ಸಂವಿಧಾನ ರಚನಾಸಭೆ
ಸಂವಿಧಾನ ರಚನಾಸಭೆ
ಮೊದಲ ಬಾರಿಗೆ ಗಾಂಧೀಜಿ 1922 ರಲ್ಲಿ
ಅನೌಪಚಾರಿಕವಾಗಿ ಸಂವಿಧಾನದ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರದ ಮುಂದೆ ಇರಿಸಿದರು. 1934 ರಲ್ಲಿ ಸಂವಿಧಾನ
ರಚನಾ ಸಭೆಗೆ ಮೊದಲು ಒತ್ತಾಯಿಸಿದವರು ಮನಬೇಂದ್ರನಾಥ್ ರಾಯ್ (ಎಂ.ಎನ್ ರಾಯ್). ಎಮ್ ಎಮ್ ರಾಯ್
ಅವರು ರ್ಯಾಡಿಕಲ್ ಹಿಮೋನಿಸಂ ಎಂಬ ಸಘವನ್ನು ಸ್ಥಾಪಿಸಿದರು. 1945 ರಲ್ಲಿ ಬ್ರಿಟಿಷ್
ಸರ್ಕಾರಕ್ಕೆ ಕನತಾ ಯೋಜನೆಯ ಪರಿಕಲ್ಪನೆಯನ್ನು ನೀಡಿದರು.
1935 ರಲ್ಲಿ ಭಾರತೀಯ
ರಾಷ್ಟ್ರೀಯ ಕಾಂಗ್ರೆಸ್ ಅಧಿಕೃತವಾಗಿ ಸಂವಿಧಾನ ರಚನೆಗೆ ಬೇಡಿಕೆಯಿಟ್ಟಿತು. 1938 ರಲ್ಲಿ ಜವಾಹರ್
ಲಾಲ್ ನೆಹರು ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಆರಿಸಿಬಂದ ಜನಪ್ರತಿನಿಧಿಗಳು ಸಂವಿಧಾನ ರಚನಾ
ಸಭೆಯ ಸದಸ್ಯರಾಗಿರಬೇಕೆಂದು ಘೋಷಿಸಿದರು.
1940 ಆಗಸ್ಟ್ 8 ರ ಆಗಸ್ಟ್
ಕೊಡುಗೆಯಲ್ಲಿ ಬ್ರಿಟಿಷ್ ಸರ್ಕಾರ ಸಂವಿಧಾನ ರಚನಾ ಸಭೆಗೆ ಅಂಗೀಕರಿಸಿತು. 1942 ರಲ್ಲಿ ಕ್ರಿಪ್ಸ್
ಆಯೋಗವು ಸಂವಿಧಾನ ರಚನಾ ಸಭೆಗೆ ಸಲಹೆ ನೀಡಲು ಭಾರತಕ್ಕೆ ಆಗಮಿಸಿತು. ಆದರೆ ಮಹ್ಮದ್ ಅಲಿ ಜಿನ್ನಾ
ಕಾರಣದಿಂದ ಈ ಆಯೋಗದ ವರದಿಯು ಜಾರಿಯಾಗಲಿಲ್ಲ.
1946 ಮಾರ್ಚ್ 24 ರಂದು
ಕ್ಲೆಮೆಂಟ್ ಅಟ್ಲಿ ನೇತೃತ್ವದಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಬಂದಿತು. ಲಾರ್ಡ್ ಪೆತಿಕ್
ಲಾರೆನ್ಸ್ (ರಾಜ್ಯ ಕಾರ್ಯದರ್ಶಿ), ಸ್ಟಾಫೋರ್ಡ್ ಕ್ರಿಪ್ಸ್ (ವಾಣಿಜ್ಯ ಮಂಡಳಿಯ ಅಧ್ಯಕ್ಷ), ಎ ವಿ
ಅಲೆಗ್ಸಾಂಡರ್ (ನೌಕಾಪಡೆಯ ಕ್ಯಾಪ್ಟನ್) ಈ ಆಯೋಗದ ಸದಸ್ಯರಾಗಿದ್ದರು.
ಪರೋಕ್ಷ ಚುನಾವಣೆಯ ಮೂಲಕ
ಆರಿಸಿಬಂದ ಸದಸ್ಯರನ್ನು ಒಳಗೊಂಡ ಸಂವಿಧಾನ ರಚನಾ ಸಭೆ ರಚನೆ.
