಯಾಧೀಶರಾಗಿರು...