ಭಾಗ 3 - ಮೂಲಭೂತ ಹಕ್ಕುಗಳು
ಭಾಗ 3 - ಮೂಲಭೂತ ಹಕ್ಕುಗಳು
ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಾಕಾರ್ಟ್ ಎಂದು ಕರೆಯುವರು. ಮ್ಯಾಗ್ನಾಕಾರ್ಟ್ ಎಂಬುದು ಪ್ರಪಂಚದಲ್ಲಿ ಮೊದಲ ಬಾರಿಗೆ 1215 ರಲ್ಲಿ ಇಂಗ್ಲೇಂಡಿನ ಅರಸ ಹೆನ್ರಿ ತನ್ನ ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಆಗಿದೆ.
ಮೂಲಭೂತ ಹಕ್ಕುಗಳ ಇತಿಹಾಸ
1895 ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ಯ ಬಿಲ್ ನಲ್ಲಿ ಪ್ರಜೆಗಳ ಹಕ್ಕುಗಳಿಗಾಗಿ ಒತ್ತಾಯಿಸಿದರು. 1925 ರಲ್ಲಿ ಶ್ರೀಮತಿ ಆನಿಬೆಸೆಂಟ್ ಅವರು ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್ ನಲ್ಲಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು.
1945 ರಲ್ಲಿ ಸಪ್ರು ವರದಿಯು ಭಾರತದ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಕುರಿತು ಶಿಫಾರಸ್ಸು ಮಾಡಿತು. 1946 ರಲ್ಲಿ ಕ್ಯಾಬಿನೆಟ್ ಆಯೋಗವು ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಳ್ಳಲು ಸಲಹಾ ಸಮಿತಿಯೊಂದನ್ನು ರಚಿಸಲು ಶಿಫಾರಸ್ಸು ಮಾಡಿತು.
ಸಂವಿಧಾನ ರಚನಾ ಸಮಿತಿಯು ಮೂಲಭೂತ ಹಕ್ಕುಗಳ ಸಲಹಾ ಸಮಿತಿಯನ್ನು ರಚಿಸಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಜೆ ಬಿ ಕೃಪಲಾನಿಯವರು ಮೂಲಭೂತ ಹಕ್ಕುಗಳ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಮೂಲಭೂತ ಹಕ್ಕುಗಳ ಸಲಹಾ ಸಮಿತಿಯ ಸದಸ್ಯರಾಗಿದ್ದವರು ಕೆ ಎಂ ಮುನ್ಷಿ, ಅಮೃತಾ ಕೌರ್, ಡಾ ಬಿ ಆರ್ ಅಂಬೇಡ್ಕರ್, ಮೌಲಾನಾ ಆಬುಲ್ ಕಲಾಂ ಆಜಾದ್ ಮತ್ತು ದೌಲತ್ ರಾಮ್
1947 ಫೆಬ್ರವರಿ 27 ರಂದು ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಳ್ಳುವ ಕುರಿತು ಮೊದಲ ಸಭೆ ನಡೆಯಿತು. ಈ ಸಭೆಯಲ್ಲಿ ಬಿ ಎನ್ ರಾವ್ ಅವರ ನೇತೃತ್ವದಲ್ಲಿ ಮೂಲಭೂತ ಹಕ್ಕುಗಳನ್ನು ಪರಿಶೀಲಿಸಲಾಯಿತು. ಇದಾದ ನಂತರ ಮೂಲಭೂತ ಹಕ್ಕುಗಳ ಪರೀಶೀಲನೆಗಾಗಿ 10 ಬಾರಿ ಸಭೆ ಸೇರಲಾಯಿತು. ಮೂಲಭೂತ ಹಕ್ಕುಗಳ ವರದಿ ತಯಾರಿಸಲು ಅಮೇರಿಕಾ ಸಂವಿಧಾನವನ್ನು ಆಕರವಾಗಿ ಬಳಸಿಕೊಳ್ಳಲಾಯಿತು.
1947 ಏಪ್ರಿಲ್ 16 ರಂದು ಮೂಲಭೂತ ಹಕ್ಕುಗಳ ಉಪಸಮಿತಿಯು ಮೂಲಭೂತ ಹಕ್ಕುಗಳ ವರದಿಯನ್ನು ಮೂಲಭೂತ ಹಕ್ಕುಗಳ ಸಮಿತಿಗೆ ಸಲ್ಲಿಸಿತು. ನಂತರ ವರದಿಯನ್ನು ಪರಿಶೀಲಿಸಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ನೇತೃತ್ವದ ಮೂಲಭೂತ ಹಕ್ಕುಗಳ ಸಮಿತಿಯು ಆ ವರದಿಯನ್ನು 1947 ಏಪ್ರಿಲ್ 29 ರಂದು ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಿತು.
1948 ಡಿಸೆಂಬರ್ 10 ರಂದು ವಿಶ್ವಸಂಸ್ಥೆ ಹೊರಡಿಸಿದ ಮಾನವಹಕ್ಕುಗಳ ಘೋಷಣೆ ಭಾರತದಲ್ಲಿ ಮಾನವ ಹಕ್ಕುಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಯಿತು. 1949 ನವೆಂಬರ್ 26 ರಂದು ಸಂವಿಧಾನ ರಚನಾ ಸಮಿತಿ ಮತ್ತು ಸಂವಿಧಾನ ಕರಡು ಸಮಿತಿಗಳು ಈ ವರದಿಗೆ ಒಪ್ಪಿಗೆ ಸೂಚಿಸಿ ಸಂವಿಧಾನದ 3ನೇ ಭಾಗದಲ್ಲಿ ಅಳವಡಿಸಿದರು.
ಪ್ರತಿವರ್ಷ ಡಿಸೆಂಬರ್ 10 ರಂದು ವಿಶ್ವಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
1967 ರ ಗೋಲಖನಾಥ್ ಪ್ರಕರಣದಲ್ಲಿ ಅಂದಿನ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧಿಶರಾಗಿದ್ದ ಕೈಲಾಸ್ ನಾಥ್ ವಾಂಚೂ ಅವರು ಮೂಲಭೂತ ಹಕ್ಕುಗಳು ಸ್ವಾಭಾವಿಕ ಹಕ್ಕುಗಳು ಅವುಗಳನ್ನು ಕಸಿಯಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದರು.
