ಭಾಗ – 2 ಪೌರತ್ವ

 ಭಾಗ 2 ಪೌರತ್ವ

ದ್ವಿಪೌರತ್ವವನ್ನು ಬ್ರಿಟನ್‌ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದ 5ನೇ ವಿಧಿಯಿಂದ 11ನೇ ವಿಧಿಯವರೆಗೆ ಪೌರತ್ವದ ಬಗ್ಗೆ ವಿವರಿಸಲಾಗಿದೆ

ಸಂಸತ್ತು 1955 ರಲ್ಲಿ ಪೌರತ್ವ ಕಾಯ್ದೆಯನ್ನು ರೂಪಿಸಿತು. ಭಾರತದಲ್ಲಿ 2 ರೀತಿಯ ಪೌರತ್ವಗಳಿವೆ. ಭಾರತೀಯ ನಿವಾಸಿಗಳಿಗೆ ಏಕ ಪೌರತ್ವ ಮತ್ತು ಅನಿವಾಸಿ ಭಾರತೀಯರಿಗೆ ದ್ವಿ ಪೌರತ್ವ.

ಅಮೇರಿಕಾ ಮತ್ತು ಸ್ವಿಟ್ಜರ್ಲ್ಯಾಂಡ್ ದ್ವಿ ಪೌರತ್ವ ಹೊಂದಿರುವ ದೇಶಗಳಾಗಿವೆ.

ವಿಧಿಗಳು

ವಿಧಿ 5 - ಭಾರತ ಸಂವಿಧಾನ ಆರಂಭವಾಗುವುದಕ್ಕಿಂತ ಕನಿಷ್ಠ 5 ವರ್ಷಗಳ ಮುಂಚೆ ಭಾರತದ ಭೂಪ್ರದೇಶದಲ್ಲಿ ವಾಸವಾಗಿದ್ದರೆ ಭಾರತದ ಪೌರತ್ವ ಪಡೆಯುತ್ತಾನೆ. 1950 ಜನವರಿ 26 ನಂತರ ಅಂದರೆ ಸಂವಿಧಾನ ಬಂದ ನಂತರ ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದರೆ, ವಾಸಿಸುತ್ತಿದ್ದರೆ ಅಥವಾ ಭಾರತದಲ್ಲಿ ಆ ವ್ಯಕ್ತಿಯ ತಂದೆ ತಾಯಿಗಳು ಹುಟ್ಟಿದ್ದರೆ ಆ ವ್ಯಕ್ತಿಯು ಸ್ವಾಭಾವಿಕವಾಗಿ ಭಾರತದ ಪೌರತ್ವ ಪಡೆಯುತ್ತಾನೆ.

ವಿಧಿ 6 - 1948 ಜುಲೈ 19 ಕ್ಕಿಂತ ಮುಂಚೆ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಭಾರತದ ಪೌರತ್ವ ದೊರೆಯುತ್ತದೆ.

ವಿಧಿ 7 - 1947 ಮಾರ್ಚ್‌ 1 ರ ನಂತರ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳಿಗೆ ಭಾರತದ ಪೌರತ್ವ ದೊರೆಯುವುದಿಲ್ಲ.

ವಿಧಿ 8 - ಭಾರತದಿಂದ ಹೊರಗೆ ವಾಸಿಸುತ್ತಿರುವ ಭಾರತೀಯ ಮೂಲದ ವಿದೇಶಿ ಪೌರರಿಗೆ ಜನಿಸಿದವರಿಗೆ ಭಾರತೀಯ ಮೂಲದವರು ಎಂಬ ಆಧಾರದ ಮೇಲೆ ಭಾರತದ ಪೌರತ್ವ ದೊರೆಯುತ್ತದೆ

ವಿಧಿ 9 - ಸ್ವ ಇಚ್ಚೆಯಿಂದ ಭಾರತದ ಪೌರತ್ವ ತೊರೆದವರು ಭಾರತದ ಪೌರರಲ್ಲ ಎಂಬುದನ್ನು ತಿಳಿಸುತ್ತದೆ.

