ಸಾಂವಿಧಾನಿಕ ಸಂಸ್ಥೆಗಳು

ಸಾಂವಿಧಾನಿಕ ಸಂಸ್ಥೆಗಳು

ಕೇಂದ್ರ ಹಣಕಾಸು ಆಯೋಗ

280 (12 ನೇ ಭಾಗ) ನೇ ವಿಧಿಯನ್ವಯ ಕೇಂದ್ರ ಹಣಕಾಸು ಆಯೋಗವನ್ನು ಸ್ಥಾಪಿಸಲಾಗಿದೆ. 280 (1) ವಿಧಿಯನ್ವಯ ರಾಷ್ಟ್ರಪತಿಗಳು ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಧಾನ ಮಂತ್ರಿ ಮತ್ತು ಮಂತ್ರಿ ಮಂಡಲದ ಸಲಹೆಯ ಮೇರೆಗೆ ನೇಮಿಸುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಆದಾಯ ಹಂಚಿಕೆ ಮಾಡುವ ಉದ್ದೇಶದಿಂದ ಈ ಆಯೋಗವನ್ನು ಸ್ಥಾಪಿಸಲಾಗಿದೆ.

ಪ್ರತಿ 5 ವರ್ಷಕ್ಕೊಮ್ಮೆ ರಾಷ್ಟ್ರಪತಿಗಳು ಈ ಆಯೋಗವನ್ನು ಪುನರ್ರಚಿಸುತ್ತಾರೆ

ಆಯೋಗದಲ್ಲಿ ಓರ್ವ ಅಧ್ಯಕ್ಷರು ಮತ್ತು 4 ಜನ ಸದಸ್ಯರಿರುತ್ತಾರೆ. ಅಧ್ಯಕ್ಷರಾಗಲು ಸಾರ್ವಜನಿಕ ಆಡಳಿತ ವ್ಯವಹಾರದಲ್ಲಿ ಜ್ಞಾನವಿರಬೇಕು. ಮತ್ತು ಸದಸ್ಯರು ಹೈಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ಹೊಂದಿರಬೇಕುಹಣಕಾಸು ಮತ್ತು ಸರ್ಕಾರದ ಲೆಕ್ಕ ವ್ಯವಹಾರದಲ್ಲಿ ಜ್ಞಾನ ಹೊಂದಿರಬೇಕು.

ಸ್ಥಾಪನೆ : 1951 ನವೆಂಬರ್ 22

ಕೇಂದ್ರ ಕಛೇರಿ : ನವದೆಹಲಿ

ಮೊದಲ ಅಧ್ಯಕ್ಷರು : ಕೆ ಸಿ ನಿಯೋಗಿ

ಪ್ರಸ್ತುತ ಅಧ್ಯಕ್ಷರು : ಎನ್ ಕೆ ಸಿಂಗ್

ಅಧಿಕಾರಾವಧಿ : 5 ವರ್ಷ

ಕೇಂದ್ರ ಚುನಾವಣಾ ಆಯೋಗ

ವಿಧಿ : 324 (15  ನೇ ಭಾಗ)

ಸ್ಥಾಪನೆ : 1950 ಜನವರಿ 25

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ಸುಕುಮಾರ್ ಸೇನ್

ಮುಖ್ಯ ಆಯುಕ್ತರು : ಸುಶೀಲ್ ಚಂದ್ರ ಸೆನ್

ಅಧಿಕಾರಾವಧಿ : 6 ವರ್ಷ ಅಥವಾ 65 ವರ್ಷಗಳು.

ಜನವರಿ 25 ರಾಷ್ಟ್ರೀಯ ಮತದಾರರ ದಿನ

ಈ ಆಯೋಗವು 1993 ಅಕ್ಟೋಬರ್ 1 ರ ನಂತರ ತ್ರಿಸದಸ್ಯ ಆಯೋಗವಾಗಿ ಬದಲಾಗಿದ್ದು. ಒಬ್ಬರು ಮುಖ್ಯ ಆಯುಕ್ತರು ಮತ್ತು ಇಬ್ಬರು ಆಯುಕ್ತರನ್ನು ಒಳಗೊಂಡಿರುತ್ತದೆ.

