ಸಂವಿಧಾನದ ಭಾಗಗಳು, ಅನುಸೂಚಿಗಳು, ತಿದ್ದುಪಡಿಗಳು
ಸಂವಿಧಾನದ ಭಾಗಗಳು, ಅನುಸೂಚಿಗಳು, ವಿಧಿಗಳು, ತಿದ್ದುಪಡಿಗಳು
ಸಂವಿಧಾನದ ಭಾಗಗಳು
ಭಾಗ 1. ಭಾರತದ ಒಕ್ಕೂಟ ಮತ್ತು ಅದರ ಪ್ರದೇಶಗಳು - ವಿಧಿ 1 – 4
ಭಾಗ 2. ಪೌರತ್ವ/ನಾಗರಿಕತ್ವ - ವಿಧಿ 5 – 11
ಭಾಗ 3. ಮೂಲಭೂತ ಹಕ್ಕುಗಳು - ವಿಧಿ 12 - 35
ಭಾಗ 4. ರಾಜ್ಯನೀತಿ ನಿರ್ದೇಶಕ ತತ್ವಗಳು – ವಿಧಿ 36 – 51
ಭಾಗ 4 (A). ಮೂಲಭೂತ ಕರ್ತವ್ಯಗಳು – ವಿಧಿ 51 (A)
ಭಾಗ 5. ಕೇಂದ್ರ ಸರ್ಕಾರ – ವಿಧಿ 52 – 151
ಭಾಗ 6. ರಾಜ್ಯ ಸರ್ಕಾರ – ವಿಧಿ 152 – 237
ಭಾಗ 7. ತೆಗೆದು ಹಾಕಲಾಗಿದೆ – ವಿಧಿ 238
ಭಾಗ 8. ಕೇಂದ್ರಾಡಳಿತ ಪ್ರದೇಶಗಳು – ವಿಧಿ 239 – 242
ಭಾಗ 9. ಪಂಚಾಯತ್ ರಾಜ್ ವ್ಯವಸ್ಥೆ – ವಿಧಿ 243 – 243 (0)
ಭಾಗ 9 (A). ಮುನ್ಸಿಪಲ್ ವ್ಯವಸ್ಥೆ – ವಿಧಿ 243 (P) – 243 (ZG)
ಭಾಗ 9 (B). ಸಹಕಾರಿ ಸಂಘಗಳು – ವಿಧಿ 243 (ZH) – 243 (ZT)
ಭಾಗ 10. ಪರಿಶಿಷ್ಟ ಮತ್ತು ಹಿಂದುಳಿದ ಪ್ರದೇಶಗಳು – ವಿಧಿ 244 – 244 (A)
ಭಾಗ 11. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧಗಳು – ವಿಧಿ 245 – 263
ಭಾಗ 12. ಆರ್ಥಿಕ ಸ್ವತ್ತು ಮತ್ತು ಒಪ್ಪಂದಗಳು – ವಿಧಿ 264 – 300 (A)
ಭಾಗ 13. ಒಕ್ಕೂಟದೊಳಗಿನ ವ್ಯಾಪಾರ ವಾಣಿಜ್ಯ ಮತ್ತು ವಿನಿಮಯ – ವಿಧಿ 301 -307
ಭಾಗ 14. ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಸೇವೆಗಳು – ವಿಧಿ 308 – 323
ಭಾಗ 14 (A). ನ್ಯಾಯಾಧೀಕರಣ – ವಿಧಿ 323 (A) – 323 (B)
ಭಾಗ 15. ಚುನಾವಣೆಗಳು – ವಿಧಿ 324 – 329 (A)
ಭಾಗ 16. ಕೆಲವು ವರ್ಗಗಳಿಗೆ ವಿಶೇಷ ರಿಯಾಯಿತಿ – ವಿಧಿ 330 – 342
