ಸಂವಿಧಾನೇತರ ಸಂಸ್ಥೆಗಳು

 ಸಂವಿಧಾನೇತರ ಸಂಸ್ಥೆಗಳು

ರಾಷ್ಟ್ರೀಯ ಮಹಿಳಾ ಆಯೋಗ

1990 ರ ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆಯಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಈ ಆಯೋಗವು ಒಬ್ಬ ಅಧ್ಯಕ್ಷರು, 5 ಜನ ಸದಸ್ಯರನ್ನು ಹಾಗೂ ಒಬ್ಬ ಐ.ಎ.ಎಸ್ ದರ್ಜೆಯ ಕಾರ್ಯದರ್ಶಿಯನ್ನು ಒಳಗೊಂಡಿರುತ್ತದೆ. ಸದಸ್ಯರಲ್ಲಿ ಒಬ್ಬ ಮಹಿಳೆ ಪ. ಜಾತಿ/ಪ. ಪಂಗಡಕ್ಕೆ ಸೇರಿರಬೇಕು.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ

ಸ್ಥಾಪನೆ : 1992 ಜನವರಿ 31

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ಜಯಂತಿ ಪಟ್ನಾಯಕ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ರೇಖಾ ಶರ್ಮ

ಅಧಿಕಾರಾವಧಿ : 3 ವರ್ಷ

ರಾಜಿನಾಮೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು.

ರಾಜ್ಯ ಮಹಿಳಾ ಆಯೋಗ

1995 ರ ರಾಜ್ಯ ಮಹಿಳಾ ಆಯೋಗ ಕಾಯ್ದೆಯಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ರಾಜ್ಯಸರ್ಕಾರ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಾರೆ.

ಸ್ಥಾಪನೆ : 1996

ಕೇಂದ್ರ ಕಛೇರಿ : ಬೆಂಗಳೂರು

ಪ್ರಸ್ತುತ ಮುಖ್ಯ ಅಧ್ಯಕ್ಷರು : ನಾಗಲಕ್ಷ್ಮೀ ಬಾಯಿ

ಅಧಿಕಾರಾವಧಿ : 3 ವರ್ಷ (ರಾಜ್ಯ ಸರ್ಕಾರ ನೇಮಕ ಮಾಡುತ್ತದೆ)

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ

ಈ ಆಯೋಗವು ಒಬ್ಬ ಅಧ್ಯಕ್ಷರು ಮತ್ತು 4 ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ ನ್ಯಾಯಾಧೀಶರಾಗಿರುತ್ತಾರೆ.

ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ

ವಿಧಿ : 340

ಸ್ಥಾಪನೆ : 14 ಆಗಸ್ಟ್ 1993

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ನ್ಯಾ. ಆರ್ ಎನ್ ಪ್ರಸಾದ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ಡಾ. ಭಗವಾನ್ ಲಾಲ್ ಸಾಹ್ನಿ

ಅಧಿಕಾರಾವಧಿ : 3 ವರ್ಷ

ಕೇಂದ್ರ ಸರ್ಕಾರಕ್ಕೆ ರಾಜಿನಾಮೆ ನೀಡುತ್ತಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

1993 ರ ಮಾನವ ಹಕ್ಕು ಸಂರಕ್ಷಣಾ ಕಾಯ್ದೆಯಡಿ ಈ ಆಯೋಗವನ್ನು ಸ್ಥಾಪಿಸಲಾಯಿತು. ಓರ್ವ ಅಧ್ಯಕ್ಷರು, 4 ಜನ ಖಾಯಂ ಸದಸ್ಯರು ಮತ್ತು 3 ಜನ ಪದನಿಮಿತ್ತ ಸದಸ್ಯರನ್ನು ಈ ಆಯೋಗ ಒಳಗೊಂಡಿರುತ್ತದೆ.

ಪ್ರಧಾನಮಂತ್ರಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಅದ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುತ್ತಾರೆ. ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರು ಇದರ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.

ಒಬ್ಬರು ಸುಪ್ರೀಂ ಕೋರ್ಟ್ ನ ಹಾಲಿ/ನಿವೃತ್ತ ನ್ಯಾಯಾಧೀಶರುಒಬ್ಬರು ಹೈ ಕೋರ್ಟ್ ನ ಹಾಲಿ/ನಿವೃತ್ತ ನ್ಯಾಯಾಧೀಶರುಮತ್ತು ಮಾನವ ಹಕ್ಕುಗಳ ಬಗ್ಗೆ ಜ್ಞಾನವುಳ್ಳ ಇಬ್ಬರು ವ್ಯಕ್ತಿಗಳು ಈ ಆಯೋಗದ ಸದಸ್ಯರಾಗಿರುತ್ತಾರೆ.