324 (2) ವಿಧಿಯನ್ವಯ ಕೇಂದ್ರ ಮಂತ್ರಿಮಂಡಲದ ಸಲಹೆಯ ಮೇರೆಗೆ ಮುಖ್ಯ ಆಯುಕ್ತರು ಮತ್ತು ಇಬ್ಬರು ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. 

ಇವರು ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ನೀಡಬೇಕು.

324 (5) ವಿಧಿಯನ್ವಯ ಮುಖ್ಯ ಆಯುಕ್ತರನ್ನು ಕರ್ತವ್ಯ ಲೋಪದ ಅಡಿಯಲ್ಲಿ ಮಹಾಭಿಯೋಗದ ಮೂಲಕ ತೆಗೆದು ಹಾಕಬಹುದಾಗಿದೆ. ಮತ್ತು ಇತರೆ ಆಯುಕ್ತರನ್ನು ಮುಖ್ಯ ಆಯುಕ್ತರ ಸಲಹೆ ಮೇರೆಗೆ ರಾಷ್ಟ್ರಪತಿಯವರು ತೆಗೆದು ಹಾಕಬಹುದು. ಆದರೆ ಇದುವರೆಗೆ ಯಾರನ್ನು ತೆಗೆದು ಹಾಕಿಲ್ಲ.

324 (5) ವಿಧಿಯನ್ವಯ ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರ ಮಟ್ಟದಲ್ಲಿ ಚುನಾವಣೆಗಳನ್ನು ನಡೆಸುವಾಗ ರಾಷ್ಟ್ರಪತಿ ಮತ್ತು ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸಲು ರಾಜ್ಯಪಾಲರು ಬೇಕಾದ ಅನುಕೂಲಗಳನ್ನು ಒದಗಿಸಿಕೊಡಬೇಕು

ಆಯುಕ್ತರು ಅಧಿಕಾರಾವಧಿಯಲ್ಲಿದ್ದಾಗ ಅವರಿಗೆ ಅನಾನುಕೂಲವಾಗುವಂತೆ ಯಾವುದೇ ಕಾನೂನುಗಳನ್ನು ಜಾರಿ ಮಾಡುವಂತಿಲ್ಲ.

1963 ರ 15 ನೇ ತಿದ್ದುಪಡಿ ಅನ್ವಯ ಕೇಂದ್ರದಲ್ಲಿ ಅಧ್ಯಕ್ಷರ ಸ್ಥಾನ ಖಾಲಿಯಾದಾಗ ರಾಷ್ಟ್ರಪತಿಗಳು ಮತ್ತು ರಾಜ್ಯದಲ್ಲಿ ಅಧ್ಯಕ್ಷರ ಸ್ಥಾನ ಖಾಲಿಯಾದಾಗ ರಾಜ್ಯಪಾಲರು ಹಂಗಾಮಿ ಅಧ್ಯಕ್ಷರನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ.

ಈ ಆಯೋಗವು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭಾ, ಲೋಕಸಭಾ, ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳ ಚುನಾವಣೆಯನ್ನು ನಡೆಸುತ್ತದೆ.

ರಾಜ್ಯ ಚುನಾವಣಾ ಆಯೋಗ

1964 ರ ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಮತ್ತು 1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮಗಳ ಅಡಿಯಲ್ಲಿ ಸಂವಿಧಾನಕ್ಕೆ 73 ಮತ್ತು 74 ನೇ ತಿದ್ದುಪಡಿಯನ್ನು ತಂದು ರಾಜ್ಯ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು.

ರಾಷ್ಟ್ರಪತಿಯವರು 324 (4) ವಿಧಿಯನ್ವಯ ಕೇಂದ್ರ ಚುನಾವಣಾ ಆಯೋಗದ ಜೊತೆ ಸಮಾಲೋಚಿಸಿ ರಾಜ್ಯ ಚುನಾವಣಾ ಆಯೋಗದ ಸದಸ್ಯರನ್ನು ನೇಮಕ ಮಾಡುತ್ತಾರೆ.

