ಭಾರತ ಸಂವಿಧಾನದ ಪೀಠಿಕೆ ಮತ್ತು ಲಕ್ಷಣಗಳು
ಭಾರತ ಸಂವಿಧಾನದ ಪೀಠಿಕೆ ಮತ್ತು ಲಕ್ಷಣಗಳು
ಪೀಠಿಕೆ
ಭಾರತದ ಸಂವಿಧಾನದ
ಪೀಠಿಕೆಯು ಸಂವಿಧಾನದ ಒಟ್ಟಾರೆ ಆಶಯ ಮತ್ತು ಧ್ಯೇಯಗಳ ಸಂಕ್ಷಿಪ್ತ ಪ್ರತಿರೂಪವಾಗಿದೆ. ಇದನ್ನು ಅಮೇರಿಕಾ
ಸಂವಿಧಾನದಿಂದ ಎರವಲು ಪಡೆಯಲಾಗಿದೆ.
ಜವಾಹರ್ ಲಾಲ್ ನೆಹರು ಅವರು 1946 ಡಿಸೆಂಬರ್ 13 ರಂದು ಸಂವಿಧಾನದ ಪೂರ್ವಪೀಠಿಕೆಯ ಧ್ಯೇಯ ನಿರ್ಣಯಗಳನ್ನು ಮಂಡಿಸಿದರು. ಇದು ಮುಂದೆ ಅನೇಕ ಮಾರ್ಪಾಡುಗಳನ್ನು ಹೊಂದಿ 1947 ಜನವರಿ 22 ರಂದು ಸಂವಿಧಾನದ ಭಾಗವಾಗಿ ಅಂಗೀಕಾರಗೊಂಡಿತು. ನಂತರ 1949 ಅಕ್ಟೋಬರ್ ೧೭ ರಂದು ಮತದಾನದ ಮೂಲಕ ಸಂವಿಧಾನದ ಭಾಗವಾಗಿ ಸ್ವೀಕೃತವಾಯಿತು.
ಸಂವಿಧಾನದ ಪೀಠಿಕೆಯನ್ನು ಪ್ರಸಿದ್ಧರ ಹೇಳಿಕೆ
ಠಾಕೂರ್ ದಾಸ್ ಭಾರ್ಗವ್ : ಪೀಠಿಕೆಯು ಸಂವಿಧಾನದ ಆತ್ಮ, ಕೀಲಿಕೈ ಮತ್ತು ಒಡವೆ
ಕೆ ಎಂ ಮುನ್ಷಿ : ಪೀಠಿಕೆಯು ಭಾರತೀಯ ಸಂವಿಧಾನದ ರಾಜಕೀಯ ಜಾತಕ
ಎನ್ ಎ ಪಾಲ್ಕೀವಾಲಾ : ಪೀಠಿಕೆಯು ಭಾರತೀಯ ಸಂವಿಧಾನದ ಗುರುತಿನ ಚೀಟಿ
ಸರ್ ಅರ್ನೆಸ್ಟ್ ಬಾರ್ಕರ್ : ಪೀಠಿಕೆಯು ಭಾರತೀಯ ಸಂವಿಧಾನದ ಕಿರುಟಿಪ್ಪಣಿ
ಎಮ್ ಹಿದಾಯತುಲ್ಲಾ : ಪೀಠಿಕೆಯು ಸಂವಿಧಾನದ ಆತ್ಮ
1960 ಬೇರುಬಾರಿ
ಪ್ರಕರಣದಲ್ಲಿ ಪೀಠಿಕೆಯು ಸಂವಿಧಾನದ ಭಾಗವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ (ಮುಖ್ಯ ನ್ಯಾಯಾಧೀಶರು
ಭುವನೇಶ್ವರ್ ಪ್ರಸಾದ್ ಸಿನ್ಹಾ) ತೀರ್ಪು ನೀಡಿತು
1973 ರ ಕೇಶವಾನಂದ
ಭಾರತಿ v/s
ಕೇರಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು (ಮುಖ್ಯ ನ್ಯಾಯಾಧೀಶರು
ಸರ್ವ್ ಮಿತ್ರ ಸಿಕ್ರಿ) ಪೀಠಿಕೆಯನ್ನು ಸಂವಿಧಾನದ ಭಾಗ ಎಂದು ಹೇಳಿತು ಹಾಗೂ ಸಂವಿಧಾನದ ಮೂಲ ಆಶಯಕ್ಕೆ
ಧಕ್ಕೆ ಬಾರದಂತೆ ಪೀಠಿಕೆಯನ್ನು ತಿದ್ದುಪಡಿ ಮಾಡಬಹುದು ಎಂದು ತೀರ್ಪು ನೀಡಿತು
ಪೀಠಿಕೆಯನ್ನು ತಿದ್ದುಪಡಿ
ಮಾಡಬಹುದು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಆಧಾರವಾಗಿ ಮಾಡಿಕೊಂಡು 197೬ ರಲ್ಲಿ ಸಂವಿಧಾನಕ್ಕೆ
42ನೇ ತಿದ್ದುಪಡಿ ಮಾಡಿ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯತೀತ ಮತ್ತು ಏಕತೆ ಎಂಬ ಮೂರು ಪದಗಳನ್ನು
ಸೇರಿಸಲಾಯಿತು.