ಪ್ರಧಾನ ಮಂತ್ರಿಗಳ ನೇತೃತ್ವದ ಸಲಹಾ ಸಮಿತಿಯ ಮೇರೆಗೆ ರಾಷ್ಟ್ರಪತಿಗಳು ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುತ್ತಾರೆ

ಈ ಸಂಸ್ಥೆಯನ್ನು ಮಾನವ ಹಕ್ಕುಗಳ ಕಾವಲು ನಾಯಿ ಎನ್ನುವರು.

ಸ್ಥಾಪನೆ : 12 ಅಕ್ಟೋಬರ್ 1993

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ನ್ಯಾ. ರಂಗನಾಥ್ ಮಿಶ್ರಾ

ಪ್ರಸ್ತುತ ಮುಖ್ಯ ಅಧ್ಯಕ್ಷರು : ನ್ಯಾ. ಎಚ್ ಎಲ್ ದತ್ತು

ಅಧಿಕಾರಾವಧಿ : 5 ವರ್ಷ ಅಥವಾ 70 ವರ್ಷ.

ರಾಜಿನಾಮೆಯನ್ನು ರಾಷ್ಟ್ರಪತಿಗೆ ಸಲ್ಲಿಸುತ್ತಾರೆ.

ರಾಜ್ಯ ಮಾನವ ಹಕ್ಕುಗಳ ಆಯೋಗ

1993 ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ 21 ನೇ ವಿಧಿಯನ್ವಯ ಈ ಆಯೋಗವನ್ನು ಸ್ಥಾಪಿಸಲಾಯಿತು.

ಮುಖ್ಯಮಂತ್ರಿಗಳ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಅದ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಕ ಮಾಡುತ್ತಾರೆ

ಸ್ಥಾಪನೆ : 25 ಜುಲೈ 2007

ಕೇಂದ್ರ ಕಛೇರಿ : ಬೆಂಗಳೂರು

ಮೊದಲ ಮುಖ್ಯ ಆಯುಕ್ತರು : ನ್ಯಾ. ಸುಬ್ಬರಾಯ್ ರಾಮನಾಯಕ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ನ್ಯಾ. ಧೀರೇಂದ್ರ ಹೀರಾಲಾಲ್ ವಘೇಲಾ

ಅಧಿಕಾರಾವಧಿ : 5 ವರ್ಷ ಅಥವಾ 70 ವರ್ಷ ಯಾವುದು ಮೊದಲು ಬರುತ್ತದೋ ಅದು.

ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತಾರೆ

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ

1992 ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಈ ಆಯೋಗವು ಅಧ್ಯಕ್ಷರುಉಪಾಧ್ಯಕ್ಷರು ಮತ್ತು 4 ಜನ ಸದಸ್ಯರನ್ನು ಒಳಗೊಂಡಿರುತ್ತದೆ.

ಕೇಂದ್ರ ಸರ್ಕಾರವು ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡುತ್ತದೆ.

ಸ್ಥಾಪನೆ : 1993

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ನ್ಯಾ. ಮೊಹಮ್ಮದ್ ಸರ್ದಾರ್ ಅಲಿಖಾನ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ಸಯ್ಯದ್ ಘಯೋರ್ ಹಸನ್ ರಿಜ್ಜಿ

ಅಧಿಕಾರಾವಧಿ : 3 ವರ್ಷ

ರಾಜಿನಾಮೆಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಾರೆ.

ಕೇಂದ್ರ ಜಾಗೃತ ಆಯೋಗ

ಕೆ ಸಂತಾನಂ ಅವರ ಭ್ರಷ್ಟಾಚಾರ ನಿಯಂತ್ರಣ ಸಮಿತಿಯ ಶಿಫಾರಸಿನ ಮೇರೆಗೆ ಈ ಆಯೋಗವನ್ನು ಸ್ಥಾಪಿಸಿಲಾಯಿತು. ಒಬ್ಬರು ಮುಖ್ಯ ಆಯುಕ್ತರು ಹಾಗೂ ಇಬ್ಬರು ಆಯುಕ್ತರನ್ನು ಒಳಗೊಂಡಿರುತ್ತದೆ.