ತಾತ್ಕಾಲಿಕ ಸರ್ಕಾರದ ರಚನೆಗೆ
ಅವಕಾಶ
ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯ
ತಿರಸ್ಕಾರ
ಭಾರತಕ್ಕೆ ಒಕ್ಕೂಟದ ಸ್ಥಾನಮಾನ
ಸಂವಿಧಾನ ರಚನಾ ಸಭೆಯ ಸದಸ್ಯರ
ಸಂಖ್ಯೆ 389 ಇರುವಂತೆ ಸೂಚನೆ
ಸಂವಿಧಾನ ರಚನಾ ಸಭೆಗೆ 1946 ಜುಲೈ ೬ ರಂದು
ಚುನಾವಣೆಗಳು ನಡೆದು ವಿವಿಧ ಪ್ರಾಂತ್ಯ, ಧರ್ಮ, ವರ್ಗಗಳನ್ನು
ಪ್ರತಿನಿಧಿಸುವ ಜನಪ್ರತಿನಿಧಿಗಳು ಸದಸ್ಯರಾಗಿ ಆಯ್ಕೆಗೊಂಡರು. ಒಟ್ಟು ಸದಸ್ಯರ ಸಂಖ್ಯೆ 389. ಪ್ರಾಂತೀಯ ಶಾಸನ
ಸಭೆಗಳಿಂದ 292 ಚುನಾಯಿತ ಸದಸ್ಯರು, ದೇಶಿಯ
ಸಂಸ್ಥಾನಗಳಿಂದ 93 ನಾಮಕರಣ ಸದಸ್ಯರು, ಕೇಂದ್ರಾಡಳಿತ
ಪ್ರದೇಶದಿಂದ 4 ಜನ
ಸದಸ್ಯರಿದ್ದರು. 389 ಸದಸ್ಯರಲ್ಲಿ 15 ಮಹಿಳಾ ಸದಸ್ಯರು
ಆಯ್ಕೆಯಾಗಿದ್ದರು.
ಬ್ರಿಟಿಷ್ ಇಂಡಿಯಾದಿಂದ 296 ಜನ. ಇದರಲ್ಲಿ 292 ಜನ ಗವರ್ನರ್
ಪ್ರಾಂತ್ಯಗಳಿಂದ ಉಳಿದ 4 ಜನ ಚೀಫ್
ಕಮಿಷನರ್ ಪ್ರಾಂತ್ಯಗಳಿಂದ. ದೆಹಲಿ, ಸಜ್ಮೀರ್, ಕೊಡಗು ಮತ್ತು
ಬಲೂಚಿಸ್ತಾನ ಇವು ಚೀಫ್ ಕಮಿಷನರ್ ಗಳ ಆಳ್ವಿಕೆಯಲ್ಲಿದ್ದವು. ಉಳಿದ 93 ಜನ ದೇಶಿಯ
ಸಂಸ್ಥಾನಗಳಿಂದ ಆಯ್ಕೆ.
ಪಕ್ಷಾಧಾರಿತವಾಗಿ: ಕಾಂಗ್ರೇಸ್
ಪಕ್ಷದಿಂದ 208 ಸದಸ್ಯರು, ಮುಸ್ಲಿಮ್ ಲೀಗ್
ನಿಂದ 73 ಸದಸ್ಯರು ಮತ್ತು
ಇತರ ಪಕ್ಷಗಳು ಹಾಗೂ ಪಕ್ಷೇತರರಿಂದ 15 ಸದಸ್ಯರು ಆಯ್ಕೆಯಾದರು
ಧರ್ಮಾಧಾರಿತವಾಗಿ : ಹಿಂದು 163, ಮುಸ್ಲಿಂ 80, ಎಸ್ ಸಿ 31, ಎಸ್ ಟಿ 6, ಕ್ರಿಶ್ಚಿಯನ್ 6, ಸಿಖ್ 4, ಆಂಗ್ಲೊ ಇಂಡಿಯನ್ 3 ಮತ್ತು ಪಾರ್ಸಿ 3
ಸಂವಿಧಾನ ರಚನಾ ಸಭೆಯ ಪ್ರಥಮ ಸಭೆ 9 ಡಿಸೆಂಬರ್ 1946 ರಂದು ದೆಹಲಿಯಲ್ಲಿ
ನಡೆಯಿತು. ಹಾಜರಾದ ಸದಸ್ಯರ ಸಂಕ್ಯೆ 211. ಸಚ್ಚಿದಾನಂದ ಸಿನ್ಹಾ ಅವರನ್ನು
ತಾತ್ಕಾಲಿಕವಾಗಿ ಈ ಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಸಮಯದಲ್ಲಿ ಜೆ ಬಿ ಕೃಪಲಾನಿ
ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು
ಸಂವಿಧಾನ ರಚನಾ ಸಭೆಯ 2ನೇ
ಸಭೆ ಡಿಸೆಂಬರ್ 11 1946 ರಂದು ದೆಹಲಿಯಲ್ಲಿ ನಡೆಯಿತು. ಡಾ
ಬಾಬು ರಾಜೇಂದ್ರ ಪ್ರಸಾದರನ್ನು ಖಾಯಂ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಟಿ ಟಿ
ಕೃಷ್ಣಮಾಚಾರಿ ಮತ್ತು ಹೆಚ್ ಸಿ ಮುಖರ್ಜಿಯವರನ್ನು ನೇಮಿಸಲಾಯಿತು. ಬಿ ಎನ್ ರಾಯ್ ಅವರು
ಸಾಂವಿಧಾನಿಕ ಕಾನೂನು ಸಲಹೆಗಾರರಾಗಿ ನೇಮಕವಾದರು. ಬಿ.ಎನ್ ರಾಯ್ ಅವರು ಅಂತರಾಷ್ಟ್ರಿಯ
ನ್ಯಾಯಾಲಯದಲ್ಲಿ ಮೊದಲ ಭಾರತದ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. 1952 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿನಿಧಿಯಾಗಿ
ಕಾರ್ಯನಿರ್ವಹಿಸಿದ್ದಾರೆ. ಸಂವಿಧಾನದ ಕರಡು ಪ್ರತಿಯನ್ನು ಮೊದಲಬಾರಿಗೆ ಕೈಬರಹದ ಮೂಲಕ ಬರೆದು
ಸಿದ್ಧಪಡಿಸಿದರು.
13 ಡಿಸೆಂಬರ್ 1946 ರಂದು ಜವಾಹರ್
ಲಾಲ್ ನೆಹರು ಅವರು ಸಂವಿಧಾನದ ಧ್ಯೆಯಗಳ ನಿರ್ಣಯವನ್ನು ಮಂಡಿಸಿದರು. 22 ಡಿಸೆಂಬರ್ 1946 ರಂದು ಈ
ನಿರ್ಣಯಗಳನ್ನು ಅಳವಡಿಸಿಕೊಳ್ಳಲಾಯಿತು. ಈ ನಿರ್ಣಯಗಳು ಭಾರತವು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ
ಎಂಬುದಾಗಿ ಘೋಷಿಸಿದವು.
ಸಂವಿಧಾನ ರಚನೆಗೆ ತೆಗೆದುಕೊಂಡ
ಕಾಲಾವಧಿ 2 ವರ್ಷ 11 ತಿಂಗಳು 18 ದಿನಗಳು. ಕರಡು
ಪ್ರತಿ ಸಿದ್ದಪಡಿಸಲು ತೆಗೆದುಕೊಂಡ ಅವಧಿ 114 ದಿನಗಳು.
ಸಂವಿಧಾನಕ್ಕೆ ಸಹಿ ಹಾಕಿದ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ 284. ಸಂವಿಧಾನದ ಕರಡು
ಪ್ರತಿಯನ್ನು ಸಿದ್ಧಪಡಿಸಿದವರು ಪ್ರೇಮ್ ಬಿಹಾರಿ ನರೈನ್ ರೈಝಡ
ಸಂವಿಧಾನ
ಸಮಿತಿಗಳು
1947 ಆಗಸ್ಟ್ 14 ರಂದು ಒಟ್ಟು 22 ಸಮಿತಿಗಳನ್ನು ರಚಿಸಲಾಯಿತು. ಅವುಗಳಲ್ಲಿ 10 ಕಾರ್ಯವಿಧಾನ ಸಮಿತಿಗಳು ೧೨ ಪ್ರತ್ಯೇಕ ಸಮಿತಿಗಳು. ಜೊತೆಗೆ 5 ಉಪಸಮಿತಿಗಳನ್ನು ರಚಿಸಲಾಗಿತ್ತು
ಸಮಿತಿಗಳು
ಜವಾಹರ್ ಲಾಲ್ ನೆಹರು : ಕೇಂದ್ರ ಸಂವಿಧಾನ ಸಮಿತಿ, ಕೇಂದ್ರ ಅಧಿಕಾರಗಳ ಸಮಿತಿ