ಭಾಗ 17. ಆಡಳಿತ ಭಾಷೆ – ವಿಧಿ 343 – 351
ಭಾಗ 18. ತುರ್ತುಪರಿಸ್ಥಿತಿಯ ನಿಬಂಧನೆಗಳು – ವಿಧಿ 352 – 360
ಭಾಗ 19. ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗಿರುವ ವಿಶೇಷ ಸವಲತ್ತು ಮತ್ತು ರಕ್ಷಣೆ – ವಿಧಿ 361 – 367
ಭಾಗ 20. ಸಂವಿಧಾನ ತಿದ್ದುಪಡಿ – ವಿಧಿ 368
ಭಾಗ 21. ತಾತ್ಕಾಲಿಕ ಬದಲಾವಣೆ ಮತ್ತು ವಿಶೇಷ ಷರತ್ತು – ವಿಧಿ 369 – 392
ಭಾಗ 22. ಸಂವಿಧಾನದ ಸಂಕ್ಷಿಪ್ತ ಶೀರ್ಷಿಕೆ, ಅನುಷ್ಠಾನ, ಹಿಂದಿಯಲ್ಲಿ ಅಧಿಕೃತ ಪಠ್ಯ ಹಾಗೂ ರದ್ಧತಿ – ವಿಧಿ 393 – 395
ಸಂವಿಧಾನದ ಅನುಸೂಚಿಗಳು
ಅನುಸೂಚಿ 1. ವಿಧಿ 1 – 4. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು
ಅನುಸೂಚಿ 2. ವಿಧಿ 59 ರಾಷ್ಟ್ರಪತಿ, 65 ಉಪರಾಷ್ಟ್ರಪತಿ, 75 ಪ್ರಧಾನ ಮಂತ್ರಿ, ರಾಜ್ಯಪಾಲ, 97 ಸಭಾಪತಿ ಮತ್ತು ಉಪಾಸಭಾಪತಿ, 125 ಸರ್ವೋಚ್ಛ ನ್ಯಾಯಾಧೀಶರು, 148 ಕಂಟ್ರೋಲರ್ ಮತ್ತು ಆಡಿಟರ್ ಜನರಲ್, 164 ರಾಜ್ಯ ಸರ್ಕಾರ ಮಂತ್ರಿಗಳು, 186 ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸಭಾಪತಿ ಉಪಸಭಾಪತಿಗಳು, 221 ಉಚ್ಛ ನ್ಯಾಯಾಧೀಶರ ವೇತನ, ಸೌಲಭ್ಯ ಮತ್ತು ಸವಲತ್ತುಗಳು
ಅನುಸೂಚಿ 3. ವಿಧಿ 75 ಪ್ರಧಾನ ಮಂತ್ರಿ, 99 ಸಂಸತ್ತಿನ ಸದಸ್ಯರು, 124 ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, 148 ಕಂಟ್ರೋಲರ್ ಮತ್ತು ಆಡಿಟರ್ ಜನರಲ್, 164 ರಾಜ್ಯ ಸರ್ಕಾರ ಮಂತ್ರಿಗಳು, 188 ರಾಜ್ಯ ಸರ್ಕಾರ ಸದಸ್ಯರು, 219 ಉಚ್ಛ ನ್ಯಾಯಾಲಯಗಳ ನ್ಯಾಯಾಧೀಶರುಗಳ ಪ್ರಮಾಣವಚನ
ಅನುಸೂಚಿ 4. ವಿಧಿ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 80 ರಾಜ್ಯಸಭೆಯ ರಚನೆ.