ಮೂಲಭೂತ ಹಕ್ಕುಗಳ
ಉಲ್ಲಂಘನೆಯಾದಾಗ ವ್ಯಕ್ತಿ ನೇರವಾಗಿ 32 ನೇ ವಿಧಿಯಡಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಇತರೇ ಹಕ್ಕುಗಳ ಉಲ್ಲಂಘನೆಯಾದಾಗ ನೇರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು
ಬರುವುದಿಲ್ಲ. ಆಗ 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ
ರಕ್ಷಣೆಯಿದ್ದು ಅವುಗಳ ಉಲ್ಲಂಘನೆ ಮಾಡಿದವರಿಗೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷೆ ನೀಡುತ್ತದೆ.
ಆದ್ದರಿಂದ ಸುಪ್ರೀಂಕೋರ್ಟ್ ಅನ್ನು ಮೂಲಭೂತ ಹಕ್ಕುಗಳ ರಕ್ಷಕನೆಂದು ಕರೆಯಲಾಗುತ್ತದೆ. 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ಸಹ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ.
ಮೂಲಭೂತ ಹಕ್ಕುಗಳನ್ನು
ಅನುಭವಿಸಲು ಎಷ್ಟೇ ಸ್ವಾತಂತ್ರ್ಯವಿದ್ದರೂ ಸಹ ಅವುಗಳನ್ನು ಅನುಭವಿಸಲು ಸಹ ಕೆಲವು ನಿರ್ಬಂಧಗಳಿವೆ
ಆದ್ದರಿಂದ ಮೂಲಭೂತ ಹಕ್ಕುಗಳು ನಿರ್ಬಂಧಿತ ಹಕ್ಕುಗಳಾಗಿವೆ.
ಮೂಲಭೂತ ಹಕ್ಕುಗಳನ್ನು ಸಂವಿಧಾನದ 3ನೇ ಭಾಗದಲ್ಲಿ ಪ್ರಸ್ತಾಪಿಸಲಾಗಿದ್ದು ಇವುಗಳು ನೈಸರ್ಗಿಕ ಹಕ್ಕುಗಳಿಗಿಂತ ಭಿನ್ನವಾದವುಗಳಾಗಿವೆ.
12 - ರಾಜ್ಯ ಎಂಬ ಪದದ ಅರ್ಥವನ್ನು ತಿಳಿಸುತ್ತದೆ
13ಎ - ಸಂವಿಧಾನಕ್ಕೆ ಮುಂಚೆ ಇದ್ದ ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಅನ್ವಯವಾಗುವುದಿಲ್ಲ
13ಬಿ - ಸಂವಿಧಾನದ ನಂತರ ರಚನೆಯಾಗುವ ಕಾನೂನುಗಳು ಮೂಲಭೂತ ಹಕ್ಕುಗಳಗೆ ಧಕ್ಕೆ ಮಾಡದಿರುವಂತೆ ನ್ಯಾಯಾಂಗವು ತಡೆಯುತ್ತದೆ
368ನೇ ವಿಧಿಯ ಪ್ರಕಾರ ಮೂಲ ಆಶಯಕ್ಕೆ ಧಕ್ಕೆ ಬಾರದ ಹಾಗೆ ಕಾಲಕಾಲಕ್ಕೆ ಸಂವಿಧಾನ ಅಥವಾ ಅದರ ಭಾಗಗಳನ್ನು ತಿದ್ದುಪಡಿ ಮಾಡಬಹುದು ಎಂದು ತಿಳಿಸುತ್ತದೆ. 1973 ರ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ಪ್ರಕರಣದಲ್ಲಿ ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಸರ್ವ್ ಮಿತ್ರ್ ಸಿಕ್ರಿ ತೀರ್ಪು ನೀಡಿದರು.
1980ರ ಮಿನರ್ವಾ ಮಿಲ್ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳು ರಾಜ್ಯನಿರ್ದೇಶಕ ತತ್ತ್ವಗಳಿಗಿಂತ ಹೆಚ್ಚಿನವು ಎಂದು ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿದ್ದ ಯಶ್ವಂತ್ ವಿಷ್ಣು ಚಂದ್ರಚೂಡ್ ಅವರು ತೀರ್ಪು ನೀಡಿದರು
ರಾಜ್ಯನಿರ್ದೇಶಕ ತತ್ತ್ವ ಮತ್ತು ಮೂಲಭೂತ ಹಕ್ಕುಗಳನ್ನು ಸಂವಿಧಾನ ಪ್ರಜ್ಞೆ ಎಂದು ಕರೆದವರು ಗ್ರ್ಯಾನ್ ವಿಲ್ ಆಸ್ಟಿನ್
ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿದ್ದ ನಾನಿ ಪಾಲ್ಕಿವಾಲ ಅವರು "ರಾಜ್ಯ ನಿರ್ದೇಶಕ ತತ್ತ್ವಗಳು ಸರ್ಕಾರದ ನಿರ್ದೇಶಿತ ಗುರಿಗಳಾದರೆ ಮೂಲಭೂತ ಹಕ್ಕುಗಳು ಆ ಗುರಿಯನ್ನು ಸಾಧಿಸುವ ಮಾರ್ಗಗಳಾಗಿವೆ" ಎಂದಿದ್ದಾರೆ.
1. ಸಮಾನತೆಯ ಹಕ್ಕು (14-18)
14 - ಭಾರತದ ನೆಲದಲ್ಲಿ ಕಾನೂನಿನ ಮುಂದೆ ಭಾರತೀಯರು
ಮತ್ತು ವಿದೇಶಿಯರು ಎಲ್ಲರು ಸಮಾನರು. ಕಾನೂನಿಗಿಂತ ಯಾರೂ ಅಧಿಕವಲ್ಲ. (ಕಾನೂನಿಗಿಂತ ಯಾರೂ
ಅಧಿಕವಲ್ಲ ಎಂಬ ಪರಿಕಲ್ಪನೆ ನೀಡಿದವರು ಇಂಗ್ಲೆಂಡಿನ ಎ.ವಿ ಡೈಸಿ).