ಸರ್ದಾರ್ ವಲ್ಲಭಬಾಯಿ ಪಟೇಲ್ : ಮೂಲಭೂತ ಹಕ್ಕುಗಳ
ಸಮಿತಿ, ಪ್ರಾಂತೀಯ ಸಂವಿಧಾನ ಸಮಿತಿ, ಅಲ್ಪ ಸಂಖ್ಯಾತರ ರಕ್ಷಣಾ ಸಮಿತಿ, ಸಲಹಾ ಸಮಿತಿ, ಬುಡಕಟ್ಟು ವರ್ಗಗಳ ಸಮಿತಿ
ಡಾ. ಬಿ.ಆರ್ ಅಂಬೇಡ್ಕರ್ : ಕರಡು ಸಮಿತಿ
ಎಚ್.ಸಿ ಮುಖರ್ಜಿ : ಅಲ್ಪ ಸಂಖ್ಯಾತರ
ರಕ್ಷಣಾ ಉಪಸಮಿತಿ
ಡಾ. ರಾಜೇಂದ್ರ ಪ್ರಸಾದ್ : ನಿಯಮಾವಳಿ ಸಮಿತಿ, ಚಾಲನಾ ಸಮಿತಿ, ರಾಜ್ಯಗಳೊಂದಿಗೆ
ಸಂಧಾನ ಸಮಿತಿ, ತಾತ್ಕಾಲಿಕ ರಾಷ್ಟ್ರೀಯ ಧ್ವಜ ಸಮಿತಿ, ಹಣಕಾಸು ಸಮಿತಿ
ಜೆ.ಬಿ ಕೃಪಲಾನಿ : ಮೂಲಭೂತ ಹಕ್ಕುಗಳ
ಉಪಸಮಿತಿ
ಎಸ್ ವರದಾಚಾರ್ಯ : ತಾತ್ಕಾಲಿಕ
ನಾಗರಿಕತ್ವ ಸಮಿತಿ
ಪಟ್ಟಾಭಿ ಸೀತಾರಾಮಯ್ಯ : ಸದನ ಸಮಿತಿ
ಎಸ್.ಕೆ ಧಾರ್ : ಪ್ರಾಂತ್ಯಗಳ ಭಾಷಾ
ಕಮಿಷನರ್
ಜಿ.ವಿ
ಮಾವಳಕರ : ಸಂವಿಧಾನದ ಸಭೆಗಳ ಕಾರ್ಯಕಲಾಪಗಳ ಸಮಿತಿ
ಅಲ್ಲಾಡಿ ಕೃಷ್ಣಸ್ವಾಮಿ
ಅಯ್ಯಂಗಾರ್ : ಕರಡು ಪರಿಶೀಲನಾ ವಿಶೇಷ ಸಮಿತಿ
ನಾರಾಯಣ ಸಿನ್ಹಾ : ಆರ್ಥಿಕ
ಮತ್ತು ಸಿಬ್ಬಂದಿ
ಉಪಸಮಿತಿಗಳು
ಜೆ ಬಿ ಕೃಪಲಾನಿ : ಮೂಲಭೂತ ಹಕ್ಕುಗಳ ಉಪಸಮಿತಿ
ಎಚ್ ಸಿ ಮುಖರ್ಜಿ : ಅಲ್ಪಸಂಖ್ಯಾತರ ಉಪಸಮಿತಿ
ಗೋಪಿನಾಥ : ಈಶಾನ್ಯ ರಾಜ್ಯಗಳ ಗಡಿ ಉಪಸಮಿತಿ
ಎ ವಿ ಠಕ್ಕರ್ : ಹೊರಗಿಡಲಾದ ಮತ್ತು ಭಾಗಶಃ ಹೊರಗಿಡಲಾದ
ಪ್ರದೇಶಗಳ ಸಮಿತಿ
ಸಂವಿಧಾನ ರಚನಾ
ಸಭೆಯಲ್ಲಿದ್ದ ವಿವಿಧ ಸಮುದಾಯದ ಪ್ರತಿನಿಧಿಗಳು
ಕ್ರೈಸ್ತ - ಎಚ್.ಸಿ ಮುಖರ್ಜಿ, ರಾಜಕುಮರಿ ಅಮೃತಾ
ಕೌರ್, ಜಾನ್ ಮ್ಯಾಥ್ಯೂ
ಆಂಗ್ಲೋ ಇಂಡಿಯನ್ - ಫ್ರಾಂಕ್
ಆ್ಯಂಥೋನಿ
ಪರಿಶಿಷ್ಟ ಜಾತಿ - ಡಾ ಬಿ.ಆರ್
ಅಂಬೇಡ್ಕರ್
ಗುರ್ಕಾ ಸಮುದಾಯ - ಹರಿಬಹಾದ್ದೂರ್
ಬುರಾ
ಕಮ್ಯೂನಿಸ್ಟ್ - ಸೋಮನಾಥ ಲಹರಿ
ಸಿಖ್ - ಬಲ್‍ದೇವ್ ಸಿಂಗ್, ಹುಕುಮ್ ಸಿಂಗ್, ಉಜ್ವಲ್ ಸಿಂಗ್
ಪಾರ್ಸಿ - ಎಚ್.ಸಿ ಮೋದಿ, ಮೀನೂ ಮಸಾನೆ, ಆರ್,ಎಚ್
ಸಿದ್ವಾ
ಮುಸ್ಲಿಂ - ಎಮ್.ಇಸ್ಮಾಯಿಲ್
ಖಾನ್, ಚೌದ್ರಿ ಕಾಲಿ ಖುಸಾನಾ, ಬೇಗಂ ರಸೂಲ್, ಮೌಲಾನಾ ಹಸ್ರತ್
ಮುಹಾನೆ.