ಅನುಸೂಚಿ 5. ವಿಧಿ 244 ಅನುಸೂಚಿತ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳು
ಅನುಸೂಚಿ 6. ವಿಧಿ 244 ಮೇಘಾಲಯ, ಅಸ್ಸಾಂ, ಮಿಝೋರಾಂ ಮತ್ತು ತ್ರಿಪುರಾ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳು, 275 ಕೇಂದ್ರ ಸರ್ಕಾರದಿಂದ ಕೆಲವು ರಾಜ್ಯಗಳಿಗೆ ಅನುದಾನಗಳು
ಅನುಸೂಚಿ 7. ವಿಧಿ 246 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ
ಅನುಸೂಚಿ 8. ವಿಧಿ 344 ಭಾರತದ ಅಧಿಕೃತ ಭಾಷೆಗಳು, 351 ಹಿಂದಿ ಭಾಷೆ
ಅನುಸೂಚಿ 9. ವಿಧಿ 31 (B) ಭೂ ಸುಧಾರಣೆ ಮತ್ತು ಜಮೀನ್ದಾರಿ ಪದ್ಧತಿ ನಿರ್ಮೂಲನೆ ಅಧಿನಿಯಮಗಳು
ಅನುಸೂಚಿ 10. ವಿಧಿ 102 ಮತ್ತು 191 ಪಕ್ಷಾಂತರ ನಿಷೇಧ ಕಾಯ್ದೆ
ಅನುಸೂಚಿ 11. 243 (G) ಪಂಚಾಯತ್ ರಾಜ್ ಅಧಿಕಾರ ಮತ್ತು ಕಾರ್ಯಗಳು
ಅನುಸೂಚಿ 12. 243 (W) ಪೌರ ಸಭೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು
ಸಂವಿಧಾನದ ಪ್ರಮುಖ ತಿದ್ದುಪಡಿಗಳು
1ನೇ ತಿದ್ದುಪಡಿ (1951) - 9ನೇ ಅನುಸೂಚಿ ಸೇರ್ಪಡೆ
4ನೇ ತಿದ್ದುಪಡಿ (1955) - ಆಸ್ತಿಹಕ್ಕಿಗೆ ಸಂಬಂಧಿಸಿದ್ದು, 31, 31ಎ ಮತ್ತು 305ನೇ ವಿಧಿಗಳನ್ನು ಮತ್ತು 9ನೇ ಅನುಸೂಚಿಯನ್ನು ತಿದ್ದುಪಡಿ ಮಾಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಆಸ್ತಿಯನ್ನು ವಶಪಡಿಸಿಕೊಂಡು, ಸರಕಾರ ನೀಡುವ ಪರಿಹಾರವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಕೂಡದು.
5ನೇ ತಿದ್ದುಪಡಿ (1955) – ಅಂತರರಾಜ್ಯ ಮಾರಾಟಗಳ ತೆರಿಗೆಯನ್ನು ಕೇಂದ್ರ ಪಟ್ಟಿಗೆ ಸೇರಿಸಲಾಯಿತು.
7ನೇ ತಿದ್ದುಪಡಿ (1956) - 350 (ಬಿ) ವಿಧಿ ಸೇರ್ಪಡೆ ಹಾಗೂ ಶ್ರೇಷ್ಠ ಮತ್ತು ಸರ್ವೊಚ್ಚ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯ ಕುರಿತ ತಿದ್ದುಪಡಿ.
11ನೇ ತಿದ್ದುಪಡಿ - ಸಂಸತ್ತಿನ ಎರಡು ಸಧನಗಳ ಸದಸ್ಯರು ಉಪರಾಷ್ಟ್ರಪತಿಯನ್ನು ಚುನಾಯಿಸಬೇಕೆಂಬ ನಿಯಮ ಜಾರಿ
16ನೇ ತಿದ್ದುಪಡಿ – ವಾಕ್ ಸ್ವಾತಂತ್ರ್ಯದ ಮೇಲೆ ಕೆಲ ನಿರ್ಬಂಧ ಹೇರುವ ಅಧಿಕಾರ ಸಂಸತ್ತಿಗೆ ನೀಡಲಾಯಿತು.
19ನೇ ತಿದ್ದುಪಡಿ – ಚುನಾವಣಾ ನ್ಯಾಯಮಂಡಳಿಗಳ ರದ್ಧತಿ ಮತ್ತು ಚುನಾವಣಾ ಸಂಬಂಧಿತ ವಿವಾದದಗಳನ್ನು ಬಗೆಹರಿಸುವ ಅಧಿಕಾರ ಶ್ರೇಷ್ಟ ನ್ಯಾಯಾಲಯಗಳ ವ್ಯಾಪ್ತಿಗೆ ಹಸ್ತಾಂತರ.