ರಾಷ್ಟ್ರಪತಿ ಮತ್ತು
ರಾಜ್ಯಪಾಲರಿಗೆ ಈ ವಿಧಿಯಲ್ಲಿ ವಿನಾಯಿತಿ ಇದೆ. 361 ನೇ
ವಿಧಿಯನ್ವಯ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಅಧಿಕಾರಾವಧಿಯಲ್ಲಿರುವಾಗ ಅವರ ವಿರುದ್ಧ ಯಾರೂ
ಕ್ರಿಮಿನಲ್ ಆಪಾಧನೆಗಳನ್ನು ಆಪಾದಿಸುವಂತಿಲ್ಲ.
ವಿದೇಶಿ ರಾಯಭಾರಿಗಳು ಮತ್ತು
ಅತ್ಯುನ್ನತ ಪದಾಧಿಕಾರಿಗಳಿಗೆ ಸಹ ಭಾರತದ ಕಾನೂನು ಅನ್ವಯವಾಗುವುದಿಲ್ಲ.
15 - ಜಾತಿ. ಲಿಂಗ.
ಭಾಷೆ. ಹುಟ್ಟಿದ ಸ್ಥಳದ ಆಧಾರದ ಮೆಲೆ ತಾರತಮ್ಯ ಮಾಡುವುದು ನಿಷೇಧ
ಕೆಲವು ಸಂದರ್ಭಗಳಲ್ಲಿ ಸ್ತ್ರೀಯರು, ಮಕ್ಕಳು ಮತ್ತು ವೃದ್ಧರಿಗೆ ವಿಶೇಷ ಸವಲ್ತತುಗಳನ್ನು ನೀಡಬಹುದು
16(1) – ಸಾರ್ವಜನಿಕ ಹುದ್ದೆಗಳಲ್ಲಿ ಸಮಾನ ಅವಕಾಶ
16(2) - ಜಾತಿ.
ಲಿಂಗ. ಭಾಷೆ. ಹುಟ್ಟಿದ ಸ್ಥಳದ ಆಧಾರದ ಮೆಲೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ. ಆದರೆ
ಕಡೆಗಣಿಸಲ್ಪಟ್ಟ ವ್ಯಕ್ತಿ/ಸಮುದಾಯಕ್ಕೆ ಸರ್ಕಾರಗಳು ಮೀಸಲಾತಿ ನೀಡಬಹುದು
16(3) - ಸರ್ಕಾರಗಳು
ಬಯಸಿದರೆ ಸೂಕ್ತ ಕಾರಣ ನೀಡಿ ವಾಸಸ್ಥಳ ಆಧಾರದ ಮೇಲೆ ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು.
16(4) – ಯಾವುದೇ ಹಿಂದುಳಿದ ವರ್ಗಕ್ಕೆ ರಾಜ್ಯ ಸರ್ಕಾರವು ಸೂಕ್ತ ಕಾರಣ ನೀಡಿ ಮೀಸಲಾತಿ
ನೀಡಬಹುದು.
16 (4ಎ) ಬಡ್ತಿ ನೀಡುವಲ್ಲಿ ಸಹ
ಸರ್ಕಾರವು ಮೀಸಲಾತಿ ಅಳವಡಿಸಿಕೊಳ್ಳಬಹುದು.
17 - ಅಸ್ಪೃಶ್ಯತೆ ಆಚರಣೆಯ ನಿಷೇಧ
1955 ರ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು 1976 ರಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಎಂದು ಬದಲಾಯಿಸಲಾಯಿತು. 1989 ರಲ್ಲಿ ಅಸ್ಪೃಶ್ಯತಾ ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತರಲಾಯಿತು.
ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರವೇಶ
ನೀಡದಂತೆ ನಿರ್ಬಂಧಿಸುವುದು ಶಿಕ್ಷಾರ್ಹ ಅಪರಾಧ.
18 - ಬಿರುದುಗಳ ರದ್ಧತಿ
ಮಿಲಿಟರಿ ಮತ್ತು ಸರ್ಕಾರಿ (ಶೈಕ್ಷಣಿಕ)
ಬಿರುದುಗಳನ್ನು ನೀಡಬಹುದು ಭಾರತೀಯ ಪ್ರಜೆಯು ವಿದೇಶಿಯರಿಂದ ಬಿರುದುಗಳನ್ನು ಸ್ವೀಕರಿಸುವಂತಿಲ್ಲ
ರಾಜ್ಯದ ಯಾವುದೇ ಲಾಭದಾಯಕ
ಹುದ್ದೆ ಅಥವಾ ಅಧಿಕಾರದಲ್ಲಿರುವ ವಿದೇಶಿ ಪ್ರಜೆಯೊಬ್ಬ ರಾಷ್ಟ್ರಪತಿಗಳ ಅನುಮತಿಯಿಲ್ಲದೆ
ವಿದೇಶದಿಂದ ಯಾವುದೇ ಬಿರುದನ್ನು ಸ್ವೀಕರಿಸುವಂತಿಲ್ಲ
ರಾಜ್ಯದ ಯಾವುದೇ ಲಾಭದಾಯಕ
ಹುದ್ದೆ ಅಥವಾ ಅಧಿಕಾರದಲ್ಲಿರುವ ಭಾರತೀಯ ಅಥವಾ ವಿದೇಶಿ ಪ್ರಜೆಯೊಬ್ಬ ರಾಷ್ಟ್ರಪತಿಗಳ
ಅನುಮತಿಯಿಲ್ಲದೆ ವಿದೇಶದಿಂದ ಯಾವುದೇ ಕಾಣಿಕೆ ಅಥವಾ ಹುದ್ದೆಯನ್ನು ಸ್ವೀಕರಿಸುವಂತಿಲ್ಲ
2. ಸ್ವಾತಂತ್ರ್ಯದ ಹಕ್ಕು
(19-22)
19 ನೇ ವಿಧಿಯು ಆರು ಉಪವಿಧಿಗಳನ್ನು ಹೊಂದಿದೆ (ಈ ಹಕ್ಕುಗಳು ಭಾರತೀಯರಿಗೆ ಮಾತ್ರ ಅನ್ವಯಿಸುತ್ತವೆ)
19(1ಎ) - ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. (ಪತ್ರಿಕಾ ಸ್ವಾತಂತ್ರ್ಯ, ಇಂಟರ್ನೆಟ್ ಬಳಕೆ ಮತ್ತು ಮಾಹಿತಿ ಪಡೆಯುವ ಸ್ವಾತಂತ್ರ್ಯ ಸಹ ಇದರಲ್ಲಿ ಸೇರುತ್ತದೆ). ವಾಕ್ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಂಡು ನ್ಯಾಯಾಂಗ ನಿಂದನೆ, ಸಾರ್ವಜನಿಕ ಶಾಂತಿಗೆ ಹಾನಿ, ಮಾನ ಹಾನಿ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಹಾಗಿಲ್ಲ ಅದು ಅಪರಾಧವಾಗುತ್ತದೆ.