ಸ್ಥಾಪನೆ : 1964 ಫೆಬ್ರವರಿ

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ನಿಟ್ಟೂರು ಶ್ರೀನಿವಾಸರಾಯರು

ಪ್ರಸ್ತುತ ಮುಖ್ಯ ಅಧ್ಯಕ್ಷರು : ಸಂಜಯ್ ಕೊಠಾರಿ

ಅಧಿಕಾರಾವಧಿ : 4 ವರ್ಷ ಅಥವಾ 65 ವರ್ಷ

ಇವರು ರಾಷ್ಟ್ರಪತಿಗಳಿಂದ ಆಯ್ಕೆಯಾಗುತ್ತಾರೆ.ರಾಜಿನಾಮೆಯನ್ನು ಸಹ ರಾಷ್ಟ್ರಪತಿಯವರಿಗೆ ನೀಡುತ್ತಾರೆ.

ಲೋಕಪಾಲ್

1966 ರಲ್ಲಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ರಚನೆಯಾದ ಮೊದಲ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಲೋಕಪಾಲ್ ಅನ್ನು ಸ್ಥಾಪಿಸಲಾಯಿತು.

ಸ್ಥಾಪನೆ : 19 ಮಾರ್ಚ್ 2019

ಕೇಂದ್ರ ಕಛೇರಿ : ನವದೆಹಲಿ

ಮೊದಲ ಲೋಕಪಾಲ್ : ನ್ಯಾ ಪಿನಾಕಿ ಚಂದ್ರಘೋಷ್

ಪ್ರಸ್ತುತ ಲೋಕಪಾಲ್ : ನ್ಯಾ ಪಿನಾಕಿ ಚಂದ್ರಘೋಷ್

ಪ್ರಧಾನಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಸಲಹೆಯ ಮೇರೆಗೆ ರಾಷ್ಟ್ರಪತಿಗಳಿಂದ ನೇಮಕಗೊಳ್ಳುತ್ತಾರೆ

ಅಧಿಕಾರಾವಧಿ : 5 ವರ್ಷ ಅಥವಾ 65 ವರ್ಷ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರನ್ನೊಳಗೊಂಡ 4 ಜನ ನ್ಯಾಯಾಂಗೀಯ ಸದಸ್ಯರು ಮತ್ತು ಭ್ರಷ್ಟಾಚಾರ ನಿಯಂತ್ರಣ ವಿಷಯದಲ್ಲಿ ಜ್ಞಾನವುಳ್ಳ ಮತ್ತು ಭ್ರಷ್ಟಾಚಾರ ಹಿನ್ನೆಲೆಯಿಲ್ಲದ 25 ವಯಸ್ಸಿಗೆ ಕಡಿಮೆಯಿಲ್ಲದ 4 ಜನ ನ್ಯಾಯಾಂಗೇತರ ಸದಸ್ಯರು ಸೇರಿ ಒಟ್ಟು 8 ಜನ ಸದಸ್ಯರನ್ನು ಈ ಆಯೋಗವು ಒಳಗೊಂಡಿರುತ್ತದೆ.

ಲೋಕಾಯುಕ್ತ

1966 ರಲ್ಲಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ರಚನೆಯಾದ ಮೊದಲ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಮತ್ತು 1984 ರ ಕಾಯ್ದೆಯಂತೆ ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲಾಯಿತು

ಮಹಾರಾಷ್ಟ್ರ 1971 ರಲ್ಲಿ ಮೊದಲ ಬಾರಿಗೆ ಲೋಕಾಯುಕ್ತ ಆಯೋಗವನ್ನು ಜಾರಿಗೆ ತಂದಿತು.

ಆಯೋಗದಲ್ಲಿ ಒಬ್ಬ ಲೋಕಾಯುಕ್ತ ಮತ್ತು ಇಬ್ಬರು ಉಪ ಲೋಕಾಯುಕ್ತರು ಇರುತ್ತಾರೆ. ಲೋಕಾಯುಕ್ತರಾಗಲು ಹೈಕೋರ್ಟಿನಲ್ಲಿ 10 ವರ್ಷ ಸೇವೆ ಮತ್ತು ಉಪಲೋಕಾಯುಕ್ತರಾಗಲು ಹೈಕೋರ್ಟಿನಲ್ಲಿ 5 ವರ್ಷ ಸೇವೆ ಸಲ್ಲಿಸಿರಬೇಕು.

ರಾಜ್ಯ ಮುಖ್ಯಮಂತ್ರಿಗಳು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರೊಡನೆವಿಧಾನ ಪರಿಷತ್ ನ ಸಭಾಪತಿಗಳೊಡನೆಮತ್ತು ವಿಧಾನ ಮಂಡಲದ 2 ಸದನಗಳ ವಿರೋಧ ಪಕ್ಷಗಳ ನಾಯಕರೊಡನೆ ಸಮಾಲೋಚಿಸಿ ರಾಜ್ಯಪಾಲರಿಗೆ ಸಲಹೆ ನೀಡುವರು. ಆ ಸಲಹೆಯನ್ನಾಧರಿಸಿ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಕ ಮಾಡುವರು.

