ಭಾಗ 4 ರಾಜ್ಯ ನಿರ್ದೇಶಕ ತತ್ವಗಳು, ಭಾಗ 4ಎ - ಮೂಲಭೂತ ಕರ್ತವ್ಯಗಳು

ಭಾಗ 4 ರಾಜ್ಯ ನಿರ್ದೇಶಕ ತತ್ವಗಳು

36 ರಿಂದ 51ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಸುಖಿ ರಾಜ್ಯ ಅಥವಾ ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿಕೊಂಡಿರುವ ತತ್ವಗಳೇ ರಾಜ್ಯ ನಿರ್ದೇಶಕ ತತ್ವಗಳು. ರಾಜ್ಯ ನಿರ್ದೇಶಕ ತತ್ವಗಳು ಗಾಂಧಿ ತತ್ವ, ಸಮಾಜವಾದಿ ತತ್ವ ಮತ್ತು ಉದಾರವಾದಿ ತತ್ವ ಇವುಗಳ ಮೇಲೆ ರೂಪಿತವಾಗಿವೆ. ಪ್ರಜೆಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸುವ ಉದ್ದೇಶದಿಂದ ಈ ತತ್ತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ.

ಈ ತತ್ವಗಳನ್ನು ಕಡ್ಡಾಯವಾಗಿ ಪಾಲಿಸುವ ನಿಯಮವಿಲ್ಲ ಆದ್ದರಿಂದ ಡಾ ಬಿ ಆರ್‌ ಅಂಬೇಡ್ಕರ್‌ ಅವರು ಸಂವಿಧಾನದ ನಾಲ್ಕನೇ ಭಾಗವನ್ನು Novel feauture ಎಂದು ಕರೆದಿದ್ದಾರೆ.

36 - ರಾಜ್ಯ ನಿರ್ದೇಶಕ ತತ್ವದಲ್ಲಿ ಬಳಸಿರುವ ರಾಜ್ಯ ಎಂಬ ಪದವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಮತ್ತು ಸ್ಥಳೀಯ ಪ್ರಾಧಿಕಾರ ಇವುಗಳನ್ನು ಒಳಗೊಂಡಿರುತ್ತದೆ

37 - ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ

38 - ಜನರ ಕಲ್ಯಾಣಕ್ಕಾಗಿ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ವ್ಯವಸ್ಥೆಯನ್ನು ಸರ್ವತೋಮುಖವಾಗಿ ವ್ಯವಸ್ಥಿತಗೊಳಿಸುವುದು

38ಎ - ಆರ್ಥಿಕ ಅಸಮತೋಲನ ನಿವಾರಣೆ. 1978ರ 44ನೇ ತಿದ್ದುಪಡಿ

39 - ರಾಜ್ಯವು ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ತಪ್ಪಿಸಲು ಕೆಲವು ತತ್ವಗಳ ಅಳವಡಿಕೆ

1 ಜೀವನ ನಿರ್ವಹಣೆ ವ್ಯವಸ್ಥೆ

2 ಮೂಲಭೂತ ಸೌಲಭ್ಯಗಳು

3 ಸಂಪತ್ತು ಮತ್ತು ಸಾಧನ ಸಾಧನಗಳು

4 ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ. 1976ರ ಸಮಾನ ವೇತನ ಕಾಯ್ದೆ

5 ಪುರುಷ ಮತ್ತು ಮಹಿಳೆಯರ ಅವರ ಆರೋಗ್ಯ ಮತ್ತು ವಯಸ್ಸಿಗೆ ಅನುಗುಣವಾಗಿ ಉದ್ಯೋಗ ಒದಗಿಸುವುದು

6 ಮಕ್ಕಳಿಗೆ ಉತ್ತಮ ಆರೋಗ್ಯದ ವಾತಾವರಣ ಒದಗಿಸುವುದು

7 ಜೀತಪದ್ಧತಿ ಮತ್ತು ಬಲಾತ್ಕಾರದ ದುಡಿಮೆ ತಡೆಯುವುದು

39ಎ - ಹಿಂದುಳಿದ ವರ್ಗಗಳಿಗೆ ಉಚಿತ ಕಾನೂನಿನ ಮತ್ತು ನ್ಯಾಯ ದೊರಕಿಸುವಿಕೆ. 1976ರ 42ನೇ ತಿದ್ದುಪಡಿ

40 - ಪಂಚಾಯತಿಗಳ ಸ್ಥಾಪನೆ, 1957 ರ ಬಲವಂತರಾಯ್‌ ಮೆಹ್ತಾ ಸಮಿತಿ ಮತ್ತು 1977 ರ ಅಶೋಕ್‌ ಮೆಹ್ತಾ ಸಮಿತಿ ಇವುಗಳ ಶಿಫಾರಸ್ಸಿನ ಪ್ರಕಾರ 1993 ರಲ್ಲಿ 73ನೇ ತಿದ್ದುಪಡಿಯ ಮಾಡಿ ಪಂಚಾಯತ್‌ ರಾಜ್ ವ್ಯವಸ್ಥೆ ಮತ್ತು ನಗಸರಸಭೆ - ಪುರಸಭೆ (ಮುನಿಸಿಪಲ್)‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು.