19(1ಬಿ) - ಅಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯ.
19(೧ಸಿ) - ಸಂಘ, ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ
19(೧ಡಿ) - ಭಾರತದಾದ್ಯಂತ ಚಲಿಸುವ ಸ್ವಾತಂತ್ರ್ಯ
19(೧ಇ) - ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಸ್ವಾತಂತ್ರ್ಯ
19(೧ಎಫ್) - ರದ್ದುಗೊಳಿಸಲಾಗಿದೆ
19(೧ಜಿ) - ಭಾರತದಾದ್ಯಂತ ಯಾವುದೇ ವೃತ್ತಿ ಅಥವಾ ವ್ಯಾಪಾರ ಮಾಡುವ ಹಕ್ಕು
20 – ಅಪರಾಧಿಯ ರಕ್ಷಣೆಯ ಹಕ್ಕು
20(1) - ಒಬ್ಬ
ವ್ಯಕ್ತಿ ಒಂದು ಅಪರಾಧ ಮಾಡಿದಾಗ ಆ ತಪ್ಪಿಗೆ ಆಗ ಏನು ಶಿಕ್ಷೆ ವಿಧಿಸಬೇಕೆಂಬ ನಿಯಮವಿರುತ್ತದೋ
ಅದನ್ನು ಮಾತ್ರ ವಿಧಿಸಬೇಕು. ಬದಲಾಗಿ ಆ ತಪ್ಪಿಗೆ ಈ ಹಿಂದೆ ನೀಡಲಾಗುತ್ತಿದ್ದ ಶಿಕ್ಷೆಯನ್ನು
ನೀಡಬಾರದು.
20(2) - ಒಬ್ಬ ಅಪರಾಧಿಗೆ ಒಂದು
ತಪ್ಪಿಗೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ನಿಡುವಂತಿಲ್ಲ
20(3) – ಒಬ್ಬ ಅಪರಾಧಿಗೆ ತನ್ನ ವಿರುದ್ದ ತಾನೆ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ
21 – ಜೀವಿಸುವ ಮತ್ತು ವೈಯಕ್ತಿಕ
ಸ್ವಾತಂತ್ರ್ಯದ ರಕ್ಷಣೆ
21(ಎ) – 2002 ರಲ್ಲಿ 86 ನೇ ತಿದ್ದುಪಡಿಯ ಮೂಲಕ ಈ ಕಾಯ್ದೆಯನ್ನು ಜಾರಿ ಮಾಡಲಾಯಿತು. 6 ರಿಂದ 14 ವರ್ಷದೊಳಗಿನ
ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು. ಈ ವಿಧಿಯಡಿಯಲ್ಲಿ 2009 ರಲ್ಲಿ R.T.E ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿತು.
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 25% ರಷ್ಟು ಸ್ಥಾನವನ್ನು R.T.E ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಮೀಸಲಿಡಬೇಕು. ಆದರೆ ಖಾಸಗಿ ಅಲ್ಪಸಂಖ್ಯಾತ ಶಾಲೆಗಳಿಗೆ ಇದು ಅನ್ವಯವಾಗುವುದಿಲ್ಲ.
22 – ಅಕ್ರಮವಾಗಿ ಒಬ್ಬ
ವ್ಯಕ್ತಿಯನ್ನು ಬಂಧಿಸುವುದನ್ನು ಈ ಹಕ್ಕು ತಡೆಯುತ್ತದೆ. ಬಂಧನಕ್ಕೊಳಗಾಗುವ ವ್ಯಕ್ತಿಗೆ ಬಂಧನದ ಕಾರಣ ತಿಳಿಸಬೇಕು. ನ್ಯಾಯಾಲಯದಲ್ಲಿ ವಿಚಾರಣೆಯಾಗುವುದಕ್ಕೂ
ಮುನ್ನ ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ ಅದನ್ನು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ) ಎನ್ನುವರು.
ನ್ಯಾಯಾಲಯದಲ್ಲಿ ವಿಚಾರಣೆಯಾದ ನಂತರ ಒಬ್ಬ ವ್ಯಕ್ತಿಯನ್ನು ಬಂಧಸಿದರೆ ಅದನ್ನು ಪ್ಯುನಿಟಿವ್
ಡಿಟೆನ್ಷನ್ ಎನ್ನುವರು.
ಕಾರಣವಿಲ್ಲದೇ ಯಾವುದೇ
ವ್ಯಕ್ತಿಯನ್ನು ಬಂಧಿಸುವಂತಿಲ್ಲ. ಬಂಧಿತನನ್ನು 24 ಗಂಟೆಯ ಒಳಗೆ (ಪ್ರಯಾಣದ ವೇಳೆಯನ್ನು
ಹೊರತುಪಡಿಸಿ) ಹತ್ತಿರದ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು. ಇದನ್ನೇ ಹೇಬಿಯಸ್ ಕಾರ್ಪಸ್
(ಬಂಧೀ ಪ್ರತ್ಯಕ್ಷೀಕರಣ) ಎನ್ನುವರು.