24ನೇ ತಿದ್ದುಪಡಿ (1971) - ಗೋಲಖನಾಥ ವಿರುದ್ಧ ಪಂಜಾಬ್ ಮೊಕದ್ದಮೆ. ಸಂಸತ್ತಿಗೆ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ.
26ನೇ ತಿದ್ದುಪಡಿ (1971) - ರಾಜಮಹಾರಾಜರಿಗೆ ನೀಡುತ್ತಿದ್ದ ರಾಜಧನ ಮತ್ತು ಇತರ ಸೌಲಭ್ಯಗಳ ರದ್ಧತಿ
31ನೇ ತಿದ್ದುಪಡಿ (1973) - ಲೋಕಸಭಾ ಸದಸ್ಯರ ಸಂಖ್ಯೆ 525 ರಿಂದ 545 ಕ್ಕೆ ಏರಿಸಲಾಯಿತು.
38ನೇ ತಿದ್ದುಪಡಿ (1975) - ರಾಷ್ಟ್ರಾಧ್ಯಕ್ಷರ ಮತ್ತು ರಾಜ್ಯಪಾಲರ ಸುಗ್ರೀವಾಜ್ಞೆಗಳನ್ನು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನಿಸದಂತೆ ತಿದ್ದುಪಡಿ ಮಾಡಲಾಯಿತು.
42ನೇ ತಿದ್ದುಪಡಿ (1976) - ಇದನ್ನು ಪುಟ್ಟ ಸಂವಿಧಾನ ಎನ್ನುವರು. ಈ ತಿದ್ದುಪಡಿಯನ್ನು ಸ್ವರ್ಣಸಿಂಗ್ ಕಮಿಟಿಯ ಶಿಫಾರಸ್ಸಿನ ಆಧಾರದ ಮೇರೆಗೆ ಮಾಡಲಾಗಿದೆ. 42 ನೇ ತಿದ್ದುಪಡಿಯಲ್ಲಿ ಒಟ್ಟು 14 ವಿಷಯಗಳನ್ನು ತಿದ್ದುಪಡಿ ಮಾಡಲಾಯಿತು.
ಸಂವಿಧಾನದ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಮತ್ತು ಸಮಗ್ರತೆ ಎಂಬ ಪರಿಕಲ್ಪನೆಗಳನ್ನು ಸೇರಿಸಲಾಯಿತು.
ಮೂಲಭೂತ ಕರ್ತವ್ಯಗಳನ್ನು ಭಾಗ-4 ಎ ರಲ್ಲಿ ಸೇರಿಸಲಾಯಿತು.
ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಭಾರತ ಭೂ ಪ್ರದೇಶದ ಒಂದು ಭಾಗಕ್ಕೆ ಘೋಷಿಸಲು ಅವಕಾಶ.
ರಾಜ್ಯಪಟ್ಟಿಯಲ್ಲಿನ 5 ವಿಷಯಗಳನ್ನು (ಶಿಕ್ಷಣ, ಅರಣ್ಯ, ವನ್ಯಮೃಗ ಮತ್ತು ಪಕ್ಷಿಗಳ ರಕ್ಷಣೆ, ತೂಕ ಮತು ಅಳತೆ ಹಾಗೂ ನ್ಯಾಯ ವಿತರಣೆ ಮತ್ತು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳನ್ನು ಹೊರತುಪಡೆಸಿ ಎಲ್ಲಾ ನ್ಯಾಯಾಲಯಗಳ ರಚನೆ ಮತ್ತು ಸಂಘಟನೆ) ಸಮವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು.
ಅಖಿಲ ಭಾರತ ನ್ಯಾಯಾಂಗ ಸೇವೆ ಸ್ಥಾಪಿಸಲಾಯಿತು.