1995 ರ ಎಲ್ ಐ
ಸಿ ಪ್ರಕರಣದಲ್ಲಿ 1973 ರ ಕೇಶವಾನಂದ ಭಾರತಿ v/s ಕೇರಳ ತೀರ್ಪನ್ನು
ಆಧಾರವಾಗಿಸಿಕೊಂಡು ಸರ್ವೋಚ್ಚ ನ್ಯಾಯಾಲಯವು (ಮುಖ್ಯ ನ್ಯಾಯಾಧೀಶರು ಅಜೀ಼ಜ್ ಮುಷಬ್ಬರ್ ಅಹ್ಮದಿ)
ಪೀಠಿಕೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತು.
ಸಂವಿಧಾನದ ಪೀಠಿಕೆಯಲ್ಲಿರುವ ಪ್ರಮುಖ ಪದಗಳು
ಸಾರ್ವಭೌಮ: ಭಾರತವು
ತನ್ನ ಆಂತರಿಕ ಅಥವಾ ಬಾಹ್ಯ ವಿಷಯಗಳಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತದೆ.
ಸಮಾಜವಾದಿ:
1976 ರಲ್ಲಿ ೪೨ನೇ ತಿದ್ದುಪಡಿಯ ಮೂಲಕ ಈ ಪದವನ್ನು ಪೀಠಿಕೆಗೆ ಸೇರಿಸಲಾಯಿತು. ದೇಶದೊಳಗೆ ಬಂಡವಾಳಶಾಹಿಗಳು
ಮತ್ತು ಕಾರ್ಮಿಕರ ನಡುವಿನ ತಾರತಮ್ಯ ಇರಬಾರದು ಎಂಬುದನ್ನು ಇದು ಸೂಚಿಸುತ್ತದೆ
ಜಾತ್ಯತೀತ:
1976 ರಲ್ಲಿ ೪೨ನೇ ತಿದ್ದುಪಡಿಯ ಮೂಲಕ ಈ ಪದವನ್ನು ಪೀಠಿಕೆಗೆ ಸೇರಿಸಲಾಯಿತು. ಭಾರತದೊಳಗೆ ಎಲ್ಲಾ
ಧರ್ಮ ಜಾತಿಯವರು ಸ್ವತಂತ್ರವಾಗಿ ಬದುಕಬಹುದು. ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ
ಘೋಷಿಸಿಲ್ಲ. ಸಂವಿಧಾನದ 25 ರಿಂದ 28ನೇ ವಿಧಿಯವರೆಗೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಹೇಳಲಾಗಿದೆ.
ಪ್ರಜಾಸತ್ತಾತ್ಮಕ
ಗಣರಾಜ್ಯ: ಭಾರತದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಪರೋಕ್ಷ ಚುನಾವಣೆಯ ಮೂಲಕ ಜನರಿಂದ ಆಯ್ಕೆಯಾಗುತ್ತಾರೆ.