ಒಂದು ಬಾರಿ ಲೋಕಾಯುಕ್ತರಾಗಿ ಆಯ್ಕೆಯಾದವರು ಮತ್ತೊಮ್ಮೆ ಆಯ್ಕೆಯಾಗುವಂತಿಲ್ಲ

ಸ್ಥಾಪನೆ : 1985

ಕೇಂದ್ರ ಕಛೇರಿ : ಬೆಂಗಳೂರು

ಮೊದಲ ಲೋಕಾಯುಕ್ತರು : ನ್ಯಾ ಎ ಡಿ ಕೌಶಲ್

ಪ್ರಸ್ತುತ ಲೋಕಾಯುಕ್ತರು : ನ್ಯಾ ಪಿ ವಿಶ್ವನಾಥ ಶೆಟ್ಟಿ

ರಾಷ್ಟ್ರೀಯ ತನಿಖಾ ದಳ

ಭಯೋತ್ಪಾದನೆಯನ್ನು ನಿಗ್ರಹಿಸಲು 2008 ರ ರಾಷ್ಟ್ರಿಯ ತನಿಖಾ ದಳದ ಕಾಯ್ದೆಯಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಈ ಸಂಸ್ಥೆಯು ಗೃಹ ಸಚಿವಾಲಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸ್ಥಾಪನೆ : 2009

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮಹಾನಿರ್ದೇಶಕರು : ರಾದ್ ವಿನೋದ್ ರಾಜ್

ಪ್ರಸ್ತುತ ಮಹಾನಿರ್ದೇಶಕರು: ಯೋಗೇಶ್ ಚಂದ್ರ ಮೋದಿ

ಕೇಂದ್ರ ತನಿಖಾ ದಳ (ಸಿ.ಬಿ.ಐ - ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ)

ಸ್ಥಾಪನೆ : 1 ಏಪ್ರಿಲ್ 1963

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮಹಾನಿರ್ದೇಶಕರು : ಕೋಹ್ಲಿ ಡಿ ಪಿ

ಪ್ರಸ್ತುತ ಮಹಾನಿರ್ದೇಶಕರು: ಸುಬೋಧ್ ಕುಮಾರ್ ಜೈಸ್ವಾಲ್

ಇವರು ನೇರವಾಗಿ ಪ್ರಧಾನ ಮಂತ್ರಿಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹೆಗಾರರು : ಅಜಿತ್ ಕುಮಾರ್ ಧೋವಲ್

ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ

ಈ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ತಮಿಳುನಾಡು (1997)

ಕರ್ನಾಟಕವು 2000 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿತು

ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಸೇರಿ ಕ್ಯಾಬಿನೆಟ್ ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸುವರು. ಈ ಸಮಿತಿಯು ಈ ಆಯೋಗದ ಆಯುಕ್ತರು ಮತ್ತು ಸದಸ್ಯರು ಯಾರಾಗಬೇಕೆಂದು ಸೂಚಿಸುತ್ತದೆ. ಕೊನೆಯಲ್ಲಿ ರಾಷ್ಟ್ರಪತಿಗಳು ಈ ಆಯೋಗದ ಆಯುಕ್ತರು ಮತ್ತು ಸದಸ್ಯರನ್ನು ಆಯ್ಕೆ ಮಾಡುತ್ತಾರೆ.

ಈ ಆಯೋಗವು ಒಬ್ಬರು ಮುಖ್ಯ ಆಯುಕ್ತರು ಮತ್ತು 9 ಜನ ಸದಸ್ಯರನ್ನೊಳಗೊಂಡಿರುತ್ತದೆ.

ಸ್ಥಾಪನೆ : 13 ಅಕ್ಟೋಬರ್ 2005

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ವಜಾಹತ್ ಹಬೀಬುಲ್ಲಾ

ಪ್ರಸ್ತುತ ಮುಖ್ಯ ಆಯುಕ್ತರು: ಯಶವರ್ಧನ್ ಕುಮಾರ್ ಸಿನ್ಹಾ

ಕರ್ನಾಟಕದ ಪ್ರಸ್ತುತ ಮುಖ್ಯ ಆಯುಕ್ತರು : ಎನ್ ಸಿ ಶ್ರೀನಿವಾಸ

ಅಧಿಕಾರಾವಧಿ : ವರ್ಷ ಅಥವಾ 65 ವರ್ಷ

ಕಾಮೆಂಟ್‌ಗಳು