ಬಂಧಿತ ತನ್ನ ಪರವಾಗಿ ವಕೀಲರನ್ನು
ನೇಮಿಸಿಕೊಳ್ಳಬಹುದು.
ನ್ಯಾಯಾಲಯವು ಬಂಧನದ ಅವಧಿಯನ್ನು
ವಿಸ್ತರಣೆ ಮಾಡದಿದ್ದಲ್ಲಿ 24 ಗಂಟೆಗಳ ನಂತರ ವ್ಯಕ್ತಿ ಬಿಡುಗಡೆಯಾಗಬಹುದು. ಆದರೆ ಶತ್ರುದೇಶದ
ಪ್ರಜೆಗಳಿಗೆ ಮತ್ತು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ) ಅಡಿಯಲ್ಲಿ ಬಂಧನಕ್ಕೊಳಗಾದವರಿಗೆ ಈ ಕಾನೂನು
ಅನ್ವಯವಾಗುವುದಿಲ್ಲ.
ಬಂಧನವಾದ ವ್ಯಕ್ತಿಯು 3
ತಿಂಗಳಿಗಿಂತಲೂ ಹೆಚ್ಚುಕಾಲ ಬಂಧನದಲ್ಲಿರುವಂತಿಲ್ಲ. ಹಾಗೆ ನಿರ್ಧರಿಸುವ ಅಧಿಕಾರ ಉಚ್ಛ
ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಗೆ ಮಾತ್ರ ಇರುತ್ತದೆ. ಸಲಹಾ ಮಂಡಳಿ ಯಾವುದೇ
ಪ್ರಕರಣದಲ್ಲಿ ಅನುಸರಿಸಬೇಕಾದ ನೀತಿ ನಿಯಮಾವಳಿಗಳನ್ನು ಸಂಸತ್ತು ನಿರ್ಧರಿಸುತ್ತದೆ.
ಕೆಲವು ಸಂದರ್ಭಗಳಲ್ಲಿ ಸಲಹಾ
ಮಂಡಳಿಯ ಒಪ್ಪಿಗೆ ಇಲ್ಲದೆ ಸಂಸತ್ತು ಬಂಧಿತನನ್ನು 3 ತಿಂಗಳಿಗಿಂತ
ಹೆಚ್ಚು ಕಾಲ ಸೆರೆಯಲ್ಲಿಡಬಹುದು. ಮತ್ತು ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ)
ಅಡಿಯಲ್ಲಿ ಬಂಧಿತನಾದ ವ್ಯಕ್ತಿಯನ್ನು ಎಷ್ಟು ಕಾಲದವರೆಗೆ ಬಂಧನದಲ್ಲಿಡಬಹುದೆಂದು ಸಂಸತ್ತು
ನಿರ್ಧರಿಸಬಹುದು.
ರಕ್ಷಣೆ, ವಿದೇಶಾಂಗ
ವ್ಯವಹಾರ ಮತ್ತು ರಾಷ್ಟ್ರಿಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಉಳಿದ
ವಿಷಯಗಳ ಮೇಲೆ ಕಾನೂನು ರಚಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ನಡುವೆ ಹಂಚಿಕೆಯಾಗಿದೆ.
ಪ್ರಮುಖ ಮುನ್ನೆಚ್ಚರಿಕೆ ಬಂಧನ
ಕಾಯ್ದೆಗಳು
1974 – ಕಾಫಿಪೊಸಾ
1980 – ರಾಷ್ಟ್ರೀಯ
ಭದ್ರತಾ ಕಾಯ್ದೆ
1967 – ಕಾನೂನ ಬಾಹಿರ
ಚಟುವಟಿಕೆಗಳ ನಿಗ್ರಹ ಕಾಯ್ದೆ (ಯು.ಎ.ಪಿ.ಎ), 2019 ರಲ್ಲಿ 4ನೇ
ಬಾರಿ ತಿದ್ದುಪಡಿ
3. ಶೋಷಣೆಯ ವಿರುದ್ಧ ಹಕ್ಕು
(23-24)
23 – ಮಾನವರನ್ನು ಮಾರಾಟ
ಮಾಡುವುದು, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಅನೈತಿಕ ಕೆಲಸಗಳಿಗೆ ಬಳಸಿಕೊಳ್ಳುವುದು ಮತ್ತು ಯಾರಿಂದಲೇ ಆಗಲಿ ಬಲವಂತದ ದುಡಿಮೆ ಮಾಡಿಸುವುದನ್ನು ನಿಷೇಧಿಸುತ್ತದೆ.
ಈ ವಿಧಿಗೆ ಪೂರಕವಾದ ಕಾನೂನುಗಳು
1948 – ಕನಿಷ್ಟ ಕೂಲಿ
ಕಾಯ್ದೆ
1956 - ವ್ಯಕ್ತಿಗಳ ಅನೈತಿಕ ಮಾರಾಟ ತಡೆ ಕಾಯ್ದೆ
1961 - ವರದಕ್ಷಿಣೆ ನಿಷೇಧ ಕಾಯ್ದೆ
1970 - ಕಾರ್ಮಿಕ ಕಾಯ್ದೆ
1976 – ಜೀತಪದ್ಧತಿ
ನಿರ್ಮೂಲನಾ ಕಾಯ್ದೆ
1976 - ಸಮಾನ ವೇತನ ಕಾಯ್ದೆ
1993 - ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ
2005 - ಕೌಟುಂಬಿಕ ದೌರ್ಜನ್ಯ ಕಾಯ್ದೆ
24 - 18 ವರ್ಷಕ್ಕಿಂತ
ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಹಾಗೂ
ಇನ್ನಿತರ ಹಾನಿಕಾರಕ ವೃತ್ತಿಗಳಲ್ಲಿ ತೊಡಗಿಸುವುದರ ಮೇಲೆ ನಿಷೇದ.