41 - ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಮತ್ತು ಜೀವನ ನಿರ್ವಹಣೆಗಾಗಿ ಆರ್ಥಿಕವಾಗಿ ವಿಶೇಷ ವೇತನ ಸೌಲಭ್ಯ ನೀಡುವುದು

42 - ಕೆಲಸ ಮಾಡಲು ಕಾರ್ಮಿಕರಿಗೆ ನ್ಯಾಯಯುತವಾದ ಮತ್ತು ಮಾನವೀಯ ಪರಿಸರ ಒದಗಿಸುವುದು. ಉದಾ.. ಮಹಿಳಾ ಕಾರ್ಮಿಕರ ಆರೋಗ್ಯ ರಕ್ಷಣೆ, ಹೆರಿಗೆ ಸೌಲಭ್ಯ ಮತ್ತು ಇತರ ಸೌಲಭ್ಯಗಳು

43 - ಕಾರ್ಮಿಕರಿಗೆ ಜೀವನ ನಿರ್ವಹಣಾ ಸೌಲಭ್ಯ ಮತ್ತು ಸಂಬಳ ಒದಗಿಸುವುದು. 1948ರ ಕನಿಷ್ಠ ಕೂಲಿ ಕಾಯ್ದೆ

43ಎ - ಕೈಗಾರಿಕೆಗಳ ಆಡಳಿತದಲ್ಲಿ ಕಾರ್ಮಿಕರು ಭಾಗವಹಿಸುವುದು. 1976ರ 42ನೇ ತಿದ್ದುಪಡಿ

43ಬಿ - ಸಹಕಾರಿ ಸಂಘಗಳ ನಿರ್ವಹಣೆ ನಿಯಂತ್ರಣ ಮತ್ತು ಕಾರ್ಯಗಳಿಗೆ ಅವಕಾಶ. 2011ರ 97ನೇ ತಿದ್ದುಪಡಿ

44 - ನಾಗರಿಕರಿಗೆ ಏಕರೂಪದ ಸಿವಿಲ್ ಸಮಿತಿ ಕೋಡ್ ಜಾರಿ

45 - ಆರು ವರ್ಷದ ಒಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದು. 2002 ರ 86ನೇ ತಿದ್ದುಪಡಿ

46 - ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳು ಇವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ರಕ್ಷಣೆ ನೀಡುವುದು ಉದಾಹರಣೆಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಶಿಷ್ಯವೇತನ ಹಾಸ್ಟೆಲ್ ವ್ಯವಸ್ಥೆ, ಪ್ರೋತ್ಸಾಹಕ ಬಹುಮಾನ ಮುಂತಾದವು

47 - ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯ ಒದಗಿಸುವುದು, ಮಧ್ಯಪಾನ ನಿಷೇಧ

48 - ಕೃಷಿ ಮತ್ತು ಪಶುಸಂಗೋಪನೆಗೆ ಪ್ರೋತ್ಸಾಹ, ಗೋಹತ್ಯೆ ನಿಷೇಧ

48ಎ - ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ. 1976ರ 42ನೇ ತಿದ್ದುಪಡಿ

49 - ಐತಿಹಾಸಿಕ ಸ್ಮಾರಕ ಮತ್ತು ಸ್ಥಳಗಳ ರಕ್ಷಣೆ

50 - ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು

51 - ಅಂತರಾಷ್ಟ್ರೀಯ ಮನೋಭಾವ ಬೆಳೆಸುವುದು

ಸಮಾಜವಾದಿ ತತ್ತ್ವಗಳು : 38, 39, 39ಎ, 41, 42, 43ಎ

ಗಾಂಧಿವಾದಿ ತತ್ತ್ವಗಳು : 40, 43ಬಿ, 46, 47, 48

ಉದಾರವಾದಿ ತತ್ತ್ವಗಳು : 44, 45, 48ಎ, 49, 50, 51

 

ಭಾಗ 4 ಎ - ಮೂಲಭೂತ ಕರ್ತವ್ಯಗಳು 51ಎ ವಿಧಿ

ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ

1975 ರಲ್ಲಿ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲು ಸರ್ದಾರ್ ಸ್ವರ್ಣ ಸಿಂಗ್ ಸಮಿತಿಯನ್ನು ಸ್ಥಾಪಿಸಲಾಯಿತು. ಈ ಶಿಫಾರಸ್ಸಿನ ಅನ್ವಯ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದಲ್ಲಿ 1976ರಲ್ಲಿ 42ನೇ ತಿದ್ದುಪಡಿ ಮೂಲಕ ಭಾರತದ ಸಂವಿಧಾನದ 4ಎ ಭಾಗದಲ್ಲಿ 51 ವಿಧಿಯ ಅಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು.