ಅಂದರೆ ಜನಗಳಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ರಾಷ್ಟ್ರಪತಿಗಳನ್ನು ಚುನಾವಣೆಯ ಮೂಲಕ ಆಯ್ಕೆ
ಮಾಡುತ್ತಾರೆ
ರಾಜಕೀಯ, ಆರ್ಥಿಕ
ಮತ್ತು ಸಾಮಾಜಿಕ ನ್ಯಾಯ: ಈ ಪರಿಕಲ್ಪನೆಯನ್ನು ರಷ್ಯಾ ಸಂವಿಧಾನದಿಂದ ಪಡೆಯಲಾಗಿದೆ. ಭಾರತೀಯರೆಲ್ಲರಿಗೂ
ಯಾವುದೇ ಭೇದಭಾವವಿಲ್ಲದೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ಇಲ್ಲಿನ
ಆಶಯ
ಸ್ವಾತಂತ್ರ್ಯ:
ಈ ಪದವನ್ನು ಫ್ರೆಂಚ್ ಸಂವಿಧಾನದಿಂದ ಪಡೆಯಲಾಗಿದೆ. ಸಂವಿಧಾನದ 19ನೇ ವಿಧಿ ಮತ್ತು ಅದರ ಉಪವಿಧಿಗಳಲ್ಲಿ
ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಗೆ ಸಂಬಂಧಿಸಿದಂತೆ ಭಾರತದ ಪ್ರಜೆಗಳಿಗೆ 6 ವಿಧದ
ನಿರ್ಬಂಧಿತ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಸಮಾನತೆ: ಈ ಪದವನ್ನು
ಫ್ರೆಂಚ್ ಸಂವಿಧಾನದಿಂದ ಪಡೆಯಲಾಗಿದೆ. ಭಾರತೀಯರು ಜಾತಿ, ಧರ್ಮ, ಲಿಂಗ, ಭಾಷೆಗಳನ್ನು ಮೀರಿ ತಮ್ಮ
ಸ್ಥಾನಮಾನಗಳಿಗೆ ಅನುಗುಣವಾಗಿ ಸಮಾನರು ಎಂದು ತಿಳಿಸಲಾಗಿದೆ.
ರಾಷ್ಟ್ರದ ಏಕತೆ, ಅಖಂಡತೆ ಮತ್ತು ಭ್ರಾತೃತ್ವತೆ: 1976 ರಲ್ಲಿ ೪೨ನೇ ತಿದ್ದುಪಡಿಯ ಮೂಲಕ ಈ ಪದವನ್ನು ಪೀಠಿಕೆಗೆ ಸೇರಿಸಲಾಯಿತು. ಭಾರತೀಯರೆಲ್ಲರೂ ಸಹೋದರ ಭಾವನೆಯಿಂದ ಬದುಕಬೇಕು ಹಾಗೂ ದೇಶದ ಅಖಂಡತೆಗೆ ಧಕ್ಕೆ ಭಾರದಂತೆ ಭ್ರಾತೃತ್ವ ಭಾವನೆಯಿಂದ ಬಾಳಬೇಕು ಎಂಬುದನ್ನು ಇದು ತಿಳಿಸುತ್ತದೆ.
ಸಂವಿಧಾನದ ಪ್ರಮುಖ ಲಕ್ಷಣಗಳು
* ಗಣರಾಜ್ಯ ರಾಷ್ಟ್ರ:
ಭಾರತದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಪರೋಕ್ಷ ಚುನಾವಣೆಯ ಮೂಲಕ ಜನರಿಂದ ಆಯ್ಕೆಯಾಗುತ್ತಾರೆ. ಅಂದರೆ
ಜನಗಳಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ರಾಷ್ಟ್ರಪತಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ.
ಜಾತ್ಯತೀತ ತತ್ತ್ವ:
1976 ರಲ್ಲಿ ೪೨ನೇ ತಿದ್ದುಪಡಿಯ ಮೂಲಕ ಈ ಪದವನ್ನು ಪೀಠಿಕೆಗೆ ಸೇರಿಸಲಾಯಿತು. ಭಾರತದೊಳಗೆ ಎಲ್ಲಾ
ಧರ್ಮ ಜಾತಿಯವರು ಸ್ವತಂತ್ರವಾಗಿ ಬದುಕಬಹುದು. ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ
ಘೋಷಿಸಿಲ್ಲ.