ಮೈಸೂರು ಪ್ರಾಂತ್ಯದಿಂದ : ಕೆ.ಸಿ
ರೆಡ್ಡಿ, ಟಿ.ಸಿದ್ದಲಿಂಗಯ್ಯ, ಟಚ್.ಆರ್ ಗುರುದೇವ್ ರೆಡ್ಡಿ, ಎಸ್.ವಿ
ಕೃಷ್ಣಮೂರ್ತಿರಾವ್, ಕೆ ಹನುಮಂತಯ್ಯ, ಎಚ್.ಸಿದ್ದವೀರಪ್ಪ, ಟಿ ಚೆನ್ನಯ್ಯ
ಬಾಂಬೆ ಪ್ರಾಂತ್ಯದಿಂದ : ಆರ್
ಆರ್ ದಿವಾಕರ್, ಎಸ್ ನಿಜಲಿಂಗಪ್ಪ
ಕೊಡಗು ಪ್ರಾಂತ್ಯದಿಂದ : ಕೆ ಎಮ್
ಪುನ್ನಚ್ಚ
ಸಂವಿಧಾನ ರಚನಾ
ಸಭೆಯಲ್ಲಿದ್ದ 15 ಮಹಿಳಾ ಪ್ರತಿನಿಧಿಗಳು
ಸರೋಜಿನಿ ನಾಯ್ಡು, ಅಮ್ಮು
ಸ್ವಾಮಿನಾಥನ್, ಆನಿ ಮ್ಯಾಸ್ಕರೀನ್, ದಾಕ್ಷಾಯಿನಿ
ವೇಲಾಯುಧನ್, ಬೇಗಮ್ ಐಜಾಜ್ ರಸೂಲ್, ದುರ್ಗಾಬಾಯಿ ದೇಶ್‌ಮುಖ್, ಹನ್ಸಾ ಜೀವರಾಜ್
ಮೆಹ್ತಾ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ಪೂರ್ಣಿಮಾ
ಬೆನರ್ಜಿ, ರಾಜಕುಮಾರಿ ಅಮೃತ್ ಕೌರ್, ರೇನುಕಾ ರಾಯ್, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ
ಪಂಡಿತ್
ಸಂವಿಧಾನದ ಕರಡು
ರಚನಾ ಸಮಿತಿ
ಡಾ. ಬಿ. ಆರ್. ಅಂಬೇಡ್ಕರ್ ಕರಡು
ಸಮಿತಿ ಅಧ್ಯಕ್ಷರು. ಇವರು ಸಂವಿಧಾನ ರಚನಾ ಸಮಿತಿಗೆ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದರು.
ಕರಡು ಸಮಿತಿಯನ್ನು 1947 ಆಗಸ್ಟ್ 29 ರಂದು ರಚಿಸಲಾಯಿತು.
ಸದಸ್ಯರು
ಕೆ.ಎಂ.ಮುನ್ಶಿ
ಸೈಯದ್ ಅಹಮ್ಮದ್ ಸಾದುಲ್ಲಾ
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್
ಎಲ್. ಗೋಪಾಲ ಸ್ವಾಮಿ ಅಯ್ಯಂಗಾರ್
ಎನ್ ಮಾಧವ ರಾವ್ (ಬಿ.ಎಲ್
ಮಿಟ್ಟರ್ ಅವರ ಬದಲಿಗೆ)
ಟಿ. ಟಿ. ಕೃಷ್ಣಮಾಚಾರಿ (ಡಿ.ಪಿ
ಖೈತಾನ್ ಬದಲಿಗೆ)
ಸಂವಿಧಾನವನ್ನು ಭಾರತ ಸಂವಿಧಾನ
ಎಂದು ಕರೆಯಬೇಕೆಂದು ಭಾಗ 22 ವಿಧಿ 393ರಲ್ಲಿ ಉಲ್ಲೇಖಿಸಲಾಗಿದೆ.