ಆದರೆ ಈ ಸಂದರ್ಭದಲ್ಲಿ ಸಮಿತಿಯು ಶೀಫಾರಸ್ಸು ಮಾಡಿದ ಇನ್ನೆರೆಡು ಅಂಶಗಳನ್ನು ಸರ್ಕಾರವು ಕೈಬಿಟ್ಟಿತು. ಅವುಗಳು 1 ತೆರಿಗೆ ಪಾವತಿಸುವ ಕರ್ತವ್ಯ 2 ಕರ್ತವ್ಯಗಳನ್ನು ಪಾಲಿಸದಿದ್ದರೆ ಸಂಸತ್ತು ಶಿಕ್ಷಿಸುವ ಕರ್ತವ್ಯ

ಮೂಲಭೂತ ಕರ್ತವ್ಯಗಳಿಗೆ ನ್ಯಾಯಾಲಯದ ರಕ್ಷಣೆ ಇಲ್ಲ ಇವುಗಳನ್ನು ಪಾಲಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಸರ್ಕಾರವು ಕೆಲವು ಕಾಯ್ದೆಗಳ ಮೂಲಕ ಮೂಲಭೂತ ಕರ್ತವ್ಯಗಳಲ್ಲಿರುವ ವಿಷಯಗಳನ್ನು ಜಾರಿಗೊಳಿಸಿದೆ.

 

11 ಮೂಲಭೂತ ಕರ್ತವ್ಯಗಳು

ಎ. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು

ಬಿ. ಸ್ವಾತಂತ್ರ್ಯ ಹೋರಾಟದ ಧ್ಯೇಯಗಳನ್ನು ಗೌರವಿಸುವುದು

ಸಿ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡುವುದು

ಡಿ. ದೇಶದ ರಕ್ಷಣೆ ಮತ್ತು ಸೇವೆಗೆ ಸದಾ ಸಿದ್ಧರಿರುವುದು

ಇ. ಭ್ರಾತೃತ್ವ ಮನೋಭಾವದಿಂದ ನಡೆದುಕೊಳ್ಳುವುದು

ಎಫ್. ದೇಶದ ಸಂಸ್ಕೃತಿ ಪರಂಪರೆಗೆ ಗೌರವ ನೀಡುವುದು ಮತ್ತು ರಕ್ಷಣೆ ಮಾಡುವುದು

ಜಿ. ದೇಶದ ಪರಿಸರವನ್ನು ಮತ್ತು ಸಂರಕ್ಷಿತ ನೈಸರ್ಗಿಕ ತಾಣಗಳನ್ನು ಸಂರಕ್ಷಿಸುವುದು

ಎಚ್.‌ ಮಾನವೀಯ, ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು

ಐ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ದೇಶದ ಅಭಿವೃದ್ಧಿಗೆ ನೆರವಾಗುವುದು

10 ರಾಷ್ಟ್ರವನ್ನು ಪ್ರತಿನಿಧಿಸುವುದು

11 16 ವರ್ಷದೊಳಗಿನ ಮಕ್ಕಳಿಗೆ ಪೋಷಕರು ಕಡ್ಡಾಯ ಶಿಕ್ಷಣ ಕೊಡಿಸುವುದು. (1999 ರಲ್ಲಿ ಮೂಲಭೂತ ಕರ್ತವ್ಯಗಳ ಪುನರವಲೋಕನಕ್ಕಾಗಿ ಜೆ ಎಸ್‌ ವರ್ಮ ಸಮಿತಿಯನ್ನು ರಚಿಸಲಾಯತು. ಈ ಸಮಿತಿಯ ಶಿಫಾರಸ್ಸಿನ ಪ್ರಕಾರ 2002ರಲ್ಲಿ 86ನೇ ತಿದ್ದುಪಡಿ ಮೂಲಕ 51ಎ ವಿಧಿಯಲ್ಲಿ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಯಿತು)

ಕಾಮೆಂಟ್‌ಗಳು