ವಿಧಿ 10 - ಭಾರತದ ಪೌರರಾಗಲು ಇರಬೇಕಾದ ಅರ್ಹತೆಗಳನ್ನು ನಿರ್ಧರಿಸುವ ಅಧಿಕಾರ ಸಂಸತ್ತಿಗಿರುತ್ತದೆ.

ವಿಧಿ 11  ವ್ಯಕ್ತಿ ಪೌರತ್ವವನ್ನು ಪಡೆಯುವ ಹಾಗೂ ಕಳೆದುಕೊಳ್ಳುವ ಕಾನೂನು ಮತ್ತು ವಿಧಾನಗಳ ಬಗ್ಗೆ ತಿಳಿಸುತ್ತದೆ. ಈ ವಿಧಿಯ ಪ್ರಕಾರ ಪೌರತ್ವದ ಕುರಿತು ಕಾನೂನು ಮಾಡುವ ಹಕ್ಕು ಇರುವುದು ಸಂಸತ್ತಿಗೆ ಮಾತ್ರ

1955 ರ ಪೌರತ್ವ ಕಾಯ್ದೆ

1955 ಡಿಸೆಂಬರ್‌ 30 ರಂದು ಪೌರತ್ವ ಕಾಯ್ದೆಯನ್ನು ಜಾರಿ ಮಾಡಲಾಯಿತು. ಇದರಲ್ಲಿ ಪೌರತ್ವ ಪಡೆದುಕೊಳ್ಳುವ 5 ನಿಯಮಗಳನ್ನು ಮತ್ತು ಪೌರತ್ವ ಪಡೆದುಕೊಳ್ಳುವ 3 ನಿಯಮಗಳನ್ನು ಸೇರಿಸಲಾಯಿತು

ಪೌರತ್ವ ಪಡೆಯುವ ವಿಧಾನಗಳು

ಜನನದ ಮೂಲಕ

1. ಒಬ್ಬ ವ್ಯಕ್ತಿ 1950 ಜನವರಿ 26 ರ ನಂತರ ಮತ್ತು 1987 ಕ್ಕಿಂತ ಮುಂಚೆಯೇ ಭಾರತದಲ್ಲಿ ಜನಿಸಿದ್ದರೆ ಆತನಿಗೆ ಭಾರತದ ಪೌರತ್ವ ದೊರೆಯುತ್ತದೆ.

2. 1 ಜುಲೈ 1987 ರಿಂದ 3 ಡಿಸೆಂಬರ್‌ 2004 ರ ವರೆಗೆ ಭಾರತದಲ್ಲಿ ವಾಸವಾಗಿರುವ ತಂದೆತಾಯಿಗಳಿಗೆ ಜನಿಸಿದ ಮಕ್ಕಳಿಗೆ ಭಾರತದ ಪೌರತ್ವ ದೊರೆಯುತ್ತದೆ.