1986 - ಬಾಲಕಾರ್ಮಿಕ ನಿಷೇಧ ಕಾಯ್ದೆ
4. ಧಾರ್ಮಿಕ ಸ್ವಾತಂತ್ರ್ಯದ
ಹಕ್ಕು (25-28)
25 - ಯಾವುದೇ ಧರ್ಮವನ್ನು
ಸ್ವೀಕರಿಸುವ, ಆಚರಿಸುವ ಹಕ್ಕು ಮತ್ತು ಪ್ರಚಾರ ಮಾಡುವ ಹಕ್ಕು
26 – ತಮ್ಮ ಧರ್ಮವನ್ನು ಪ್ರಚಾರ ಮಾಡಲು, ಧಾರ್ಮಿಕ ಸಂಘ ಸಂಸ್ಥೆಗಳನ್ನು
ಸ್ಥಾಪಿಸಿಕೊಳ್ಳುವ ಸ್ವಾತಂತ್ರ್ಯ
27 - ಯಾವುದೇ ಧರ್ಮದ ವ್ಯಕ್ತಿ ಅಥವಾ ಸಂಘ ತನ್ನ ಧರ್ಮದ ಸ್ಥಾಪನೆ ಮತ್ತು ಪೋಷಣೆಗೆ ತೆರಿಗೆ ಸಂಗ್ರಹಿಸಬಹುದು. ಆದರೆ ಬಲವಂತವಾಗಿ ಧಾರ್ಮಿಕ ದತ್ತಿಯನ್ನು ಸಂಗ್ರಹಿಸುವಂತಿಲ್ಲ
ಸರ್ಕಾರವು ಧಾರ್ಮಿಕ ತೆರಿಗೆ ಹಾಕುವಂತಿಲ್ಲ ಅಥವಾ ತೆರಿಗೆಯಿಂದ ಬಂದ ಹಣವನ್ನು ನಿರ್ದಿಷ್ಟ ಧರ್ಮಕ್ಕಾಗಿ ನೀಡುವಂತಿಲ್ಲ. ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಪ್ರೋತ್ಸಾಹಿಸುವಂತಿಲ್ಲ.
28 - ಸರ್ಕಾರದ ಅನುದಾನಕ್ಕೊಳಪಟ್ಟ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ. ಆದರೆ ಧಾರ್ಮಿಕ ಬೋಧನೆಗೆಂದೇ ಸ್ಥಾಪಿಸಲ್ಪಟ್ಟ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಧಾರ್ಮಿಕ ಸಂಸ್ಥೆಗಳು ಯಾರನ್ನೂ ಸಹ ಬಲವಂತವಾಗಿ ಪೂಜಾ ಸಮಾರಂಭಗಳಲ್ಲಿ ಹಾಜರಾಗಬೇಕೆಂದು ನಿಯಮ ವಿಧಿಸುವಂತಿಲ್ಲ. ಧಾರ್ಮಿಕ ಸಂಸ್ಥೆಗೆ ಹಾಜರಾಗುವ ವ್ಯಕ್ತಿಯ ಒಪ್ಪಿಗೆಯಿದ್ದರೆ ಮಾತ್ರ ಅವನಿಗೆ ಧರ್ಮಬೋಧನೆ ಮಾಡಬೇಕು. ಧಾರ್ಮಿಕ ಸಂಸ್ಥೆಗೆ ಹಾಜರಾಗುವ ವ್ಯಕ್ತಿಯು ಅಪ್ರಾಪ್ತರಾಗಿದ್ದಲ್ಲಿ ಅವರಿಗೆ ಧಾರ್ಮಿಕ ಬೋಧನೆ ಮಾಡಲು ಪೋಷಕರು ಒಪ್ಪಿಗೆ ಪಡೆಯುವುದು.
5. ಸಾಂಸ್ಕೃತಿಕ ಮತ್ತು
ಶೈಕ್ಷಣಿಕ ಹಕ್ಕುಗಳು (29-30)
29 - ಅಲ್ಪಸಂಖ್ಯಾತರ
ಭಾಷೆ, ಲಿಪಿ ಮತ್ತು ಸಂಸ್ಕೃತಿಯ ರಕ್ಷಣೆ. ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು
ನಿರ್ವಹಿಸುವ ಹಕ್ಕು.
30 - ಸರ್ಕಾರಿ
ಅಥವಾ ಸರ್ಕಾರದಿಂದ ಅನುದಾನ ಪಡೆಯುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ, ಜನಾಂಗ,
ಜಾತಿ ಅಥವಾ ಭಾಷಾ ಅಧಾರದ ಮೇಲೆ ಪ್ರವೇಶ ನಿರಾಕರಿಸುವಂತಿಲ್ಲ. ಸರ್ಕಾರವು ಸಹ ಈ
ಅಂಶಗಳನ್ನು ಆಧರಿಸಿ ತಾರತಮ್ಯ ಮಾಡುವಂತಿಲ್ಲ.
31 – ಆಸ್ತಿಯ ಹಕ್ಕು. ಮೊರಾರ್ಜಿ ದೇಸಾಯಿ ಅವರ ಜನತಾ ಸರ್ಕಾರದ ಅವಧಿಯಲ್ಲಿ 1978 ರಲ್ಲಿ 44ನೇ ತಿದ್ದುಪಡಿಯ ಮೂಲಕ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದುಹಾಕಲಾಯಿತು. 1979 ಜೂನ್ 30 ರಂದು 19(1) ಎಫ್ ಮತ್ತು 31ನೇ ವಿಧಿಯಾದ ಆಸ್ತಿಯ ಹಕ್ಕನ್ನು ತೆಗದು 300 ಎ ವಿಧಿಯನ್ನಾಗಿಸಿ ಆಸ್ತಿಯ ಹಕ್ಕನ್ನು ಕಾನೂನಾತ್ಮಕ ಹಕ್ಕನ್ನಾಗಿ ಮಾಡಲಾಯಿತು.