ರಾಜ್ಯ ಚುನಾವಣಾ ಆಯೋಗವು ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ, ಜಿಲ್ಲಾ, ತಾಲೂಕು, ಪಟ್ಟಣ ಮತ್ತು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ನಡೆಸುತ್ತದೆ.

ವಿಧಿ : 243 ಕೆ ಮತ್ತು ಜೆಡ್.ಎ

ಸ್ಥಾಪನೆ : 1993 ಮೇ 26

ಕೇಂದ್ರ ಕಛೇರಿ : ಬೆಂಗಳೂರು

ಪ್ರಥಮ ಮುಖ್ಯ ಆಯುಕ್ತರು : ವಿ ಎಸ್ ರಮಾದೇವಿ

ಪ್ರಸ್ತುತ ಮುಖ್ಯ ಆಯುಕ್ತರು : ಡಾ. ಬಿ ಬಸವರಾಜು

ಕೇಂದ್ರ ಲೋಕಸೇವಾ ಆಯೋಗ

1935 ರ ಭಾರತ ಒಕ್ಕೂಟ ಕಾಯ್ದೆಯಡಿಯಲ್ಲಿ  ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್ ಎಂದು ಈ ಆಯೋಗವನ್ನು ಸ್ಥಾಪಿಸಲಾಯಿತು. ಸ್ವಾತಂತ್ರ್ಯಾನಂತರ ಲೋಕಸೇವಾ ಆಯೋಗವಾಗಿ ಬದಲಾಯಿತು.

14 ನೇ ಭಾಗದಲ್ಲಿ 315 ರಿಂದ 323 ರ ವರೆಗಿನ ವಿಧಿಯಲ್ಲಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ಬಗ್ಗೆ ತಿಳಿಸಲಾಗಿದೆ.

ಕೇಂದ್ರ ಅಥವಾ ರಾಜ್ಯ ಲೋಕಸೇವಾ ಆಯೋಗವನ್ನು ಮೆರಿಟ್ ಕಾಯುವ ಕಾವಲು ನಾಯಿ ಎನ್ನುವರು.

ಅಯೋಗ್ಯರನ್ನು ಹೊರಗಿಡುವುದುಪ್ರಾಮಾಣಿಕರನ್ನು ಮತ್ತು ಸಮರ್ಥರನ್ನು ಸೇವೆಯಲ್ಲಿರುವಂತೆ ಮಾಡುವುದು ಲೋಕಸೇವಾ ಆಯೋಗದ ಪ್ರಮುಖ ಕಾರ್ಯವಾಗಿದೆ ಎಂದು ಎಂ ವಿ ಪೈಲಿ ಹೇಳಿದ್ದಾರೆ.

ಒಟ್ಟು 11 ಸದಸ್ಯರಿದ್ದು ಅರ್ಧದಷ್ಟು ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ 10 ವರ್ಷ ಸೇವೆ ಸಲ್ಲಿಸಿದವರಾಗಿರಬೇಕು. ಉಳಿದ ಅರ್ಧದಷ್ಟು ಸದಸ್ಯರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.

316 ನೇ ವಿಧಿಯನ್ವಯ ಪ್ರಧಾನ ಮಂತ್ರಿ ಮತ್ತು ಮಂತ್ರಿ ಮಂಡಲದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅದ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವರು. ಅಧ್ಯಕ್ಷರು ಮತ್ತು ಸದಸ್ಯರು ರಾಜಿನಾಮೆಯನ್ನು ರಾಷ್ಟ್ರಪತಿಗೆ ನೀಡುವರು.

317 ನೇ ವಿಧಿಯನ್ವಯ ರಾಷ್ಟ್ರಪತಿಗಳು ಕೇಂದ್ರದ ಅಧ್ಯಕ್ಷ ಮತ್ತು ಸದಸ್ಯರನ್ನು ವಜಾ ಮಾಡಬಹುದಾಗಿದೆ. ಆದರೆ ಅದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನ ಸಲಹೆ ಪಡೆಯುವುದು ಅಗತ್ಯವಾಗಿದೆ.