ಅಂಬೇಡ್ಕರ್ ಅವರನ್ನು ಭಾರತ
ಸಂವಿಧಾನದ ಶಿಲ್ಪಿ ಎಂದು ಕರೆದವರು ಎಂ.ವಿ ಪೈಲಿ.
ಸಂವಿಧಾನವನ್ನು ಸಂವಿಧಾನ ರಚನಾ
ಸಮಿತಿಯ ಮುಂದೆ ಒಟ್ಟು 3 ಮಂಡಿಸಲಾಗಿದೆ 1948 ನವೆಂಬರ್ 4, 1948 ನವೆಂಬರ್ 15 ಮತ್ತು 1949 ನವೆಂಬರ್ 14
ಸಂವಿಧಾನದ ಕರಡು ಪ್ರತಿಯನ್ನು
ಬರೆಯಲು ಎಸ್ ಎನ್ ಮುಖರ್ಜಿ ಅವರನ್ನು ನೇಮಿಸಲಾಗಿತ್ತು
ಸಂವಿಧಾನಕ್ಕೆ
ವಿವಿಧ ದೇಶಗಳಿಂದ ಎರವಲಾಗಿ ಪಡೆದ ವಿಷಯಗಳು
1935 ರ ಭಾರತ
ಸರ್ಕಾರ ಕಾಯ್ದೆ
ಒಕ್ಕೂಟ ವ್ಯವಸ್ಥೆ / ಸಂಯುಕ್ತ
ಪದ್ಧತಿ
ರಾಜ್ಯಪಾಲರ ಹುದ್ದೆ
ನ್ಯಾಯಾಂಗ ವ್ಯವಸ್ಥೆ
ಸಾರ್ವಜನಿಕ ಸೇವಾ ಆಯೋಗಗಳು
ಆಡಳಿತಾತ್ಮಕ ವಿವರಣೆಗಳು
ತುರ್ತುಪರಿಸ್ಥಿತಿಗೆ ಅವಕಾಶ
ಲೋಕಸೇವಾ ಆಯೋಗ
ಬ್ರಿಟನ್
ಸಂವಿಧಾನ
ಸಂಸದೀಯ ಪದ್ಧತಿ
ಕ್ಯಾಬಿನೆಟ್ ಪದ್ಧತಿ
ಏಕ ಪೌರತ್ವ
ನ್ಯಾಯಾಲಯಗಳ ರಿಟ್ ಅಧಿಕಾರ
ನಾಗರಿಕ ಸೇವೆಗಳು
ಲೋಕಭೆಗೆ ಹೆಚ್ಚಿನ ಅಧಿಕಾರ
ಸಭಾಧ್ಯಕ್ಷರ ಸ್ಥಾನಮಾನ
ಶಾಸನ ರಚನೆಯ ವಿಧಾನ/ ಶಾಸಕಾಂಗ
ಪದ್ಧತಿ
ದ್ವಿಸದನ (ಲೋಕಸಭೆ ಮತ್ತು
ರಾಜ್ಯಸಭೆ)
ಅಮೇರಿಕ
ಸಂಯುಕ್ತ ಸಂಸ್ಥಾನದ ಸಂವಿಧಾನ
ಪ್ರಸ್ಥಾವನೆ (ಪೀಠಿಕೆ)
ಮೂಲಭೂತ ಹಕ್ಕುಗಳು
ರಾಜ್ಯಗಳ ಒಕ್ಕೂಟದ ಸರ್ಕಾರದ
ಮಾದರಿ
ಲಿಖಿತ ಸಂವಿಧಾನ
ರಾಷ್ಟ್ರಪತಿಗಳ ಮತ್ತು
ನ್ಯಾಯಾಧೀಶರ ಮಹಾಭಿಯೋಗ
ನ್ಯಾಯದ ವಿಮರ್ಶೆ
ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಉಚ್ಚ ಹಾಗು
ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರು
ಉಪರಾಷ್ಟ್ರಪತಿ ಸ್ಥಾನಮಾನ
ಐರ್ಲೆಂಡ್
ಸಂವಿಧಾನ
ರಾಜ್ಯ ನೀತಿ ನಿರ್ದೇಶಕ ತತ್ವಗಳು
ರಾಷ್ಟ್ರಪತಿ ಚುನಾವಣೆ ವಿಧಾನ
ರಾಜ್ಯಸಭೆಗೆ ಸದಸ್ಯರ
ನಾಮನಿರ್ದೇಶನ
ಫ್ರಾನ್ಸ್
ಸಂವಿಧಾನ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ
ಆದರ್ಶಗಳು
ಕೆನಡಾ ಸಂವಿಧಾನ
ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ
ಕೇಂದ್ರ ಸರ್ಕಾರದ ಮಾದರಿ
ಕೇಂದ್ರ ಸರ್ಕಾರಕ್ಕೆ ರಾಜ್ಯ
ಸರ್ಕಾರದ ಮೇಲುಳಿದ ಶಕ್ತಿಗಳು
ಕೇಂದ್ರದಿಂದ ರಾಜ್ಯಪಾಲರ ನೇಮಕ
ರಾಷ್ಟ್ರಪತಿಗಳಿಂದ
ಸುಪ್ರೀಂಕೋರ್ಟ್ ಗೆ ಸಲಹಾ ಅಧಿಕಾರ
ಆಸ್ಟ್ರೇಲಿಯ
ಸಂವಿಧಾನ
ಸಮವರ್ತಿ ಪಟ್ಟಿ
ರಾಜ್ಯಗಳ ಮಧ್ಯ ಅನಿರ್ಬಂಧಿತ
ವ್ಯಾಪಾರ ವಹಿವಾಟಿಗೆ ಸ್ವಾತಂತ್ರ್ಯ
ಸರ್ವೋಚ್ಚ ನ್ಯಾಯಾಲಯ ಸಲಹೆ
ನೀಡುವ ಅಧಿಕಾರ
ಸಂಸತ್ತಿನ ಜಂಟಿ ಅಧಿವೇಶನ
ರಷ್ಯಾ ಸಂವಿಧಾನ
ಸಾಮಾಜಿಕ, ಆರ್ಥಿಕ ಮತ್ತು
ರಾಜಕೀಯ ನ್ಯಾಯ ಎಂಬ ಪರಿಕಲ್ಪನೆಗಳು
ಮೂಲಭೂತ ಕರ್ತವ್ಯಗಳು
ದಕ್ಷಿಣ
ಆಫ್ರಿಕಾ ಸಂವಿಧಾನ
ಸಂವಿಧಾನದ ತಿದ್ದುಪಡಿ ವಿಧಾನ
ರಾಜ್ಯಸಭಾ ಸದಸ್ಯರ ಚುನಾವಣಾ
ವಿಧಾನ
ಸಾಮೂಹಿಕ ಹೊಣೆಗಾರಿಕೆ
ಜರ್ಮನಿ
ಸಂವಿಧಾನ
ತುರ್ತು ಪರಿಸ್ಥಿತಿಯಲ್ಲಿ
ಮೂಲಭುತ ಹಕ್ಕುಗಳನ್ನು ರದ್ಧುಗೊಳಿಸುವುದು
ತುರ್ತುಪರಿಸ್ಥಿತಿಯ ವಿಧಿಗಳು
ಜಪಾನ್ ಸಂವಿಧಾನ
ಕಾನೂನಿಂದ ರಚಿತವಾದ ವಿಧಾನಗಳು
1948 ನವೆಂಬರ್ 4 ರಂದು ಕರಡು
ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ರಚನಾ ಸಮಿತಿಯ ಮುಂದೆ ಇರಿಸಿತು. 284 ಜನ
ಸದಸ್ಯರನ್ನೊಳಗೊಂಡ ರಚನಾ ಸಮಿತಿಯು 1948 ನವೆಂಬರ್ 26 ರಂದು
ಸಂವಿಧಾನವನ್ನು ಅಂಗೀಕರಿಸಿತು. ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ.
ಸಂವಿಧಾನ ರಚನಾ ಸಮಿತಿಯ ಕೊನೆಯ
ಸಭೆಯು 1950ನವೆಂಬರ್ 24 ರಂದು ನಡೆಯಿತು.
ಇದರಲ್ಲಿ 281 ಜನ
ಸದಸ್ಯರಿದ್ದರು. ನಂತರ 1950 ಜನವರಿ 26 ರಂದು ಸಂವಿಧಾನವು
ಅಧಿಕೃತವಾಗಿ ಜಾರಿಗೆ ಬಂದಿತು. ಸಂವಿಧಾನ ರಚನಾ ಸಮಿತಿಯು ಆನೆಯನ್ನು ತನ್ನ ಚಿಹ್ನೆಯನ್ನಾಗಿ
ಬಳಸಿಕೊಂಡಿತು.