ಯಾರಿಗೆ ಜನನದ ಮೂಲಕ ಪೌರತ್ವ ಸಿಗುವುದಿಲ್ಲ
1. ಭಾರತದಲ್ಲಿರುವ ವಿದೇಶಿ ರಾಯಭಾರಿ ಮಕ್ಕಳು ಭಾರತ ಭೂಪ್ರದೇಶದಲ್ಲಿ ಜನಿಸಿದರೆ ಅವರಿಗೆ ಪೌರತ್ವ ದೊರೆಯುವುದಿಲ್ಲ
2. ಭಾರತದ ಶತ್ರುರಾಷ್ಟ್ರಗಳ ಮಕ್ಕಳು ಭಾರತ ಭೂಪ್ರದೇಶದಲ್ಲಿ ಜನಿಸಿದರೆ ಅಥವಾ ಭಾರತದ ಭೂಪ್ರದೇಶವು ವಿದೇಶದ ಭೂಭಾಗಕ್ಕೆ ಸೇರಿದಾಗ ಅಲ್ಲಿ ಜನಿಸಿದ ಮಕ್ಕಳಿಗೆ ಪೌರತ್ವ ದೊರೆಯುವುದಿಲ್ಲ
3 2004 ಡಿಸೆಂಬರ್‌ 3 ನಂತರ ಭಾರತದ ಪ್ರಜೆಗೆ ವಿದೇಶಿ ಪ್ರಜೆಯಿಂದ ಮಗು ಜನಿಸಿದರೆ ಜನಿಸಿದ ಮಗುವಿಗೆ ಭಾರತದ ಪೌರತ್ವ ಸಿಗುವುದಿಲ್ಲ
ರಕ್ತಸಂಬಂಧದ / ವಂಶದ ಮೂಲಕ
1. 1950 ರಿಂದ 1992 ರವರೆಗೆ ವಿದೇಶದಲ್ಲಿ ಜನಿಸಿದ ಯಾವುದೇ ವ್ಯಕ್ತಿಯ ತಂದೆ ಭಾರತೀಯ ಮೂಲದವನಾಗಿದ್ದರೆ ಆತನಿಗೆ ಭಾರತೀಯ ಪೌರತ್ವ ದೊರೆಯುತ್ತಿತ್ತು.
2. 199೨ ರ ನಂತರ ವಿದೇಶದಲ್ಲಿ ಜನಿಸಿದ ಯಾವುದೇ ವ್ಯಕ್ತಿಯ ತಂದೆ ಅಥವಾ ತಾಯಿ ಭಾರತೀಯ ಮೂಲದವರಾಗಿದ್ದರೆ ಅವರಿಗೆ ಭಾರತೀಯ ಪೌರತ್ವ ದೊರೆಯುತ್ತದೆ.
3. 2004 ರ ನಂತರದ ತಿದ್ದುಪಡಿಯ ಪ್ರಕಾರ ಭಾರತೀಯ ಮೂಲದ ತಂದೆ / ತಾಯಿಗೆ ವಿದೇಶದಲ್ಲಿ ಜನಿಸಿದ ಮಗುವಿಗೆ ಹುಟ್ಟಿದ ೧ ವರ್ಷದೊಳಗಾಗಿ ಭಾರರದಲ್ಲಿ ಪೌರತ್ವಕ್ಕೆ ನೋಂದಣಿ ಮಾಡಿಸಿದರೆ ಮಾತ್ರ ಭಾರತದ ಪೌರತ್ವ ದೊರೆಯುತ್ತದೆ

ನೋಂದಣಿ ಮೂಲಕ

೧ ವಿದೇಶಿ ಪ್ರಜೆಯು ಭಾರತೀಯ ವ್ಯಕ್ತಿಯನ್ನು ವಿವಾಹವಾಗುವ ಮೂಲಕ ಭಾರತೀಯ ಪೌರನಾಗಬಹುದು

೨ ಕಾಮನ್ವೆಲ್ತ್ ದೇಶಗಳ ಪ್ರಜೆಗಳು ಅರ್ಜಿ ಸಲ್ಲಿಸುವ ಮೂಲಕ ಭಾರತೀಯ ಪೌರರಾಗಬಹುದು

೩ ಅನಿವಾಸಿ ಭಾರತೀಯರು ಅರ್ಜಿ ಸಲ್ಲಿಸುವುದಕ್ಕಿಂತ ಏಳು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಭಾರತೀಯ ಪೌರರಾಗಬಹುದು

4 ಭಾರತ ಸರ್ಕಾರ ಸೇವೆಯಲ್ಲಿರುವ ವಿದೇಶಿ ಪ್ರಜೆಗಳು 12 ತಿಂಗಳುಗಳ ಮುಂಚೆಯೇ ನೋಂದಣಿ ಮಾಡಿಸಿರಬೇಕು

ಸಹಜೀಕೃತ ವಿಧಾನ / ಅರ್ಜಿ ಸಲ್ಲಿಸುವ ಮೂಲಕ

ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಯಾವುದಾದರೂ ಒಂದು ಭಾರತೀಯ ಭಾಷೆ ಮಾತನಾಡಲು ಓದಲು ಬರೆಯಲು ತಿಳಿದಿದ್ದರೆ ಭಾರತದ ಪ್ರಜೆಯಾಗಬಹುದು