ಇವರು ತಮ್ಮ ವಾರ್ಷಿಕ ವರಧಿಯನ್ನು ರಾಷ್ಟ್ರಪತಿಗೆ ನೀಡಬೇಕು

ಭಾರತೀಯ ರಕ್ಷಣಾ ಪಡೆಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಇನ್ನಾವುದೇ ಸರ್ಕಾರಿ ಉದ್ಯೋಗಗಳಿಗೆ ಲೋಕಸೇವಾ ಆಯೋಗವು ಪರೀಕ್ಷೆಗಳನ್ನು ನಡೆಸಬಹುದಾಗಿದೆ.

ಲೋಕಸೇವಾ ಆಯೋಗಕ್ಕೆ ಸಾಂವಿಧಾನಿಕ ಕರ್ತವ್ಯ ಹಾಗೂ ಕಾರ್ಯಗಳನ್ನು ನೀಡಿದ್ದರೂ ಅದು ಕೇವಲ ಸಲಹಾ ಮತ್ತು ಸಮಾಲೋಚನಾ ಮಂಡಳಿಯಾಗಿ ಕೆಲಸ ಮಾಡುತ್ತದೆ ಹೊರತು ತೀರ್ಮಾನ ನೀಡುವ ಸಂಸ್ಥೆಯಲ್ಲ.

320 ನೇ ವಿಧಿಯನ್ವಯ ಕೇಂದ್ರ ಸರ್ಕಾರವು ಲೋಕಸೇವಾ ಆಯೋಗದೊಂದಿಗೆ ಕೆಲವು ಅಗತ್ಯ ವಿಷಯಗಳಿಗೆ ಸಂಬಂಧಿಸಿ ಸಮಾಲೋಚನೆ ನಡೆಸಬೇಕು.

ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ ವೇತನವನ್ನು ಭಾರತ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

ಸ್ಥಾಪನೆ : 1926 ಅಕ್ಟೋಬರ್ 1

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ಸರ್ ಬಾರ್ಕರ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ಪ್ರದೀಪ್ ಕುಮಾರ್ ಜೋಶಿ 

ಅಧಿಕಾರಾವಧಿ : 6 ವರ್ಷ ಅಥವಾ 65 ವರ್ಷಗಳು (316 ನೇ ವಿಧಿ)

ರಾಜ್ಯ ಲೋಕಸೇವಾ ಆಯೋಗ

ವಿಧಿ : 315

ಸ್ಥಾಪನೆ : 1951 ಮೇ 18

ಕೇಂದ್ರ ಕಛೇರಿ : ಬೆಂಗಳೂರು

ಮೊದಲ ಮುಖ್ಯ ಅಧ್ಯಕ್ಷರು : ಎಚ್ ಬಿ ಗುಂಡಪ್ಪ ಗೌಡ

ಪ್ರಸ್ತುತ ಮುಖ್ಯ ಅಧ್ಯಕ್ಷರು : ಶಿವಶಂಕರಪ್ಪ ಎಸ್ ಸಾಹುಕಾರ್

ಅಧಿಕಾರಾವಧಿ : 6 ವರ್ಷ ಅಥವಾ 62 ವರ್ಷಗಳು.

315 (2) ವಿಧಿಯನ್ವಯ 2 ಅಥವಾ 2 ಕ್ಕಿಂತ ಹೆಚ್ಚು ರಾಜ್ಯಗಳಿಗೆ ಜಂಟಿ ಲೋಕಸೇವಾ ಆಯೋಗವನ್ನು ರಚಿಸಬಹುದು.

320 (1) ವಿಧಿಯನ್ವಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ರಾಜ್ಯ ಆಡಳಿತ ಸೇವೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುತ್ತದೆ.