6. ಸಂವಿಧಾನಾತ್ಮಕ
ಪರಿಹಾರಗಳ ಹಕ್ಕು (32)
32 ನೇ ಹಕ್ಕು ಮೇಲಿನ ಎಲ್ಲಾ
ಹಕ್ಕುಗಳ ಮೇಲೆ ಯಾರೂ ಸಹ ಯಾವುದೇ ನಿರ್ಬಂಧ ಹೇರದಂತೆ ರಕ್ಷಣೆ ನೀಡುತ್ತದೆ. ಡಾ
ಬಿ.ಆರ್.ಅಂಬೇಡ್ಕರ್ 32 ನೇ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದಿರುವರು
ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ 32 ನೇ ವಿಧಿಯಲ್ಲಿ ಇರುವ ರಿಟ್ ಗಳನ್ನು ನ್ಯಾಯಾಲಯಗಳು ಹೊರಡಿಸಬಹುದು. 139ನೇ ವಿಧಿಯಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು 226ನೇ ವಿಧಿಯ ಪ್ರಕಾರ ಉಚ್ಚ ನ್ಯಾಯಾಲಯ ರಿಟ್ ಗಳನ್ನು ಹೊರಡಿಸುತ್ತವೆ. ಸುಪ್ರೀಂ ಕೋರ್ಟ್ 32 ನೇ ವಿಧಿಯನ್ನು ಸಂವಿಧಾನದ ಮೂಲಭೂತ ಸಂರಚನೆ ಎಂದು ಭಾವಿಸಿದೆ.
359 ನೆ ವಿಧಿಯನ್ವಯ 20 ಮತ್ತು 21 ನೇ ವಿಧಿಗಳನ್ನು
ಹೊರತುಪಡಿಸಿ ಉಳಿದ ಎಲ್ಲಾ ಹಕ್ಕುಗಳನ್ನು ನಿರ್ಬಂಧಿಸುವ ಮತ್ತು ಯಾರೂ ಸಹ ಮೂಲಭೂತ ಹಕ್ಕುಗಳಿಗಾಗಿ
ಸುಪ್ರೀಂ ಕೋರ್ಟ್ ನ ಮೊರೆ ಹೋಗದಂತೆ ರಾಷ್ಟ್ರಪತಿ ನಿರ್ಬಂಧ ಹೇರಬಹುದಾಗಿದೆ.
ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ 32ನೇ ವಿಧಿಯ ಪ್ರಕಾರ ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿಗಳನ್ನು ಮಾತ್ರ ಜಾರಿಗೊಳಿಸಲು ಹಕ್ಕಿದೆ, ರಾಜ್ಯ ಹೈಕೋರ್ಟ್‍ಗಳಿಗೆ ರಿಟ್ ಗಳ ಜೊತೆಗೆ ಇತರ ರಿಟ್ ಗಳನ್ನು ಜಾರಿಗೊಳಿಸುವ ಅಧಿಕಾರವೂ ಇದೆ. ರಿಟ್ ಗಳನ್ನು ಜಾರಿಗೊಳಿಸುವಲ್ಲಿ ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಹೈಕೋರ್ಟ್ ಗಿಂತಲೂ ಕಡಿಮೆ ವ್ಯಾಪ್ತಿಯದು
ಭೂಪ್ರದೇಶದ ವಿಸ್ತೀರ್ಣಕ್ಕೆ ಬಂದಾಗ ರಿಟ್ ಗಳನ್ನು ಹೊರಡಿಸುವಲ್ಲಿ ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಹೈಕೋರ್ಟ್ ಗಿಂತಲೂ ವಿಶಾಲವಾದುದು. ಸುಪ್ರೀಂ ಕೋರ್ಟ್ ನ ವ್ಯಾಪ್ತಿ ಇಡೀ ದೇಶಕ್ಕೆ ಅನ್ವಯವಾದರೆ ಹೈಕೋಟ್ ನ ವ್ಯಾಪ್ತಿ ಅದರ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಇರುವ 32 ನೇ ವಿಧಿಯನ್ವಯ ರಿಟ್ ಗಳನ್ನು ಚಲಾಯಿಸುವುದು ಸುಪ್ರೀಂ ಕೋರ್ಟ್ ನ ಮುಖ್ಯ ಕರ್ತವ್ಯವಾಗಿದ್ದು ಅದನ್ನು ಸುಪ್ರೀಂಕೋರ್ಟ್ ಸಹ ನಿರಾಕರಿಸುವಂತಿಲ್ಲ. ಆದರೆ ಹೈಕೋರ್ಟ್‍ಗಳು ರಿಟ್ ಅನ್ನು ಹೊರಡಿಸುವುದು ವಿವೇಚನಾಧಿಕಾರಕ್ಕೆ ಬಿಟ್ಟಿದ್ದು. ಹೈಕೋರ್ಟ್ ಗಳು ರಿಟ್ ಹೊರಡಿಸುವುದನ್ನು ನಿರಾಕರಿಸಬಹುದು.
ರಿಟ್ ಗಳು
ಬಂಧಿ ಪ್ರತ್ಯಕ್ಷೀಕರಣ (ಹೇಬಿಯಸ್
ಕಾರ್ಪಸ್): ಯಾವುದೇ ವ್ಯಕ್ತಿಯನ್ನು ಪ್ರಯಾಣದ ಸಮಯವನ್ನು ಹೊರತುಪಡಿಸಿ ಬಂಧಿಸಿದ 24 ಗಂಟೆಗಳ ಒಳಗೆ ಹತ್ತಿರದ ನ್ಯಾಯಾಲಯಕ್ಕೆ ಹಾಜರು
ಪಡಿಸಬೇಕು. ಆದರೆ ಕ್ರಿಮಿನಲ್ ಪ್ರಕರಣಕ್ಕೆ ಈ ರಿಟ್ ಅನ್ವಯವಾಗುವುದಿಲ್ಲ
ಪರಮಾದೇಶ (ಮ್ಯಾಂಡಮಸ್): ನಾವು
ಆದೇಶಿಸುತ್ತಿದ್ದೇವೆ ಎಂಬುದು ಈ ಪದದ ಅರ್ಥ. ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ
ಸಾರ್ವಜನಿಕ ಅಧಿಕಾರಿ ಅಥವಾ ಸಂಸ್ಥೆ ಮತ್ತು ಕೆಳನ್ಯಾಯಾಲಯಗಳ ಮೇಲೆ ಮೇಲಿನ ನ್ಯಾಯಾಲಯವು ಪರಮಾದೇಶವನ್ನು ಹೊರಡಿಸಬಹುದು.