ಯಾವ ದೇಶದಲ್ಲಿ ಭಾರತದ ಪ್ರಜೆಗಳಿಗೆ ಆ ದೇಶದ ಪೌರರಾಗಲು ಅನುಮತಿ ಇರುತ್ತದೋ ಆ ದೇಶದ ವ್ಯಕ್ತಿಯಾಗಿದ್ದಾರೆ ಭಾರತದ ಪ್ರಜೆಯಾಗಬಹುದು

ಭಾರತದ ಪ್ರಜೆಯಾಗಬಯಸುವ ವ್ಯಕ್ತಿ ಭಾರತದಲ್ಲಿ 7 ವರ್ಷಗಳ ಕಾಲ ವಾಸವಿರಬೇಕು ಅದರಲ್ಲಿ ಕೊನೆಯ 4 ವರ್ಷಗಳ ಕಾಲ ಕಡ್ಡಾಯವಾಗಿ ಭಾರತದ ಭೂಪ್ರದೇಶದಲ್ಲಿಯೇ ವಾಸವಾಗಿರಬೇಕು. ೪ ವರ್ಷಗಳ ನಂತರ ಅರ್ಜಿ ಸಲ್ಲಿಸದರೆ ೧ ವರ್ಷ ಕಾಲ ಅರ್ಜಿಯನ್ನು ಪರಿಗಣಿಸಿ ಪೌರತ್ವ ನೀಡಲಾಗುವುದು

ಕಲೆ, ವಿಜ್ಞಾನ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾದನೆ ಮಾಡಿದವರಿಗೆ ಕೆಲವು ವಿನಾಯಿತಿ ನೀಡಿ ಪೌರತ್ವ ನೀಡಲಾಗುವುದು

ಒಂದು ಭೂ ಪ್ರದೇಶವು ಭಾರತದೊಳಗೆ ವಿಲೀನವಾದಾಗ ಸ್ವಾಭಾವಿಕವಾಗಿ ಆ ಭೂಭಾಗದ ವ್ಯಕ್ತಿ ಭಾರತದ ಪ್ರಜೆಯಾಗುತ್ತಾನೆ.

ಪೌರತ್ವ ರದ್ಧತಿ

1 ಪೌರತ್ವ ತ್ಯಜಿಸುವುದು : ಪೌರತ್ವವನ್ನು ತ್ಯಜಿಸಬೇಕು ಎಂದುಕೊಳ್ಳುವ ವ್ಯಕ್ತಿಯು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಘೋಷಿಸಿ ಪೌರತ್ವವನ್ನು ತ್ಯಜಿಸುವುದು. ಪೌರತ್ವ ತ್ಯಜಿಸದ ವ್ಯಕ್ತಿಯ ಮಕ್ಕಳು ಅಪ್ರಾಪ್ತರಾಗಿದ್ದರೆ ಅವರು ವಯಸ್ಸಿಗೆ ಬಂದ ನಂತರ ಅವರು ಬಯಸಿದಲ್ಲಿ ನಂತರ ಭಾರತದ ಪೌರತ್ವವನ್ನು ಪಡೆಯಬಹುದು.

2 ರದ್ಧುಗೊಳಿಸುವುದು : ಭಾರತದ ಪ್ರಜೆಯು ಬೇರೆ ದೇಶದ ಪೌರತ್ವವನ್ನು ಪಡೆದ ತಕ್ಷಣವೇ ಅವನ ಭಾರತದ ಪೌರತ್ವವು ರದ್ಧಾಗುತ್ತದೆ.