44ನೇ ತಿದ್ದುಪಡಿ (1978)
ಮಂತ್ರಿ ಮಂಡಲದ ಸಲಹೆಯನ್ನು ಪುನಃ ಪರೀಶಿಲಿಸುವಂತೆ ರಾಷ್ಟ್ರಪತಿಯವರು ಕ್ಯಾಬಿನೆಟ್ ಗೆ ವಾಪಸು ಕಳಿಸುವ ಅಧಿಕಾರ ನೀಡಲಾಯಿತು. ಆದರೆ ಪುನಃ ಪರೀಶೀಲಿಸದ ಸಲಹೆಯ ಪ್ರಕಾರ ರಾಷ್ಟ್ರಪತಿ ನಡೆಯುವುದು ಕಡ್ಡಾಯಗೊಳಿಸಲಾಗಿದೆ.
ಕೇವಲ ಸಚಿವ ಸಂಪುಟದ ಲಿಖಿತ ಶಿಫಾರಸ್ಸಿನ ಮೇರೆಗೆ ಮಾತ್ರ ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿ ಘೋಷಿಸುವಂತೆ ಮಾಡಲಾಯಿತು.
ಕ್ಯಾಬಿನೆಟ್ ಎನ್ನುವ ಪದವನ್ನು ಮೊದಲ ಬಾರಿಗೆ ಸಂವಿಧಾನದ 352ನೇ ವಿಧಿಗೆ ಸೇರಿಸಲಾಯಿತು. ಆಸ್ತಿ ಹಕ್ಕು ಮೂಲಭೂತ ಹಕ್ಕುಗಳ ಪಟಿಯಿಂದ ತೆಗೆಯಲ್ಪಟ್ಟು ಕೇವಲ ಶಾಸನೀಯ ಹಕ್ಕಾಯಿತು.
ಸಂವಿಧಾನದ 20 ಮತ್ತು 21ನೇ ಪರಿಚ್ಛೇದಗಳು ನೀಡಿರುವ ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಸಹ ಅಮಾನತುಗೊಳಿಸುವಂತಿಲ್ಲ.
52ನೇ ತಿದ್ದುಪಡಿ (1985) - ಪಕ್ಷಾಂತರದಲ್ಲಿ ತೊಡಗುವ ಸಂಸತ್ತು ಮತ್ತು ಶಾಸನ ಸಭೆಗಳ ಸದಸ್ಯರ ಸದಸ್ಯತ್ವ ರದ್ಧುಗೊಳಿಸುವ ಅಧಿಕಾರ.
61ನೇ ತಿದ್ದುಪಡಿ (1989) - 326ನೇ ವಿಧಿಗೆ ತಿದ್ದು ಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.
86ನೇ ತಿದ್ದುಪಡಿ (2002) – 21 ಎ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು.
89ನೇ ತಿದ್ದಪಡಿ (2003) - ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಪ್ರತ್ಯೇಕ ಆಯೋಗಗಳ ರಚನೆ
91ನೇ ತಿದ್ದುಪಡಿ (2003) – ಕೇಂದ್ರ ಮಂತ್ರಿಮಂಡಲವು ಲೋಕಸಭೆಯ ಮತ್ತು ರಾಜ್ಯ ಮಂತ್ರಿಮಂಡಲವು ವಿಧಾನಸಭೆಯ 15% ರಷ್ಟನ್ನು ಮೀರಬಾರದೆಂದು ನಿಯಮ ಮಾಡಿತು
101ನೇ ತಿದ್ದುಪಡಿ (2016) – ಜಿ.ಎಸ್.ಟಿ ತೆರಿಗೆ ಜಾರಿ
102ನೇ ತಿದ್ದುಪಡಿ (2018) - ಹಿಂದುಳಿದ ವರ್ಗದವರಿಗಾಗಿ ರಾಷ್ಟೀಯ ಸಮಿತಿ
103ನೇ ತಿದ್ದುಪಡಿ (2019) - ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ
104ನೇ ತಿದ್ದುಪಡಿ (2020) - ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಆಂಗ್ಲೋ ಇಂಡಿಯನ್ ಸ್ಥಾನ ರದ್ದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