ಭಾರತವು 1947 ಜುಲೈ 22 ರಂದು ತ್ರಿವರ್ಣ
ಧ್ವಜವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸಿತು. 1950 ಜನವರಿ 24 ರಂದು 4 ಸಾರಾನಾಥ ಸ್ತಂಭದಲ್ಲಿದ್ದ 4 ಸಿಂಹಗಳ ಚಿಹ್ನೆಯನ್ನು ರಾಷ್ಟ್ರಲಾಂಛನವಾಗಿ ಸ್ವೀಕರಿಸಿತು.
ಸಂವಿಧಾನವು ಜಾರಿಗೆ ಬಂದಾಗ 395 ವಿಧಿಗಳು, ೮ ಅನುಸೂಚಿಗಳು
ಮತ್ತು 22 ಭಾಗಗಳನ್ನು
ಹೊಂದಿತ್ತು. ಇಂದು 448 ವಿಧಿಗಳು 12 ಅನುಸೂಚಿಗಳು
ಮತ್ತು 25 ಭಾಗಗಳಿವೆ
ಸಂವಿಧಾನವನ್ನು ಭಾರತದ ಸಂವಿಧಾನ
ಎಂದು ಕರೆಯಬೇಕೆಂದು 22ನೇ ಭಾಗದ 393ನೇ ವಿಧಿಯಲ್ಲಿ ಉಲ್ಲೇಖಿಸಿದೆ
ಸ್ವತಂತ್ರ
ಭಾರತದ ಪ್ರಥಮ ಮಂತ್ರಿಮಂಡಲ
ಡಾ. ಬಾಬು ರಾಜೇಂದ್ರ ಪ್ರಸಾದ್ – ರಾಷ್ಟ್ರಪತಿಗಳು ಹಾಗೂ ಆಹಾರ ಮತ್ತು ವ್ಯವಸಾಯ ಖಾತೆ
ಜವಾಹರಲಾಲ್ ನೆಹರು -
ಪ್ರಧಾನಮಂತ್ರಿ ಮತ್ತು ವಿದೇಶಾಂಗ ಖಾತೆ
ಸರ್ದಾರ್ ವಲ್ಲಭಭಾಯಿ ಪಟೇಲ್ – ಉಪಪ್ರಧಾನಿ ಮತ್ತು ಗೃಹಮಂತ್ರಿ
ಬಲದೇವ್ ಸಿಂಗ – ರಕ್ಷಣಾ ಖಾತೆ
ಶ್ಯಾಂ ಪ್ರಸಾದ್ ಮುಖರ್ಜಿ – ಕೈಗಾರಿಕಾ ಖಾತೆ
ಜಾನ್ ಮ್ಯಾಥ್ಯೂ – ರೈಲ್ವೇ ಖಾತೆ
ಷಣ್ಮುಗಂ ಚೆಟ್ಟಿಯಾರ್ - ಹಣಕಾಸು
ಖಾತೆ
ಜಗಜೀವನ್ ರಾಮ್ – ಕಾರ್ಮಿಕ ಖಾತೆ
ರಾಜಕುಮಾರಿ ಅಮೃತಾ ಕೌರ್ – ಆರೋಗ್ಯ ಖಾತೆ
ಡಾ ಬಿ.ಆರ್ ಅಂಬೇಡ್ಕರ್ – ಕಾನೂನು ಖಾತೆ
ರಫೀ ಅಹ್ಮದ್ ಕಿದ್ವಾಯಿ -
ಸಂಪರ್ಕ ಖಾತೆ
ಕೂವಸ್ರ್ಜಿ ಹರ್ಮಸ್ಜಿ ಭಾಭಾ
(ಸಿ.ಎಚ್ ಭಾಭಾ) – ವಾಣಿಜ್ಯ ಖಾತೆ
ನರ್ಹರ್ ವಿಷ್ಣು ಗಾಡ್ಗಿಲ್
(ಎನ್.ವಿ ಗಾಡ್ಗಿಲ್) - ಸಾರ್ವಜನಿಕ ವ್ಯವಹಾರಗಳು, ಗಣಿಗಾರಿಕೆ ಮತ್ತು
ಇಂಧನ ಖಾತೆ
ಕ್ಷಿತಿಷ್ ಚಂದ್ರ ನಿಯೋಗಿ
(ಕೆ.ಸಿ ನಿಯೋಗಿ) - ಪುನರ್ವಸತಿ ಮತ್ತು ಪರಿಹಾರ ಖಾತೆ
ಮೌಲಾನಾ ಅಬ್ದುಲ್ ಕಲಾಂ ಆಝಾದ್ -
ಶಿಕ್ಷಣ ಖಾತೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