316 ನೇ ವಿಧಿಯನ್ವಯ ಮುಖ್ಯ ಮಂತ್ರಿ ಮತ್ತು ಮಂತ್ರಿ ಮಂಡಲದ ಸಲಹೆಯ ಮೇರೆಗೆ ರಾಜ್ಯಪಾಲರು ಅದ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವರು. ಅಧ್ಯಕ್ಷರು ಮತ್ತು ಸದಸ್ಯರು ರಾಜಿನಾಮೆಯನ್ನು ರಾಜ್ಯಪಾಲರಿಗೆ ನೀಡುವರು.

ಇವರು ತಮ್ಮ ವಾರ್ಷಿಕ ವರಧಿಯನ್ನು ರಾಜ್ಯಪಾಲರಿಗೆ ನೀಡಬೇಕು

317 ನೇ ವಿಧಿಯನ್ವಯ ರಾಜ್ಯಪಾಲರು ರಾಜ್ಯದ ಅಧ್ಯಕ್ಷ ಮತ್ತು ಸದಸ್ಯರನ್ನು ವಜಾ ಮಾಡುವ ಅಧಿಕಾರ ಹೊಂದಿದ್ದಾರೆ ಆದರೆ ಅದಕ್ಕೂ ಮುನ್ನ ಹೈಕೋರ್ಟ್ ನ ಸಲಹೆ ಪಡೆಯುವುದು ಅಗತ್ಯವಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗ

ರಾಷ್ಟ್ರೀಯ ಪ.ಜಾತಿ ಮತ್ತು ಪ.ಪಂಗಡಗಳ ಆಯೋಗವನ್ನು 338 ನೇ ವಿಧಿಯನ್ವಯ 1978 ರಲ್ಲಿ ಸ್ಥಾಪನೆಯಾಯಿತು. ಈ ಆಯೋಗವು 2003 ರಲ್ಲಿ 89ನೇ ತಿದ್ದುಪಡಿಯನ್ವಯ ರಾಷ್ಟ್ರೀಯ ಪ. ಜಾತಿ ಆಯೋಗ ಮತ್ತು ರಾಷ್ಟ್ರೀಯ ಪ. ಪಂಗಡ ಆಯೋಗ ಎಂದು ವಿಭಜನೆಯಾಯಿತು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

ವಿಧಿ : 338

ಸ್ಥಾಪನೆ : 2004 ಫೆಬ್ರವರಿ 20

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ಸೂರಜ್ ಭಾನು

ಪ್ರಸ್ತುತ ಮುಖ್ಯ ಅಧ್ಯಕ್ಷರು : ವಿಜಯ್ ಸಂಪ್ಲ

ಅಧಿಕಾರಾವಧಿ : 6 ವರ್ಷ ಅಥವಾ 65 ವರ್ಷಗಳು

ಈ ಆಯೋಗವು ಅಧ್ಯಕ್ಷಉಪಾಧ್ಯಕ್ಷ ಮತ್ತು 3 ಜನ ಸದಸ್ಯರನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ

ವಿಧಿ : 338 ಎ

ಸ್ಥಾಪನೆ : 2004 ಫೆಬ್ರವರಿ 20

ಕೇಂದ್ರ ಕಛೇರಿ : ನವದೆಹಲಿ

ಮೊದಲ ಮುಖ್ಯ ಆಯುಕ್ತರು : ಕುನ್ವರ್ ಸಿಂಗ್

ಪ್ರಸ್ತುತ ಮುಖ್ಯ ಅಧ್ಯಕ್ಷರು : ಹರ್ಷ  ಚೌಹಾಣ್

ಅಧಿಕಾರಾವಧಿ : 6 ವರ್ಷ ಅಥವಾ 65 ವರ್ಷಗಳು

ಈ ಆಯೋಗವು ಅಧ್ಯಕ್ಷಉಪಾಧ್ಯಕ್ಷ ಮತ್ತು 3 ಜನ ಸದಸ್ಯರನ್ನು ಒಳಗೊಂಡಿರುತ್ತದೆ.

ಕಾಮೆಂಟ್‌ಗಳು