* ಅಸ್ಪೃಶ್ಯತೆ ರದ್ಧತಿ: 17ನೇ ವಿಧಿಯಲ್ಲಿ ಅಸ್ಪೃಶ್ಯತೆಯನ್ನು ಆಚರಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದು ತಿಳಿಸಿದೆ
* ಮೂಲಭೂತ ಹಕ್ಕುಗಳು:
ಮೂಲಭೂತ ಹಕ್ಕುಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದ 3ನೇ ಭಾಗದಲ್ಲಿ
12 ರಿಂದ 35ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳನ್ನು ಕುರಿತು ವಿವರಿಸಲಾಗಿದೆ. ಮೂಲಭೂತ ಹಕ್ಕುಗಳನ್ನು
ಭಾರತದ ಮ್ಯಾಗ್ನಾಕಾರ್ಟ್ ಎನ್ನುವರು
* ರಾಜ್ಯನಿರ್ದೇಶಕ
ತತ್ತ್ವಗಳು: ಒಂದು ದೇಶವು ಉತ್ತಮ ಆಡಳಿತ ನಡೆಸಲು ಅಳವಡಿಸಿಕೊಳ್ಳಬೇಕಾದ ಸೂತ್ರಗಳು. ಸಂವಿಧಾನದ ಭಾಗ
4 ರಲ್ಲಿ 36ನೇ ವಿಧಿಯಿಂದ 51ನೇ ವಿಧಿಯವರೆಗೆ ರಾಜ್ಯನಿರ್ದೇಶಕ ತತ್ತ್ವಗಳನ್ನು ವಿವರಿಸಲಾಗಿದೆ. ಡಾ
ಬಿ ಆರ್ ಅಂಬೇಡ್ಕರ್ ಅವರು ರಾಜ್ಯ ನಿರ್ದೇಶಕ ತತ್ತ್ವಗಳನ್ನು “Novel feature” ಎಂದು ವರ್ಣಿಸಿದ್ದಾರೆ.
* ಮೂಲಭೂತ ಕರ್ತವ್ಯಗಳು:
ಒಂದು ದೇಶದ ಪ್ರಜೆಗಳು ಮೂಲಭೂತ ಹಕ್ಕುಗಳನ್ನು ಅನುಭವಿಸುವ ಹಾಗೆಯೇ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು
ಎಂಬುದು ಭಾರತೀಯ ಸಂವಿಧಾನದ ಲಕ್ಷಣಗಳಲ್ಲಿ ಒಂದು. 2002 ರಲ್ಲಿ 86ನೇ ತಿದ್ದುಪಡಿಯ ಮೂಲಕ 11 ಮೂಲಭೂತ
ಕರ್ತವ್ಯಗಳನ್ನು ಸಂವಿಧಾನದ ಭಾಗ ೪(ಎ) ವಿಧಿ 51(ಎ) ರಲ್ಲಿ ಸೇರಿಸಲಾಯಿತು.
* ಸ್ವತಂತ್ರ ಹಾಗೂ
ಏಕೀಕೃತ ನ್ಯಾಯಾಂಗ ವ್ಯವಸ್ಥೆ: ಭಾರತ ಸಂವಿಧಾನದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಕಾರ್ಯಾಂಗ ಹಾಗೂ
ಶಾಸಕಾಂಗದಿಂದ ಪ್ರತ್ಯೇಕಗೊಳಿಸಲಾಗಿದೆ. ಭಾಗ ೫ ರಲ್ಲಿ 124 ರಿಂದ 147 ರ ವರೆಗಿನ ವಿಧಿಗಳಲ್ಲಿ ಕೇಂದ್ರ
ನ್ಯಾಯಾಂಗ ವ್ಯವಸ್ಥೆ ಮತ್ತು ಭಾಗ 6 ರಲ್ಲಿ 214 ರಿಂದ 237 ರ ವರೆಗಿನ ವಿಧಿಗಳಲ್ಲಿ ರಾಜ್ಯ ನ್ಯಾಯಾಂಗ
ವ್ಯವಸ್ಥೆಯ ಕುರಿತು ಹೇಳಲಾಗಿದೆ.
* ಬೃಹತ್ ಲಿಖಿತ ಸಂವಿಧಾನ:
ಭಾರತ ಸಂವಿಧಾನದಲ್ಲಿ ಒಟ್ಟು 448 ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳಿದ್ದು ಪ್ರಪಂಚದಲ್ಲಿಯೇ
ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.