ಆದರೆ ಖಾಸಗಿ ವ್ಯಕ್ತಿ/ಸಂಸ್ಥೆ, ಶಾಸನಾತ್ಮಕ ಕಾನೂನುಗಳು, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ
ಇದನ್ನು ಪ್ರಯೋಗಿಸಲು ಸಾಧ್ಯವಿಲ್ಲ
ಪ್ರತಿಬಂಧಕಾಜ್ಞೆ
(ಪ್ರೊಹಿಬಿಷನ್): ಕೆಳ ನ್ಯಾಯಾಲಯಗಳು
ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಧಿಕಾರ ಚಲಾಯಿಸುವುದನ್ನು ಮತ್ತು ತೀರ್ಪು ನೀಡುವುದನ್ನು ಮೇಲಿನ ನ್ಯಾಯಾಲಯವು
ತಡೆಹಿಡಿಯುವುದನ್ನು ಅಥವಾ ರದ್ದುಪಡಿಸುವುದನ್ನು ಪ್ರತಿಬಂಧಕಾಜ್ಞೆ ಎನ್ನುವರು.
ಸರ್ಷಿಯೋರರಿ (ಉತ್ಪ್ರೇಕ್ಷಣಾ
ಲೇಖನ): ಕೆಳ ನ್ಯಾಯಾಲಯಗಳು ದೋಷಪೂರಿತ ತೀರ್ಪು ನೀಡಿದಾಗ ಅಥವಾ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ತೀರ್ಪು ನೀಡಿದಾಗ ಆ ವಿಷಯವನ್ನು ಮೇಲಿನ
ನ್ಯಾಯಾಲಯವು ತನ್ನ ಅಧೀನಕ್ಕೆ ತೆಗೆದುಕೊಂಡು ತೀರ್ಪು ನೀಡುವುದನ್ನು ಅಥವಾ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವುದನ್ನು ಉತ್ಪ್ರೇಕ್ಷಣಾ ಲೇಖನ
ಎನ್ನುವರು.
ಕೋ ವಾರೆಂಟೊ: ಒಬ್ಬ
ವ್ಯಕ್ತಿಯು ತನ್ನ ಅರ್ಹತೆಯನ್ನು ಮೀರಿ ಸಾರ್ವಜನಿಕ ಹುದ್ದೆಯನ್ನು ಹೊಂದಿದ್ದರೆ ಅವನ ಅರ್ಹತೆಯ ಬಗ್ಗೆ ವಿಚಾರಣೆ ನಡೆಸುವುದೇ ಕೋ
ವಾರೆಂಟೊ ಎನ್ನುವರು.
33 - ಸಶಸ್ತ್ರ ಪಡೆಗಳು, ಅರೆ ಸೇನಾ ಪಡೆಗಳು, ಪೊಲೀಸ್ ಪಡೆಗಳು, ಮತ್ತು ಗುಪ್ತಚರ
ವಿಭಾಗ ಇವುಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಅಧಿಕಾರ ಸಂಸತ್ತಿಗಿದೆ. ಈ ವಿಧಿಯಡಿಯಲ್ಲಿ
ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.
33ನೇ ವಿಧಿಗೆ ಪೂರಕವಾದ ಕೆಲವು
ಕಾನೂನುಗಳು
1950 – ಆರ್ಮಿ ಆ್ಯಕ್ಟ್, ನೌಕಾಪಡೆ ಕಾಯ್ದೆ
1966 - ದಿ ಪೊಲೀಸ್ ಫೋರ್ಸ್
ಆ್ಯಕ್ಟ್ (ರಿಸ್ಟ್ರಿಕ್ಷನ್ ಆಫ್ ರೈಟ್ಸ್)
1968 – ಗಡಿ ಭದ್ರತಾ ಪಡೆ
ಕಾಯ್ದೆ
34 – ಮಾರ್ಷಲ್
(ಮಿಲಿಟರಿ) ಕಾನೂನಿನ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ದೇಶದಲ್ಲಿ ಆಂತರಿಕ ಗಲಭೆ, ಯುದ್ದ ಮುಂತಾದ
ಸನ್ನಿವೇಶಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಮಾರ್ಷಲ್ ಕಾನೂನು ಜಾರಿ ಮಾಡುವ ಮತ್ತು ಆ ಭಾಗದಲ್ಲಿ
ಈ ವಿಧಿಯನ್ವಯ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹಾಕುವ ಅಧಿಕಾರವನ್ನ ಸಂಸತ್ತಿಗೆ ನೀಡಲಾಗಿದೆ. ಈ
ಅಧಿಕಾರವನ್ನು ಆ್ಯಕ್ಟ್ ಆಫ್ ಇಂಡೆಮ್ನಿಟಿ ಎಂದು ಕರೆಯಲಾಗಿದ್ದು ಇದರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
35 – ಈ ವಿಧಿಯನ್ವಯ ಮೂಲಭೂತ ಹಕ್ಕುಗಳನ್ನು ಮಾಡುವ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ನೀಡಲಾಗಿದೆ. ರಾಜ್ಯದ ವಿಧಾನಮಂಡಲಕ್ಕೆ ಅಥವಾ ಶಾಸಕಾಂಗಗಳಿಗೆ ಈ ಅಧಿಕಾರ ಇಲ್ಲ.
35(ಎ) - ಕಾಶ್ಮೀರದ ನಿವಾಸಿಗಳಿಗೆ ಪ್ರತ್ಯೇಕ ಗುರುತು ನೀಡಲಾಗಿದ್ದ ಈ ವಿಧಿಯನ್ನು 2019 ಆಗಸ್ಟ್ 5 ರಂದು ರದ್ದುಗೊಳಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