3 ಕಸಿದುಕೊಳ್ಳುವುದು : ಭಾರತದ ಪ್ರಜೆಯೊಬ್ಬ ಯಾವುದೇ ಮಾಹಿತಿ ನೀಡದೆ 7 ವರ್ಷಗಳ ಕಾಲ ವಿದೇಶದಲ್ಲಿ ವಾಸವಾಗಿದ್ದರೆ, ಭಾರತದ ಸಂವಿಧಾನಕ್ಕೆ ಗೌರವ ತೋರದೆ ಇದ್ದರೆ, ವಿದೇಶಿ ಪ್ರಜೆಯು ವಂಚನೆಯ ಮೂಲಕ ಭಾರತದ ಪೌರತ್ವ ಪಡೆದಿದ್ದರೆ, ನೋಂದಣಿ ಅಥವಾ ಸಹಜೀಕೃತದ ಮೂಲಕ ಭಾರತದ ಪೌರತ್ವ ಪಡೆದ ವ್ಯಕ್ತಿಯು 5 ವರ್ಷದಲ್ಲಿ 2 ಬಾರಿ ಜೈಲುವಾಸ ಅನುಭವಿಸಿದ್ದರೆ, ಭಾರತದ ಪ್ರಜೆಯು ದೇಶವಿರೋಧಿ ಕಾರ್ಯಗಳಲ್ಲಿ ತೊಡಗಿದ್ದರೆ,  ಅವನ ಪೌರತ್ವವನ್ನು ಕಸಿದುಕೊಳ್ಳಲಾಗುತ್ತದೆ.

ಪೌರತ್ವ ತಿದ್ದುಪಡಿ ಕಾಯ್ದೆಗಳು

1986, 1992, 2003, 2005 ಮತ್ತು 2019 ರಲ್ಲಿ ಒಟ್ಟು 5 ಬಾರಿ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.

2019 ರ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ಮುಸ್ಲಿಂ ಜನಾಂಗ ಹೆಚ್ಚಾಗಿ ಇರುವ ದೇಶಗಳಿಂದ ಹಿಂದೂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ಧ ಮುಂತಾದ ಧಾರ್ಮಿಕ ಅಲ್ಪಸಂಖ್ಯಾತರು ಭಾರತದ ಪೌರತ್ವ ಪಡೆಯಬಹುದೆಂದು ತಿದ್ದುಪಡಿಯಾಯಿತು.

ದ್ವಿ ಪೌರತ್ವ

2005 ಜನವರಿ 7 ರಂದು ಎಲ್.ಎಂ ಸಿಂಘ್ವಿ ಆಯೋಗದ ವರದಿಯನ್ನು ಆಧರಿಸಿ ದ್ವಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಈ ಕಾಯ್ದೆಯನ್ವಯ ವಿದೇಶಿದಲ್ಲಿ ನೆಲಸಿರುವ ಭಾರತೀಯರು ಭಾರತದಲ್ಲಿ ಬಂದು ಎಷ್ಟು ವರ್ಷ ಬೇಕಾದರೂ ಇರಬಹುದು ಮತ್ತು ಇಲ್ಲಿ ಆಸ್ತಿಯನ್ನು ಮಾಡಬಹುದು.  ಆದರೆ ಅವರಿಗೆ ಮತದಾನದ ಹಕ್ಕು, ಚುನಾವಣೆಗೆ ನಿಲ್ಲುವ ಹಕ್ಕು ಮತ್ತು ಯಾವುದೇ ಸರ್ಕಾರಿ ನೌಕರಿ ಹೊಂದುವ ಹಕ್ಕಿರುವುದಿಲ್ಲ.

ಭಾರತವು 16 ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ದ್ವಿಪೌರತ್ವವನ್ನು ನೀಡಿದೆ.

ಆಸ್ಟ್ರೇಲಿಯಾ, ಅಮೇರಿಕ, ಬ್ರಿಟನ್, ಫಿನ್ಲ್ಯಾಂಡ್, ಫ್ರಾನ್ಸ್, ಗ್ರೀಕ್, ಐರ್ಲೆಂಡ್, ಇಸ್ರೇಲ್, ಇಟಲಿ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್, ಸೈಪ್ರಸ್, ಸ್ವೀಡನ್, ಸ್ವಿಡ್ಜರ್ಲ್ಯಾಂಡ್

ಗಾಂಧಿ 1915 ಜನವರಿ 9 ರಂದು ದಕ್ಷಿಣ ಆಫ್ರಿಕಾದಿಂದ  ಭಾರತಕ್ಕೆ ಬಂದ ನೆನಪಿಗೆ ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ್ ದಿವಸ್ ಅನ್ನು ಆಚರಿಸಲಾಗುತ್ತದೆ.

ಕಾಮೆಂಟ್‌ಗಳು