* ವಯಸ್ಕ ಮತದಾನ
ಪದ್ಧತಿ: ಭಾರತದಲ್ಲಿ ಮತಹಾಕುವ ರಾಜಕೀಯ ಹಕ್ಕು ನೀಡಲಾಗಿದೆ. ಪ್ರಾರಂಭದಲ್ಲಿ ಮತ ಹಾಕಲು 21 ವರ್ಷ
ನಿಗದಿಪಡಿಸಲಾಗಿತ್ತು. 1988 ರಲ್ಲಿ ಸಂವಿಧಾನದಲ್ಲಿ 61ನೇ ತಿದ್ದುಪಡಿಯನ್ನು ಮಾಡಿ ಮತ ಹಾಕಲು 18
ವರ್ಷವನ್ನು ನಿಗದಿಪಡಿಸಲಾಯಿತು. ಈ ಕಾನೂನು 1989 ರಿಂದ ಜಾರಿಗೆ ಬಂದಿತು. ಸಂವಿಧಾನದ 15ನೇ ಭಾಗದ
326ನೇ ವಿಧಿಯಲ್ಲಿ ವಯಸ್ಕ ಮತದಾನದ ಕುರಿತು ತಿಳಿಸಲಾಗಿದೆ
* ಏಕಪೌರತ್ವ: ಏಕಪೌರತ್ವ
ಪದ್ಧತಿಯನ್ನು ಬ್ರಿಟನ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಪೌರತ್ವದ ಕುರಿತು ಸಂವಿಧಾನದ 2ನೇ ಭಾಗದಲ್ಲಿ
5 ರಿಂದ 11ನೇ ವಿಧಿಗಳವರೆಗೆ ತಿಳಿಸಿದೆ
* ತುರ್ತು ಪರಿಸ್ಥಿತಿ
ಅಧಿಕಾರಗಳು: ತುರ್ತು ಪರಿಸ್ಥಿತಿ ಅಧಿಕಾರವನ್ನು ಜರ್ಮನಿಯಿಂದ ಎರವಲು ಪಡೆಯಲಾಗಿದೆ. ಸಂವಿಧಾನ 18ನೇ
ಭಾಗದಲ್ಲಿ 3 ಪ್ರಕಾರದ ತುರ್ತುಪರಿಸ್ಥಿತಿಗಳನ್ನು ಕುರಿತು ಹೇಳಲಾಗಿದೆ
ವಿಧಿ 352 ರಾಷ್ಟ್ರೀಯ
ತುರ್ತು ಪರಿಸ್ಥಿತಿ
ವಿಧಿ 356 ರಾಜ್ಯ
ತುರ್ತು ಪರಿಸ್ಥಿತಿ
ವಿಧಿ 358 ಆರ್ಥಿಕ
ತುರ್ತು ಪರಿಸ್ಥಿತಿ
* ನಮ್ಯ ಮತ್ತು
ಅನಮ್ಯ ತಿದ್ದುಪಡಿ: ಸಂವಿಧಾನದ ತಿದ್ದುಪಡಿಯನ್ನು ದಕ್ಷಿಣಾ ಆಫ್ರಿಕಾದಿಂದ ಎರವಲು ಪಡೆಯಲಾಗಿದೆ. ಇವುಗಳಲ್ಲಿ
೨ ವಿಧ
ನಮ್ಯ (ಸರಳ) ತಿದ್ದುಪಡಿ
- ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಪಡೆಯುವ ಮೂಲಕ ಮಾಡುವ ತಿದ್ದುಪಡಿ. ಮೂಲಭೂತ ಹಕ್ಕುಗಳು, ಮೂಲಭೂತ
ಕರ್ತವ್ಯಗಳು, ರಾಜ್ಯನಿರ್ದೇಶಕ ತತ್ತ್ವಗಳು ಇತ್ಯಾದಿ
ಅನಮ್ಯ (ಕಠಿಣ)
ತಿದ್ದುಪಡಿ - ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಪಡೆಯುವುದರ ಜೊತೆಗೆ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ
ಪಡೆದು ಮಾಡುವ ತಿದ್ದುಪಡಿ. ರಾಷ್ಟ್ರಪತಿ ಚುನಾವಣೆ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಹುದ್ದೆ
ಮತ್ತು ಅಧಿಕಾರ ಇತ್ಯಾದಿ
* ಸಂಯುಕ್ತ ಸರ್ಕಾರ
ಪದ್ಧತಿ: ಸಂವಿಧಾನದ 1ನೇ ಭಾಗದಲ್ಲಿ ಭಾರತವನ್ನು ರಾಜ್ಯಗಳ ಸಂಘ ಅಥವಾ ಒಕ್ಕೂಟ ಎಂದು ಕರೆಯಲಾಗಿದೆ.
ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎಂಬ ಎರಡು ಪ್ರಕಾರದ ಸರ್ಕಾರಗಳಿವೆ. ಕಾರ್ಯಾಂಗ
ಹಾಗೂ ಶಾಸಕಾಂಗದ ಅಧಿಕಾರಗಳನ್ನು 3 ಭಾಗವಾಗಿ ಹಂಚಿಕೆ ಮಾಡಲಾಗಿದೆ
ಕೇಂದ್ರಪಟ್ಟಿ
- 100 ವಿಷಯಗಳು
ರಾಜ್ಯಪಟ್ಟಿ -
61 ವಿಷಯಗಳು
ಸಮವರ್ತಿ ಪಟ್ಟಿ
- 52 ವಿಷಯಗಳು
* ದ್ವಿಸದನ ಪದ್ಧತಿ
/ ಸಂಸದೀಯ ಪದ್ಧತಿ: ನಮ್ಮ ಸಂಸತ್ತಿನಲ್ಲಿ ದ್ವಿಸದನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಪದ್ಧತಿಯನ್ನು
ಬ್ರಿಟನ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ದ್ವಿಸದನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಡು
ಸದನಗಳಿವೆ. ಸಂಸತ್ತು ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿಗಳನ್ನು ಒಳಗೊಂಡಿರುತ್ತದೆ.
* ಸ್ವತಂತ್ರ ಹುದ್ದೆ
ಮತ್ತು ಸಂಸ್ಥೆಗಳು: ಭಾರತದ ಸಂವಿಧಾನದಲ್ಲಿ ಕೆಲವು ಹುದ್ದೆ ಮತ್ತು ಸಂಸ್ಥೆಗಳು ಯಾರ ಅಡ್ಡಿ ಆಕ್ಷೇಪಣೆ
ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಾಂವಿಧಾನಿಕವಾಗಿ ಸ್ವಾತಂತ್ರ್ಯ
ನೀಡಲಾಗಿದೆ.
ಸಂಸ್ಥೆಗಳು : ಕೇಂದ್ರ ಲೋಕಸೇವಾ ಆಯೋಗ 315ನೇ ವಿಧಿ,
ಕೇಂದ್ರ ಚುನಾವಣಾ ಆಯೋಗ 324ನೇ ವಿಧಿ. ಇತ್ಯಾದಿ
ವ್ಯಕ್ತಿಗಳು :
ಅಟಾರ್ನಿ ಜನರಲ್ 76ನೇ ವಿಧಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ 148ನೇ ವಿಧಿ. ಇತ್ಯಾದಿ
* ಎರವಲು ಸಂವಿಧಾನ:
ಭಾರತ ಸಂವಿಧಾನವು ಬ್ರಿಟನ್, ಅಮೆರಿಕಾ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ರಷ್ಯಾ,
ಫ್ರೆಂಚ್ ಮತ್ತು ದಕ್ಷಿಣಾ ಆಫ್ರಿಕಾ ಸಂವಿಧಾನಗಳಿಂದ ಅನೇಕ ವಿಷಯಗಳನ್ನು ಎರವಲಾಗಿ ತೆಗೆದುಕೊಂಡಿದೆ.
ಈ ಮೇಲಿನ ವಿಷಯಗಳ
ಹೊರತಾಗಿ ಇನ್ನೂ ಅನೇಕ ವಿಶೇಷ ಲಕ್ಷಣಗಳನ್ನು ನಮ್ಮ ಭಾರತೀಯ ಸಂವಿಧಾನದಲ್ಲಿ ಕಾಣುತ್ತೇವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